SHIVAMOGGA LIVE NEWS | 26 DECEMBER 2022
ಶಿವಮೊಗ್ಗ : ಹಿಂದೂ ಜಾಗರಣ ವೇದಿಕೆಯ 3ನೆ ತ್ರೈಮಾಸಿಕ ಪ್ರಾಂತೀಯ ಸಮ್ಮೇಳನದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಶೋಭಾ ಯಾತ್ರೆ (shobhayatre) ನಡೆಸಲಾಯಿತು. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಾರ್ಯಕರ್ತರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು.
ನಗರದ ಎನ್.ಇ.ಎಸ್. ಮೈದಾನದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಇಲ್ಲಿಂದ ಶೋಭಾ ಯಾತ್ರೆ (shobhayatre) ಆರಂಭಿಸಲಾಯಿತು. ಡಿವಿಎಸ್ ಕಾಲೇಜು ಸರ್ಕಲ್ ಮೂಲಕ ಮೆರವಣಿಗೆ ಸಾಗಿತು.
ಕೃಷ್ಣ ಕೆಫೆ, ಸಾವರ್ಕರ್ ನಗರ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ಸರ್ಕಲ್ ಮೂಲಕ ಶೋಭಾ ಯಾತ್ರೆಯು ಎನ್.ಇ.ಎಸ್. ಮೈದಾನ ತಲುಪಿತು.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತೆಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತ, ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಶೋಭಾಯಾತ್ರೆಯ ಹಾದಿ ಉದ್ದಕ್ಕು ಯುವಕರು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಸಾಗಿದರು. ಅಲ್ಲಲ್ಲಿ ರಸ್ತೆಯಲ್ಲಿ ನಿಂತು ಕೇಸರಿ ಧ್ವಜವನ್ನು ತಿರುಗಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾಧ್ವಿ ಗುಡುಗು, ಸಮ್ಮೇಳನದಲ್ಲಿ ಪ್ರಜ್ಞಾ ಸಿಂಗ್ ಭಾಷಣದ ಟಾಪ್ 12 ಪಾಯಿಂಟ್
ಶೋಭಾ ಯಾತ್ರೆ ಸಾಗುವ ಮಾರ್ಗದುದ್ದಕ್ಕು ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶೋಭಾ ಯಾತ್ರೆಯ ಮಾರ್ಗದುದ್ದಕ್ಕು ಇದ್ದ ಅಂಗಡಿಗಳನ್ನು ಯಾತ್ರೆ ತೆರಳುವವರೆಗೆ ಬಂದ್ ಮಾಡಿಸಲಾಗಿತ್ತು.
ಎಎ ವೃತ್ತದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹಿಂದೂ ಮಹಾಸಭಾ ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭ ಅರ್ಧ ಸರ್ಕಲ್ ಬಂದ್ ಮಾಡಿದಂತೆಯೇ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ರಸ್ತೆಯ ಎರಡು ಬದಿಯಲ್ಲಿ ಜನರು ನಿಂತು ಶೋಭಾಯತ್ರೆಯಲ್ಲಿ ಕಣ್ತುಂಬಿಕೊಂಡರು. ಕೆಲವೆಡೆ ಶೋಭಾ ಯಾತ್ರೆಯ ಪಾಲ್ಗೊಂಡವರ ಮೇಲೆ ಹೂವುಗಳನ್ನು ಎರಚಿ ಜನರು ಬಂಬೆಲ ಸೂಚಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಹಿಂದೂ ಹರ್ಷ ಮನೆಗೆ ಸಾಧ್ವಿ ಪ್ರಜ್ಞಾ ಸಿಂಗ್, ಫೇಸ್ ಬುಕ್ ಮೂಲಕ ಲೈವ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200