ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 APRIL 2024
SHIMOGA : ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಏ.30ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪರ ಪ್ರಚಾರಕ್ಕೆ ಸಿನಿಮಾ ನಟರು ಬರಲಿ. ನಮ್ಮ ಮತದಾರರು ಅವರನ್ನೆಲ್ಲ ಹತ್ತಿರದಿಂದ ನೋಡುವ ಅವಕಾಶ ದೊರೆಯಲಿದೆ. ಆದರೆ ಇವೆಲ್ಲ ಮತವಾಗಿ ಪರಿವರ್ತನೆ ಆಗುವುದಿಲ್ಲ ಎಂದು ತಿಳಿಸಿದರು.
ತುಮಕೂರಿನ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ವಿನೋಬನಗರದ ಬಿ.ವೈ.ರಾಘವೇಂದ್ರ ಅವರು ಮನೆಗೆ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆಗೂಡಿ ಕುಟುಂಬ ಸಮೇತ ಶ್ರೀಗಳ ಪಾದಪೂಜೆ ನೆರವೇರಿಸಿದರು. ಭದ್ರಾವತಿಯ ಜನ್ನಾಪುರದ ಫೌಂಟೇನ್ ಆಫ್ ಚರ್ಚ್ ಪಾಸ್ಟರ್ ಸ್ಟೀಫನ್ ಇಮ್ಯಾನುಯೆಲ್ ಅವರನ್ನು ಸಿದ್ಧಾರೂಢನಗರದ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ಸುರೇಶ್ ನಾಯಕ್, ಆಂಥೋನಿ ಪ್ರಕಾಶ್, ಪಾಸ್ಟರ್ ಪ್ರಭಾಕರ್, ಬ್ರದರ್ ಮೋಸಸ್ ರೋಸಯ್ಯ ಹಾಗೂ ಸಮುದಾಯದ ಅನೇಕರು ಉಪಸ್ಥಿತರಿದ್ದರು.ಯಡಿಯೂರಪ್ಪ ನಿವಾಸಕ್ಕೆ ಸಿದ್ಧಗಂಗಾ ಶ್ರೀ
ಪಾಸ್ಟರ್ ಆಶೀರ್ವಾದ ಪಡೆದ ರಾಘವೇಂದ್ರ
ಇದನ್ನೂ ಓದಿ – ಮರು ಮೌಲ್ಯಮಾಪನ, ಪಿಯುಸಿಯಲ್ಲಿ ಶಿವಮೊಗ್ಗದ ಸಿಂಚನಾಗೆ ರಾಜ್ಯಮಟ್ಟದಲ್ಲಿ 4ನೇ ರ‍್ಯಾಂಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422