ಶಿವಮೊಗ್ಗದ ಮಹಿಳೆಯರೆ ಹುಷಾರ್, ಮನೆಯಲ್ಲಿ ಒಬ್ಬರೆ ಇದ್ದಾಗ ನುಗ್ಗಬಹುದು ಇಂತಹ ಖದೀಮರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಮನೆಯೊಂದಕ್ಕೆ ನುಗ್ಗಿ ಒಂಟಿ ಮಹಿಳೆಯ ಬಾಯಿ ಮುಚ್ಚಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರ (GOLD CHAIN) ಕಿತ್ತುಕೊಳ್ಳಲು ಯತ್ನಿಸಲಾಗಿದೆ. ಕಳ್ಳರಿಂದ ತಪ್ಪಿಸಿಕೊಂಡು ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಟಿವಿ ಟೇಬಲ್ ಮೇಲೆ ಇಟ್ಟಿದ್ದ ಚಿನ್ನದ ಸರವೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ.

Shimoga Nanjappa Hospital

ಶಿವಮೊಗ್ಗದ ಜಯನಗರ ಬಡಾವಣೆಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಚಂದ್ರಕಲಾ ಎಂಬುವವರು ಮನೆಯಲ್ಲಿ ಒಬ್ಬರೆ ಇದ್ದ ವೇಳೆ ಘಟನೆ ಸಂಭವಿಸಿದೆ.

‘ಮನೆ ಖಾಲಿ ಇದೆಯಾ?’

ಪತಿ ಬೆಂಗಳೂರಿಗೆ ತೆರಳಿದ್ದರಿಂದ ಚಂದ್ರಕಲಾ ಒಬ್ಬರೆ ಮನೆಯಲ್ಲಿದ್ದರು. ಸೆ.9ರಂದು ಬುರ್ಖಾ ಧರಿಸಿದ್ದ ಮಹಿಳೆ ಮತ್ತು ಪುರುಷ ಇವರ ಮನೆ ಬಳಿ ಬಂದು, ‘ಮನೆ ಖಾಲಿ ಇದೆಯಾ’ ಎಂದು ವಿಚಾರಿಸಿದ್ದರು. ‘ಕೆಳಗಿನ ಮನೆ ಖಾಲಿ ಇದೆ. ಮನೆ ಮಾಲೀಕರನ್ನು ವಿಚಾರಿಸಿ’ ಎಂದು ಚಂದ್ರಕಲಾ ಅವರು ತಿಳಿಸಿದ್ದರು.

ಸೆ.10ರಂದು ಸಂಜೆ 6 ಗಂಟೆಗೆ ಮಹಿಳೆ ಮತ್ತು ಪುರುಷ ಪುನಃ ಚಂದ್ರಕಲಾ ಅವರ ಮನೆ ಬಳಿ ಬಂದಿದ್ದು, ಬಾಗಿಲು ತೆಗೆದಿತ್ತು. ‘ನಿಮ್ಮ ಯಜಮಾನರು ಮನೆಯಲ್ಲಿದ್ದಾರಾ’ ಎಂದು ಕೇಳಿದ್ದಾರೆ. ಚಂದ್ರಕಲಾ ಅವರು ಇಲ್ಲ ಎಂದು ತಿಳಿಸುತ್ತಿದ್ದಂತೆ ಇಬ್ಬರು ಮನೆಯೊಳಗೆ ನುಗ್ಗಿದ್ದಾರೆ. ಬುರ್ಖಾ ಧರಿಸಿದ್ದ ಮಹಿಳೆ ಚಂದ್ರಕಲಾ ಅವರ ಬಾಯಿ ಮುಚ್ಚಿ ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ಪುರುಷನು ಚಂದ್ರಕಲಾ ಅವರ ಕೊರಳಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ.

ಇಬ್ಬರಿಂದ ಬಿಡಿಸಿಕೊಂಡ ಚಂದ್ರಕಲಾ, ಪುರುಷನ ಕೈ ಕಚ್ಚಿ, ಜೋರಾಗಿ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಬರಬಹುದು ಎಂಬ ಆತಂಕದಲ್ಲಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಈ ವೇಳೆ ಟಿವಿ ಟೇಬಲ್ ಮೇಲಿಟ್ಟಿದ್ದ 21 ಗ್ರಾಂ ತೂಕದ ಬಂಗಾರದ ಸರವನ್ನು ಕದ್ದುಕೊಂಡು (GOLD CHAIN) ಹೋಗಿದ್ದಾರೆ. ಇದರ ಮೌಲ್ಯ 1.20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಘಟನೆ ಸಂಬಂಧ ಚಂದ್ರಕಲಾ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆಯಲ್ಲಿ ತಪ್ಪಿದ ದುರಂತ, ಆಗಿದ್ದೇನು?

Sarji Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 12, 2022

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

Leave a Comment