KSRTC ಬಸ್‌ನಲ್ಲಿ ಪತಿಗೆ ಬಿ.ಪಿ ಮಾತ್ರೆ ಕೊಡಲು ವ್ಯಾನಿಟಿ ಬ್ಯಾಗ್‌ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 DECEMBER 2023

SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ವ್ಯಾನಿಟಿ ಬ್ಯಾಗ್‌ನಿಂದ ನಗದು, ಚಿನ್ನಾಭರಣ ಕಳ್ಳತನ ಪ್ರಕರಣ ಮುಂದುವರೆದಿದೆ. ನಗರದ ಮಂಜುನಾಥ ಟಾಕೀಸ್‌ ಸಮೀಪದ ನಿವಾಸಿ ರೇಖಾ ಭಟ್‌ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ನೆಕ್ಲೇಸ್‌ ಮತ್ತು 500 ರೂ. ನಗದು ಕಳ್ಳತನ ಮಾಡಲಾಗಿದೆ.

ಸಾಗರದಲ್ಲಿ ಸಂಬಂಧಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಲು ರೇಖಾ ಭಟ್‌ ತಮ್ಮ ಪತಿಯೊಂದಿಗೆ ತೆರಳುತ್ತಿದ್ದರು. KSRTC ಬಸ್‌ ನಿಲ್ದಾಣದಲ್ಲಿ ಡಿ.7ರಂದು ಬೆಳಗ್ಗೆ 9.30ರ ಹೊತ್ತಿಗೆ ಶಿವಮೊಗ್ಗ – ಸಾಗರ ಬಸ್‌ ಹತ್ತಿದ್ದರು. ಬಸ್ಸು ಕುಂಸಿ ಸಮೀಪ ತೆರಳಿದ್ದಾಗ ಪತಿಗೆ ಬಿ.ಪಿ ಮಾತ್ರೆ ಕೊಡಲೆಂದು ವ್ಯಾನಿಟಿ ಬ್ಯಾಗ್‌ನತ್ತ ಕಣ್ಣು ಹೊರಳಿಸಿದಾಗ ಜಿಪ್‌ ತೆಗೆದಿರುವುದು ಗೊತ್ತಾಗಿದೆ. ಬ್ಯಾಗ್‌ನಲ್ಲಿದ್ದ ಪರ್ಸ್‌ ನಾಪತ್ತೆಯಾಗಿತ್ತು. ಅದರಲ್ಲಿ 50 ಸಾವಿರ ರೂ. ಮೌಲ್ಯದ ನೆಕ್ಲೇಸ್‌ ಮತ್ತು 500 ರೂ. ನಗದು ಇತ್ತು.

ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ ಹತ್ತುವ ಸಂದರ್ಭ ತಮ್ಮ ವ್ಯಾನಿಟಿ ಬ್ಯಾಗ್‌ ಜಿಪ್‌ ತೆಗೆದು ನೆಕ್ಲೇಸ್‌ ಮತ್ತು ಹಣವಿದ್ದ ಪರ್ಸ್‌ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ರೇಖಾ ಭಟ್‌ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment