ಶಿವಮೊಗ್ಗ: ಕಮಲ್ ಹಾಸನ್ ನಟನಲ್ಲ (Actor). ಅವರೊಬ್ಬ ರಾಜಕಾರಣಿ. ಅವರಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದು ಸೂಕ್ತವಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಕಮಲ್ ಹಾಸನ್‌ರನ್ನು ನಿರ್ಲಕ್ಷಿಸುವುದೇ ಸೂಕ್ತ. ಕನ್ನಡಕ್ಕೆ ಅದರದ್ದೆ ಆದ ತೂಕವಿದೆ. ಕಮಲ್ ಹಾಸನ್‌ರಿಂದ ಕನ್ನಡಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದರು.

ಹಿಂದೂಗಳಿಗೆ ತೊಂದರೆ ಕೊಡ್ತಿದೆ ಕಾಂಗ್ರೆಸ್
ಮಂಗಳೂರು ಮಾತ್ರವಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತುಷ್ಟೀಕರಣದ ರಾಜಕಾರಣಕ್ಕೆ ಬಹಳ ಜನ ಬಲಿಯಾಗಿದ್ದಾರೆ. ಮುಸ್ಲಿಂ ಮುಖಂಡರು ಕಾಂಗ್ರೆಸ್ ತೊರೆಯುವುದಾಗಿ ತಿಳಿಸಿದ್ದಾರೆ. ಆಗ ಕಾಂಗ್ರೆಸ್ ಪಕ್ಷ ತರಾತುರಿ ತೋರಿಸಿದೆ ಎಂದರು.
ಈಗ ಹಿಂದುಗಳಿಗೆ ತೊಂದರೆ ಕೊಡಲು, ಪೊಲೀಸರನ್ನು ಮನೆಗೆ ನುಗ್ಗಿಸಲು ಕಾಂಗ್ರೆಸ್ ಮುಂದಾಗಿದೆ. ಕೆಲವರನ್ನು ಗಡಿಪಾರು ಮಾಡುವುದು, ಪ್ರಕರಣ ದಾಖಲಿಸುವುದು ಸೇರಿ ಹಿಂದೂ ಮುಖಂಡರಿಗೆ ಹಿಂಸೆ ನೀಡುತ್ತಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹತ್ತು ವರ್ಷ ರೈಲು ಬಿಟ್ಟಿದ್ದಾರೆ
ಹತ್ತು ವರ್ಷ ಕಿಮ್ಮನೆ ರತ್ನಾಕರ್ ಅವರು ರೈಲು ಬಿಟ್ಟಿದ್ದಾರೆ. ಭಾಷಣ ಮಾಡುವುದು ಬಿಟ್ಟರೆ ಬೇರಾವ ಕೆಲಸವು ಮಾಡಿಲ್ಲ. ಅವರು ಏನಾದರು ಕೆಲಸ ಮಾಡಿದ್ದರೆ ತೋರಿಸಲಿ. ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಕಿಮ್ಮನೆ ರತ್ನಾಕರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರು. ಅವರು ರಾಜ್ಯ ಖಾತೆ ಸಚಿವರಾಗಿದ್ದರು. ನಾನು ಕ್ಯಾಬಿನೆಟ್ ಸಚಿವನಾಗಿದ್ದೆ ಎಂದು ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಆರ್‌ಸಿಬಿ ಹವಾ, ಗೆಲುವಿಗಾಗಿ ಪ್ರಾರ್ಥನೆ, ರಕ್ತದಾನ, ಹಾಲಿನ ಅಭಿಷೇಕ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200