ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |1 JANUARY 2023
ಶಿವಮೊಗ್ಗ : ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಶಿವಮೊಗ್ಗದಲ್ಲಿ ಭಾರಿ ವಾಹನಗಳು (heavy vehicles) ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ಈ ವಾಹನಗಳು ನಗರದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ.
ನಗರದ 19 ರಸ್ತೆಗಳಲ್ಲಿ ಭಾರಿ ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಮಯ ನಿಗದಿ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಯಾವೆಲ್ಲ ಸಮಯದಲ್ಲಿ ಯಾವೆಲ್ಲ ಬಗೆಯ ವಾಹನಗಳ ನಿಷೇಧವಿದೆ ಅನ್ನುವುದರ ವಿವರ ಇಲ್ಲಿದೆ.
(heavy vehicles)
ಯಾವೆಲ್ಲ ರಸ್ತೆ? ಟೈಮಿಂಗ್ ಏನು?
ರಸ್ತೆ 1 : ಇಮಾಮ್ ಬಾಡಾದಿಂದ ಸೀಗೆಹಟ್ಟಿ, ಬಿ.ಬಿ.ಸ್ಟ್ರೀಟ್, ಆರ್.ಎಸ್. ಪಾರ್ಕ್, ಕೋಟೆ ರಸ್ತೆ ಮೂಲಕ ಬೆಕ್ಕಿನ ಕಲ್ಮಠ ಸರ್ಕಲ್ ವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನಿಷೇಧ.
ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ
ರಸ್ತೆ 2 : ಕುವೆಂಪು ರಸ್ತೆ ನಂದಿ ಪೆಟ್ರೋಲ್ ಬಂಕ್ ನಿಂದ ವಿನೋಬನಗರ ಪೊಲೀಸ್ ಚೌಕಿವರೆಗೆ (ವೀರ ರಾಣಿ ಕೆಳದಿ ಚನ್ನಮ್ಮ ರಸ್ತೆವರೆಗೆ) ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನಿಷೇಧ.
ರಸ್ತೆ 3 : ಎನ್.ಟಿ.ರಸ್ತೆಯ ಸಂದೇಶ ಮೋಟರ್ಸ್ ಸರ್ಕಲ್ ನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹೆಲಿಪ್ಯಾಡ್ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಸಾಗರ ರಸ್ತೆಯ ಎಪಿಎಂಸಿ ಗೇಟ್ ವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನಿಷೇಧ.
ರಸ್ತೆ 4 : ಸವಳಂಗ ರಸ್ತೆಯಲ್ಲಿ ಮಹಾವೀರ ಸರ್ಕಲ್ ನಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್ ವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನಿಷೇಧ.
ರಸ್ತೆ 5 : ಬಾಲರಾಜ ಅರಸ್ ರಸ್ತೆಯಲ್ಲಿ ಮಹಾವೀರ ಸರ್ಕಲ್ ನಿಂದ ಕೆ.ಇ.ಬಿ ಸರ್ಕಲ್ ಸಿಗ್ನಲ್ ವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ನಿಷೇಧ.
ರಸ್ತೆ 6 : ಬಿ.ಹೆಚ್.ರಸ್ತೆಯಲ್ಲಿ ಅಮೀರ್ ಅಹಮದ್ ಸರ್ಕಲ್ ನಿಂದ ಕರ್ನಾಟಕ ಸಂಘ ಸರ್ಕಲ್ ಮಾರ್ಗವಾಗಿ ಶಂಕರ ಮಠ ಸರ್ಕಲ್ ವರೆಗೆ. ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11 ಗಂಟೆವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧ
(heavy vehicles)
ಸಮಯದಲ್ಲಿ ಬದಲಾವಣೆ
ಈ ಹಿಂದೆ ನಗರದ ವಿವಿಧೆಡೆ ಸರಕು ಸಾಗಣೆ ವಾಹನ ಮತ್ತು ಭಾರಿ ವಾಹನಗಳ ಸಂಚಾರ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಅಧಿಸೂಚನೆಯಲ್ಲಿದ್ದ ಸಮಯವನ್ನು ಬದಲಾವಣೆ ಮಾಡಿ, ಹೊಸ ಸಮಯ ನಿಗದಿಪಡಿಸಲಾಗಿದೆ. ಆ ರಸ್ತೆಗಳ ವಿವರ ಇಲ್ಲಿದೆ.
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ರಸ್ತೆ 7 : ಶಿವಮೊಗ್ಗದ ವೀರಶೈವ ಕಲ್ಯಾಣ ಮಂಟಪದಿಂದ ಗೋಪಿ ಸರ್ಕಲ್ ವರೆಗೆ ಈ ಹಿಂದೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧ.
ರಸ್ತೆ 8 : ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಿಂದ (ಸರ್.ಎಂ.ವಿ ರಸ್ತೆಯಿಂದ) ಮಹಾವೀರ ಸರ್ಕಲ್ ವರೆಗೆ ಈ ಹಿಂದೆ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧವಿರಲಿದೆ.
ರಸ್ತೆ 9 : ಚರ್ಚ್ ಸರ್ಕಲ್ ನಿಂದ ಮಹಾವೀರ ಸರ್ಕಲ್ ವರೆಗೆ ಮತ್ತು ಮಹಾವೀರ ಸರ್ಕಲ್ ನಿಂದ ಚರ್ಚ್ ಸರ್ಕಲ್ ವರೆಗೆ ಡಿವಿಎಸ್ ಸರ್ಕಲ್ ಮೂಲಕ ಹಾದು ಹೋಗುವ ರಸ್ತೆ. ಈ ಹಿಂದೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧವಿರಲಿದೆ.
ಇದನ್ನೂ ಓದಿ – ಶಿವಮೊಗ್ಗ ಡಿಸಿ, ಎಸ್ಪಿಗೆ ಮೀಟರ್ ಹಾಕದೆ, ಯದ್ವ ತದ್ವ ದುಡ್ಡು ಕೇಳಿದ ಆಟೋ ಚಾಲಕ, ಮುಂದೇನಾಯ್ತು?
ರಸ್ತೆ 10 : ಸರ್. ಎಂ.ವಿ. ರಸ್ತೆ ಮೂಲಕ ಡಿ.ವಿ.ಎಸ್ ಸರ್ಕಲ್ ಮೂಲಕ ಬಿ.ಹೆಚ್.ರಸ್ತೆಗೆ ಹೋಗು ಮಾರ್ಗ. ಈ ಹಿಂದೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನಗಳ ಸಂಚಾರ ನಿಷೇಧವಿರಲಿದೆ.
ರಸ್ತೆ 11 : ಮಹಾವೀರ ಸರ್ಕಲ್ ನಿಂದ ಗೋಪಿ ಸರ್ಕಲ್ ಮತ್ತು ಗೋಪಿ ಸರ್ಕಲ್ ನಿಂದ ಮಹಾವೀರ ಸರ್ಕಲ್ ವರೆಗೆ ಬಾಲರಾಜ ಅರಸ್ ರಸ್ತೆ. ಗೋಪಿ ಸರ್ಕಲ್ ನಿಂದ ಎ.ಎ.ಸರ್ಕಲ್ ವರೆಗೆ ಮತ್ತು ಎ.ಎ.ಸರ್ಕಲ್ ನಿಂದ ಗೋಪಿ ಸರ್ಕಲ್ ವರೆಗೆ. ಈ ಹಿಂದೆ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧವಿರಲಿದೆ.
ರಸ್ತೆ 12 : ಸರ್.ಎಂ.ವಿ ರಸ್ತೆಯ ಮಹಾವೀರ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ಮೂಲಕ ಬಿ.ಹೆಚ್.ರಸ್ತೆಯ ಸಂಪರ್ಕ ಕಲ್ಪಿಸುವ ರಸ್ತೆ. ಕಾನ್ವೆಂಟ್ ರಸ್ತೆ ಮತ್ತು ವೀರಭದ್ರೇಶ್ವರ ಚಿತ್ರಮಂದಿರ ರಸ್ತೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧ.
ರಸ್ತೆ 13 : ಕೆ.ಇ.ಬಿ ಸರ್ಕಲ್ ನಿಂದ ಸರ್ಕಾರಿ ನೌಕರರ ಭವನ ಬಡಾವಣೆ ರಸ್ತೆ ಸರಕು ಸಾಗಣೆ ವಾಹನ ನಿಷೇಧ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ.
ರಸ್ತೆ 14 : ಅಶೋಕ ಸರ್ಕಲ್ ನಿಂದ ಎ.ಎ. ವೃತ್ತದವರೆಗೆ ಈ ಹಿಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧವಿರಲಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ, ಏರಿಕೆಯಾಗಿದ್ದೆಷ್ಟು? ಈವರೆಗೂ ಇದ್ದಿದ್ದೆಷ್ಟು?
ರಸ್ತೆ 15 : ಹಳೆ ತೀರ್ಥಹಳ್ಳಿ ರಸ್ತೆಯ ಕೃಷಿ ಕಚೇರಿ ಕ್ರಾಸ್ ರಸ್ತೆಯಿಂದ ಎ.ಎ.ಸರ್ಕಲ್ ಸರ್ಕಲ್ ವರೆಗೆ ಈ ಹಿಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತು. ಇನ್ಮುಂದೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧ.
ರಸ್ತೆ 16 : ಕುವೆಂಪು ರಸ್ತೆಯಲ್ಲಿ ಈ ಹಿಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧವಿರಲಿದೆ.
ರಸ್ತೆ 17 : ಸವಾರ್ ಲೈನ್ ರಸ್ತೆಯ ಲಕ್ಷ್ಮೀ ಮೆಡಿಕಲ್ಸ್ ಕ್ರಾಸ್ ನಿಂದ ನೆಹರೂ ರಸ್ತೆಯವರೆಗೆ. ಗಾರ್ಡನ್ ಏರಿಯಾದ 1, 2, 3ನೇ ಕ್ರಾಸ್, ಬಿ.ಹೆಚ್.ರಸ್ತೆಯ ಗುಜರಿ ಅಂಗಡಿ ಕ್ರಾಸ್ ನಿಂದ ಶೃಂಗಾರ್ ಷೋ ರೂಂವರೆಗೆ ಈವರೆಗೂ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧವಿತ್ತು. ಇನ್ಮುಂದೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧವಿರಲಿದೆ.
ಇದನ್ನೂ ಓದಿ – ಶಿವಮೊಗ್ಗದ ಖಾಸಗಿ ಬಸ್ ಮಾಲೀಕರಿಗೆ ಪೊಲೀಸರಿಂದ 8 ಖಡಕ್ ಸೂಚನೆ, ತಪ್ಪಿದರೆ ಕ್ರಮದ ಎಚ್ಚರಿಕೆ
ರಸ್ತೆ 18 : ವಿನೋಬನಗರ ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಕಡೆಗೆ ಹೋಗುವ ರಸ್ತೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸರಕು ಸಾಗಣೆ ವಾಹನ ನಿಷೇಧ.
ರಸ್ತೆ 19 : ವಿನೋಬನಗರ ಮೊದಲ ಹಂತ 6ನೇ ತಿರುವಿನಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422