ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಆಗಸ್ಟ್ 2020
ಗೌರಿ ಮತ್ತು ಗಣೇಶ ಚತುರ್ಥಿ ಹಿನ್ನೆಲೆ ಶಿವಮೊಗ್ಗದಲ್ಲಿ ಹೂವು, ಹಣ್ಣು, ಪೂಜಾ ಸಾಮಾಗ್ರಿ ಖರೀದಿ ಜೋರಿದೆ. ಕರೋನ ಲಾಕ್‍ಡೌನ್ ಬಳಿಕ ಹಿಂದೂಗಳ ಪಾಲಿಗೆ ಇದು ದೊಡ್ಡ ಹಬ್ಬವಾಗಿದೆ. ಹಾಗಾಗಿ ಖರೀದಿ ಭರಾಟೆ ಜೋರಿದೆ.
ಗಾಂಧಿ ಬಜಾರ್‍ನಲ್ಲಿ ಜನವೋ ಜನ
ಗಾಂಧಿ ಬಜಾರ್‍ನ ತರಕಾರಿ ಮಾರುಕಟ್ಟೆಯಲ್ಲಿ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಯಲ್ಲೂ ಖರೀದಿ ಜೋರಿದೆ. ಗೌರಿ ಪೂಜೆಗೆ ಬೇಕಾದ ಪೂಜಾ ಸಾಮಾಗ್ರಿ ಬಿರುಸಾಗಿದೆ.

ಹೂವು, ಹಣ್ಣು, ಬಾಳೆಕಂಬ
ಶಿವಪ್ಪನಾಯಕ ಹೂವು ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಳೆಕಂಬ ಸೇರಿದಂತೆ ಪೂಜಾ ಸಾಮಾಗ್ರಿ ಖರೀದಿ ನಡೆಯುತ್ತಿದೆ. ಮಹಾನಗರ ಪಾಲಿಕೆ ಪಕ್ಕದ ರಸ್ತೆಯಲ್ಲಿ ವ್ಯಾಪಾರಿಗಳು ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ವ್ಯಾಪಾರ ಬಿರುಸಾಗಿ ನಡೆಯುತ್ತಿದೆ.
ನಗರದ ವಿವಿಧೆಡೆ ಹಬ್ಬದ ಸಡಗರ
ಶಿವಮೊಗ್ಗ ನಗರದ ವಿವಿಧೆಡೆ ಹಬ್ಬದ ಸಡಗರ ಜೋರಾಗಿದೆ. ವಿನೋಬನಗರ ಎಪಿಎಂಸಿ ಮಾರುಕಟ್ಟೆ, ಲಕ್ಷ್ಮೀ ಟಾಕೀಸ್ ಬಳಿ, ಗೋಪಾಳ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿ ಬಿರುಸಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು
















