SHIVAMOGGA LIVE NEWS | 31 AUGUST 2023
SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಸೋಗಾನೆಯ ವಿಮಾನ ನಿಲ್ದಾಣಕ್ಕೆ (Shimoga Airport) ಇಂಡಿಗೋ ಎಟಿಆರ್ ಮೊದಲ ವಿಮಾನ ಲ್ಯಾಂಡ್ ಆಗಿದೆ. ಇದರ LIVE ರಿಪೋರ್ಟ್ ನಿಮ್ಮ ಶಿವಮೊಗ್ಗ ಲೈವ್ ವೆಬ್‌ಸೈಟ್ ನಿಮ್ಮ ಮುಂದಿಡುತ್ತಿದೆ. ಇದೇ ಸುದ್ದಿಯಲ್ಲಿ ಪ್ರತಿ ಬೆಳವಣಿಗೆಯ ಅಪ್‌ಡೇಟ್ ಸಿಗಲಿದೆ. ಆಗಾಗ ಈ ಪೇಜ್‌ನ REFRESH ಮಾಡಿ. ಹೊಸ ಅಪ್‌ಡೇಟ್ ಪಡೆಯಿರಿ.
![]() |
10.20 AM: ವಿಮಾನ ನಿಲ್ದಾಣದಲ್ಲಿ ಗಣ್ಯರು
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಬಸ್ಸಿನಲ್ಲಿ ಗಣ್ಯರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ.
10.23 AM:ವಿಮಾನದ ಮುಂದೆ ಫೋಟೊ ಸೆಷನ್
ಬೆಂಗಳೂರು : ಶಿವಮೊಗ್ಗಕ್ಕೆ ಹೊರಟ ಮೊದಲ ಇಂಡಿಗೋ ವಿಮಾನದ ಮುಂದೆ ಇಂಡಿಗೋ ಸಿಬ್ಬಂದಿ, ಪ್ರಯಾಣಿಕರು ಮತ್ತು ಗಣ್ಯರು.
10.35 AM: ವಿಮಾನ ನಿಲ್ದಾಣಕ್ಕೆ ಭದ್ರತೆ ಹೆಚ್ಚಳ
ಶಿವಮೊಗ್ಗ : ಸೋಗಾನೆ ವಿಮಾನ ನಿಲ್ದಾಣ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್. ಗೇಟ್ ಮುಂದೆ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಮೀಸಲು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಗಣ್ಯರು, ಆಹ್ವಾನಿತರು, ಅಧಿಕಾರಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
11.10 AM:ಟರ್ಮಿನಲ್‌ನಲ್ಲಿ ಹೈ ಸೆಕ್ಯೂರಿಟಿ
ಶಿವಮೊಗ್ಗ : ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶ ದ್ವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಒಳ ಪ್ರವೇಶಿಸುವ ಪ್ರತಿಯೊಬ್ಬರ ಬ್ಯಾಗ್ ತಪಾಸಣೆ, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಲಾಯಿತು.
11. 11 AM: ವೇದಿಕೆ ಕಾರ್ಯಕ್ರಮಕ್ಕೆ ಸಿದ್ದತೆ
ಶಿವಮೊಗ್ಗ : ವಿಮಾನ ನಿಲ್ದಾಣದ ಟರ್ಮಿನಲ್ ಒಳ ಭಾಗದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ದತೆ.
11.19 AM ಶಿವಮೊಗ್ಗಕ್ಕೆ ಬಂದ ವಿಮಾನ
ಶಿವಮೊಗ್ಗ : ಸೋಗಾನೆಯಲ್ಲಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ಎಟಿಆರ್ ವಿಮಾನ.
11.50 AM: ರೈತರಿಗೆ ಸನ್ಮಾನ, ವೆಬ್‌ಸೈಟ್ ಅನಾವರಣ
ಶಿವಮೊಗ್ಗ : ವಿಮಾನ ನಿಲ್ದಾಣದ ವೆಬ್‌ಸೈಟ್ ಅನಾವರಣ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಬಳಿಕ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರನ್ನು ಸನ್ಮಾನಿಸಿದರು.
11.55 AM: ವಿಮಾನ ನಿಲ್ದಾಣಕ್ಕೆ ಜನವೋ ಜನ
ಶಿವಮೊಗ್ಗ : ವಿಮಾನ ಹಾರಾಟ ಕಣ್ತುಂಬಿಕೊಳ್ಳಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೊಡ್ಡ ಸಂಖ್ಯೆಯ ಜನರ ಆಗಮನ. ಕೊರ್ಲಹಳ್ಳಿ, ಕಾಚಿನಕಟ್ಟೆ, ಸಂತೆ ಕಡೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿದ್ದರು.
11.57: ರೈತರಿಗೆ ಸನ್ಮಾನದ ವಿಚಾರದಲ್ಲಿ ಗೊಂದಲ
ಶಿವಮೊಗ್ಗ : ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತರಿಗೆ ಸನ್ಮಾನದ ವೇಳೆ ಗೊಂದಲ. ಕೆಲವು ರೈತರನ್ನು ಮಾತ್ರ ವೇದಿಕೆ ಆಹ್ವಾನಿಸಿದ್ದಕ್ಕೆ ಉಳಿದವರ ಆಕ್ಷೇಪ. ಕೆಲ ಕ್ಷಣ ಗೊಂದಲ. ಕೊನೆಗೆ ಉಳಿದ ರೈತರನ್ನು ವೇದಿಕೆ ಆಹ್ವಾನಿಸಿದ ಮುಖಂಡರು.
12.15 PM: ಶಿವಮೊಗ್ಗದಿಂದ ವಿಮಾನ ಟೇಕಾಫ್
ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ ಎಟಿಆರ್ ವಿಮಾನ ಬೆಂಗಳೂರಿನತ್ತ ಹೊರಟಿತು. ವಿಮಾನ ನಿಲ್ದಾಣದಿಂದ 12.05ಕ್ಕೆ ಟೇಕಾಫ್ ಆಯಿತು. ವಿಮಾನ ಹಾರುವುದನ್ನು ಕಣ್ತುಂಬಿಕೊಳ್ಳಲು, ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಜನರು ಮುಗಿಬಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200