ಶಿವಮೊಗ್ಗ : ಆಡಳಿತದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ (Division) ವಿಂಗಡಿಸಲಾಗಿದೆ. ಆದರೆ ಈ ವಿಂಗಡಣೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕುವೆಂಪು ರಂಗಮಂದಿರದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ದೀಪಕ್ ಸಿಂಗ್ ಮನವಿ ಸಲ್ಲಿಸಿದರು.
ಏನೆಲ್ಲ ನ್ಯೂನತೆಗಳಿವೆ?
ಪಾಲಿಕೆಯ ವಲಯ 1ರ ಕಚೇರಿಯು ವಿನೋಬಗರದಲ್ಲಿದೆ. ಈ ವಲಯಕ್ಕೆ ಟಿಪ್ಪು ನಗರ, ಸವಾಯಿ ಪಾಳ್ಯ ಮತ್ತು ವಿದ್ಯಾನಗರವನ್ನು ಸೇರಿಸಲಾಗಿದೆ. ಈ ವಾರ್ಡುಗಳು ವಲಯ ಕಚೇರಿಯಿಂದ 5 ಕಿ.ಮೀ.ಗಿಂತಲು ಹೆಚ್ಚಿನ ದೂರದಲ್ಲಿವೆ.
ಇನ್ನು, ವಲಯ 3ರ ಕಚೇರಿ ಇಮಾಮ್ ಬಾಡಾದಲ್ಲಿದೆ. ಈ ವಲಯಕ್ಕೆ ವಿನೋಬನಗರ ದಕ್ಷಿಣ ಮತ್ತು ಶರಾವತಿ ನಗರ ವಾರ್ಡ್ಗಳನ್ನು ಸೇರಿಸಲಾಗಿದೆ. ವಲಯ ಕಚೇರಿಗೂ ಈ ವಾರ್ಡ್ಗಳಿಗು 5 ಕಿ.ಮೀ.ಗಿಂತಲು ಹೆಚ್ಚಿನ ಅಂತರವಿದೆ.

ವಿನೋಬನಗರದಲ್ಲೇ ಇರುವ ವಲಯ 1ರ ಕಚೇರಿ ವ್ಯಾಪ್ತಿಯಲ್ಲೇ ಇರುವ ವಿನೋಬನಗರ ದಕ್ಷಿಣ ಮತ್ತು ಶರಾವತಿ ನಗರ ಪ್ರದೇಶಗಳನ್ನು ವಲಯ 3ರ (Division) ಕಚೇರಿ ವ್ಯಾಪ್ತಿಗೆ ಸೇರಿಸಲಾಗಿದೆ. ಇನ್ನು, ವಲಯ 3ರ ಕಚೇರಿ ವ್ಯಾಪ್ತಿಗೆ ಬರುವ ಟಿಪ್ಪುನಗರ, ಸವಾಯಿ ಪಾಳ್ಯ, ವಿದ್ಯಾನಗರ ದಕ್ಷಿಣ ವಾರ್ಡುಗಳನ್ನ ವಲಯ 1ರ ವ್ಯಾಪ್ತಿಗೆ ಸೇರಿಸಿರುವು ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು.
ಶಿವಮೊಗ್ಗ ನಗರದ ಭೌಗೋಳಿಕವಾಗಿ ಪರಿಗಣಿಸದೆ ಅಧಿಕಾರಿಗಳ ವಾರ್ಡುಗಳನ್ನು ವಲಯ ಕಚೇರಿಗಳ ವ್ಯಾಪ್ತಿಗೆ ಸೇರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ವಲಯ ಕಚೇರಿ ವ್ಯಾಪ್ತಿಯ ವಾರ್ಡುಗಳನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ » BIG IMPACT – ಶಿವಮೊಗ್ಗ ಲೈವ್ ವರದಿ ಬೆನ್ನಿಗೆ ಗಾಂಧಿ ಪಾರ್ಕ್ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200