ಶಿವಮೊಗ್ಗದಲ್ಲಿ ಟೈರ್‌ ಸ್ಪೋಟ, ಸಿಟಿ ಬಸ್ಸಿನಲ್ಲಿ ಗುಂಡಿಯಾಗಿ ಕೆಳಗೆ ಬಿದ್ದ ಬಾಲಕಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 31 MARCH 2024

SHIMOGA : ಟೈರ್‌ ಸ್ಪೋಟಗೊಂಡು ಸಿಟಿ ಬಸ್ಸಿನಿಂದ ಬಾಲಕಿಯೊಬ್ಬಳು ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ. ಕೂಡಲೆ ಬಾಲಕಿಯನ್ನು ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಸಿಟಿ ಬಸ್ಸಿನ ಟೈರ್‌ ಸ್ಪೋಟದ ರಭಸಕ್ಕೆ ಬಸ್ಸಿನ ಒಳಗೆ ರಂದ್ರವಾಗಿದೆ. ಚಾಲಕನ ಹಿಂಬದಿ ಸೀಟಿನಲ್ಲಿದ್ದ ಬಾಲಕಿ ರಂದ್ರದೊಳಗಿನಿಂದ ರಸ್ತೆಗೆ ಬಿದ್ದಿದ್ದಾಳೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ನೆಹರೂ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್‌ ಬಾಲಕಿಯ ಪ್ರಾಣ ಉಳಿದಿದೆ. ಬಸ್ಸಿನ ಸಿಬ್ಬಂದಿ, ಪ್ರಯಾಣಿಕರು ಮತ್ತು ಸಾರ್ವಜನಿಕರ ನೆರವಿನಿಂದ ಬಾಲಕಿಯನ್ನು ಕೂಡಲೆ ಆಟೋದಲ್ಲಿ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ.

ಬಸ್ಸು ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ತೆರಳುತ್ತಿತ್ತು. ಘಟನೆಯಿಂದಾಗಿ ನೆಹರೂ ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Shimoga City bus

PHOTO : ಗಾಯಾಳು ಬಾಲಕಿಯನ್ನು ಆಟೋದಲ್ಲಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಯಿತು.

Shimoga City bus

PHOTO : ಟೈರ್‌ ಸ್ಪೋಟದ ಬಳಿಕ ನೆಹರು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್

ಇದನ್ನೂ ಓದಿ – ಜಾತ್ರೆಯಲ್ಲಿ ಪೊಲೀಸ್‌ ಸಿಬ್ಬಂದಿ ಕೊರಳ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆದ ಯುವಕರು

 

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment