ಟ್ರಾಫಿಕ್ ದಂಡ 50% DISCOUNT, ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಂಡ ಕಟ್ಟಬಹುದು? ಎಷ್ಟು ದಿನ ಟೈಮ್ ಇದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 3 FEBRUARY 2023

SHIMOGA : ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಸಿದರೆ ಶೇ.50ರಷ್ಟು ರಿಯಾಯಿತಿ (Fine Discount) ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಫೆ.11ರವರೆಗೆ ಈ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿಯು ಬಾಕಿ ಇರುವ ದಂಡ ಕಟ್ಟಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

TRAFFIC-POLICE-JEEP-GENERAL-IMAGE

ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಂಡ ಕಟ್ಟಬಹುದು?

ಕರ್ನಾಟಕ ಒನ್ ವೆಬ್ ಸೈಟ್ : ವಾಹನದ ನೋಂದಣಿ ಸಂಖ್ಯೆ / ನೊಟೀಸ್ ನಂಬರ್ ನಮೂದಿಸಿ ವಿವರ ಪಡೆದು ಬಾಕಿ ಇರುವ ದಂಡ ಪಾವತಿ ಮಾಡಬಹುದು.

ಶಿವಮೊಗ್ಗ ಒನ್ ಕೇಂದ್ರ : ಇಲ್ಲಿಯು ಬಾಕಿ ಇರುವ ದಂಡ ಪಾವತಿ ಮಾಡಬಹುದು.

ಪಶ್ಚಿಮ ಸಂಚಾರ ಠಾಣೆ : ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಠಾಣೆಯ ಮೊದಲನೆ ಮಹಡಿಯಲ್ಲಿ ಟ್ರಾಫಿಕ್ ಆಟೋಮೇಷನ್ ಸೆಂಟರ್ ನಲ್ಲಿ ವಾಹನದ ನೋಂದಣಿ ಸಂಖ್ಯೆ ವಿವರ ನೀಡಿ ದಂಡ ಕಟ್ಟಬಹುದು.

Shimoga-SP-Mithun-Kumar-with-Traffic-Signal

ಸಂಚಾರ ಠಾಣೆ : ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ವಾಹನದ ನೋಂದಣಿ ಸಂಖ್ಯೆ ನೀಡಿ ದಂಡ ಪಾವತಿ ಮಾಡಬಹುದು.

ಸಂಚಾರ ಪೊಲೀಸ್ :  ಕರ್ತವ್ಯ ನಿರತ ಸಂಚಾರ ಠಾಣೆ ಎಎಸ್ಐ, ಪಿಎಸ್ಐ, ಸಿಪಿಐ ಬಳಿ ಟ್ರಾಫಿಕ್ ಸ್ಪಾಟ್ ಫೈನ್ ಡಿವೈಸ್ ಗಳಲ್ಲಿ ಬಾಕಿ ದಂಡ ಪಾವತಿಸಲು ಅವಕಾಶವಿದೆ. ದಂಡ ಕಟ್ಟಿ ರಶೀದಿ ಪಡೆಯಬಹುದು.

ಇದನ್ನೂ ಓದಿ – ಟ್ರಾಫಿಕ್ ಬಾಕಿ ದಂಡ ಶೇ.50ರಷ್ಟು ರಿಯಾಯಿತಿ, ಯಾರಿಗೆ ಈ ನಿಯಮ ಅನ್ವಯ? ಇಲ್ಲಿದೆ ಡಿಟೇಲ್ಸ್

ಹೆಚ್ಚಿನ ಮಾಹಿತಿಗೆ ಪೂರ್ವ ಸಂಚಾರ ಪೊಲೀಸ್ ಠಾಣೆ ದೂ. 08182 240666, ಪಶ್ಚಿಮ ಸಂಚಾರ ಠಾಣೆ ದೂ. 08182 261417, ಭದ್ರಾವತಿ ಸಂಚಾರ ಠಾಣೆ 08181 276314 ಸಂಪರ್ಕಿಸಬಹುದು.

JANUARY-2023-REACH

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment