ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 MARCH 2021
ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಇರುವ ಮೇಲ್ಸೇತುವೆ ಮೇಲೆ ಭಾರಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಸೇತುವೆ ಮೇಲೆ ಒನ್ ಸೈಡ್ ಮಾತ್ರ ವಾಹನ ಸಂಚಾರ, ದಿಢೀರ್ ಬಂದ್‌ಗೆ ಕಾರಣವೇನು?
ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಇರುವ ಮೇಲ್ಸೇತುವೆ ಮೇಲೆ ರಿಪೇರಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸೇತುವೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ, ಲಘು ವಾಹನಗಳನ್ನು ಮಾತ್ರ ಸೇತುವೆ ಮೇಲೆ ಬಿಡಲಾಗುತ್ತಿದೆ.
30 ದಿನ ಇದೇ ರೀತಿ ಇರುತ್ತೆ
ರಿಪೇರಿ ಕಾರ್ಯದ ಹಿನ್ನೆಲೆ, 30 ದಿನ ಮೇಲ್ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇನ್ನು, ಭಾರಿ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸವಳಂಗ-ಹೊನ್ನಾಳಿ (ರಾ.ಹೆ.57) ರಸ್ತೆಯ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.
ಬದಲಿ ಮಾರ್ಗ ಯಾವುದು?
ಹೊಸಪೇಟೆ-ಶಿವಮೊಗ್ಗ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಶಿವಮೊಗ್ಗದಿಂದ -ಹೊಳಲೂರು-ಹೊನ್ನಾಳಿಗೆ ಸಂಚರಿಸುವ ಲಘುವಾಹನಗಳು ಸವಳಂಗ ರಸ್ತೆ-ಕುವೆಂಪು ನಗರ ಕ್ರಾಸ್ – ರಾಗಿ ಗುಡ್ಡದ ಮೂಲಕ ರಾಜ್ಯ ಹೆದ್ದಾರಿ-25ಕ್ಕೆ ತಲುಪಬಹುದು.
ಶಿವಮೊಗ್ಗದಿಂದ ಹೊಳಲೂರಿಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ – ಅಬ್ಬಲಗೆರೆ – ಕೊಮ್ಮನಾಳ – ಸೊಮಿನಕೊಪ್ಪ – ಹರಮಘಟ್ಟ – ಹೊಳಲೂರು ಮಾರ್ಗವಾಗಿ ಸಂಚರಿಸಬೇಕು.
ಶಿವಮೊಗ್ಗದಿಂದ – ಹೊನ್ನಾಳಿ – ಹರಿಹರ ಕಡೆಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ – ಸವಳಂಗ – ನ್ಯಾ ಮತಿ ಮೂಲಕ ಹೊನ್ನಾಳಿಗೆ ಸಂಚರಿಸಬೇಕು.
ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳಿಗೆ ಮಾತ್ರ ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422