ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA| 26 ಜುಲೈ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯಿತ ಜಂಗಮರಿಗೆ (JANGAMA) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಕೂಡ ಒಂದಾಗಿದೆ. ಆದರೆ ಇತ್ತೀಚೆಗೆ ಮುಂದುವರೆದ ವೀರಶೈವ ಲಿಂಗಾಯಿತ ಸಮಾಜದವರು ನಾವೇ ನಿಜವಾದ ಬೇಡ ಜಂಗಮರು ಎಂದು ಹೋರಾಟ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಶಾಸ್ತ್ರೀಯ ಅಧ್ಯಯನ ಮತ್ತು ಜನಗಣತಿಯ ಪ್ರಕಾರ 1981ರಲ್ಲಿ ಬೇಡ ಜಂಗಮರ ಜನಸಂಖ್ಯೆ ರಾಜ್ಯದಲ್ಲಿ 3,035 ರಷ್ಟಿತ್ತು. ಬೇಡ ಜಂಗಮರು ರಾಜ್ಯದ ಬೀದರ್ ಗುಲ್ಬರ್ಗ ರಾಯಚೂರು, ಬಳ್ಳಾರಿ ಗಡಿ ಭಾಗದಲ್ಲಿ ಮಾತ್ರ ವಾಸವಾಗಿದ್ದರು. 2001ರ ಜನಗಣತಿ ಪ್ರಕಾರ 20,229 ಜನಸಂಖ್ಯೆ ಇತ್ತು. 2011ರ ಜನಗಣತಿಯ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿತ್ತು . ಬೇಡ ಜಂಗಮರ (JANGAMA) ಆಚಾರ ವಿಚಾರಗಳು ಬೇರೆಯಾಗಿದ್ದು, ವೀರಶೈವ ಜಂಗಮರ ಆಚಾರ ವಿಚಾರಗಳು ಕೂಡ ಬೇರೆಯಾಗಿವೆ ಎಂದು ತಿಳಿಸಿದರು.
ಆಂಧ್ರ ಮೂಲದಿಂದ ವಲಸೆ ಬಂದ ಬೇಡ ಜಂಗಮರ ಮಾತೃಭಾಷೆ ತೆಲುಗು. ವೀರಶೈವ ಅಥವಾ ಲಿಂಗಾಯಿತ ಜಂಗಮರು ಕರ್ನಾಟಕದ ಪ್ರಬಲ ಜಾತಿಯ ಉಪ ಪಂಗಡದವರಾಗಿದ್ದಾರೆ. ಇವರನ್ನು ಅಯ್ಯ, ಸ್ವಾಮಿ, ಐನೋರೆ ಎಂದು ಕರೆಯಲಾಗುತ್ತದೆ. ಇವರು ಸಸ್ಯಹಾರಿಗಳಾಗಿದ್ದು ಹಿರೇಮಠ, ಸಾಲಿಮಠ, ಗದಗಿನ ಮಠ, ಚಿಕ್ಕಮಠ ಮುಂತಾದ ಅನ್ವರ್ಥನಾಮಗಳಿಂದ ಕರೆಯಲಾಗುತ್ತದೆ. ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಮುಂದುವರೆದ ರಾಜ್ಯದ ಪ್ರಬಲ ಸಮಾಜ ಇದಾಗಿದೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ನಿಜವಾದ ಪರಿಶಿಷ್ಟ ಅರ್ಹ ಬೇಡ ಜಂಗಮರನ್ನು ಹೊರತುಪಡಿಸಿ ವೀರಶೈವ ಲಿಂಗಾಯಿತ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೊಡಬಾರದು. ಸರ್ಕಾರ ಅವರ ಹೋರಾಟಕ್ಕೆ ಮಣಿಯಬಾರದು. ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಮತ್ತು ಅವರಿಗೆ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ಆರ್. ಲಕ್ಷ್ಮಣ್, ನಾಗರಾಜ್, ಅಕ್ಕಿ ಬಸವರಾಜ್, ಮಾರವಳ್ಳಿ ಬಸವರಾಜ್, ರಮೇಶ್ ಚಿಕ್ಕಮರಡಿ ಮೊದಲಾದವರಿದ್ದರು.
ಇದನ್ನೂ ಓದಿ – ಸಾಮಾನ್ಯ ಗೃಹಿಣಿ ಈಗ ಶಿವಮೊಗ್ಗ ಪಾಲಿಕೆಯ ವಿರೋಧ ಪಕ್ಷದ ನಾಯಕಿ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.