ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019
ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆಯ ಒಂದು ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದೆ ಅಂತಾ ಮಾಜಿ ಮೇಯರ್ ನಾಗರಾಜ್ ಕಂಕಾರಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾನಗರಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜನವಿರೋಧಿ ಆಡಳಿತಕ್ಕೆ ಪ್ರಖ್ಯಾತಿಯಾಗಿದೆ. ಯಾವ ಅಭಿವೃದ್ದಿಯೂ ಆಗಿಲ್ಲ. ಅನುದಾನದ ಬಳಕೆಯೂ ಕೂಡ ಆಗಿಲ್ಲ ಮತ್ತು ತಾರತಮ್ಯದಿಂದ ಕೂಡಿದೆ. ಬಿಜೆಪಿ ಸದಸ್ಯರ ವಾರ್ಡ್’ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ದೂರಿದರು.
ಬೇಕಾಬಿಟ್ಟಿ ತೆಗೆಯಲಾಗ್ತಿದೆ ಗುಂಡಿ
ನಗರದಲ್ಲಿ ಯುಜಿ ಕೇಬಲ್ ಕೆಲಸ ಕೂಡ ವಿಳಂಬವಾಗುತ್ತಿದೆ. ಕುಡಿಯುವ ನೀರು, ಮೆಸ್ಕಾಂ ಕೇಬಲ್, ಒಳಚರಂಡಿ ಯೋಜನೆ ಹೀಗೆ ಅನೇಕ ಪೈಪ್ಲೈನ್ ಹೋಗಲು ಗುಂಡಿ ತೆಗೆಯುತ್ತಿದ್ದು ಈ ಗುಂಡಿಗಳನ್ನು ಬೇಕಾಬಿಟ್ಟಿಯಾಗಿ ತೆಗೆಯಲಾಗುತ್ತಿದೆ. ಉದಾಹರಣೆಗೆ ಒಳಚರಂಡಿ ಪೈಪ್ ಕೆಳಗೆ ಕುಡಿಯುವ ನೀರಿನ ಪೈಪ್ ಅಳವಡಿಸಲಾಗುತ್ತಿದೆ ಎಂದು ದೂರಿದರು.
18 ಕೋಟಿ ಬಳಕೆ ಮಾಡಿಕೊಂಡಿಲ್ಲ
ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆಗೆ ಸುಮಾರು 18 ಕೋಟಿ ರೂ. ನೀಡಿದ್ದರು. ಆ ಹಣವನ್ನು ಬಳಕೆ ಮಾಡಿಕೊಂಡಿಲ್ಲ. ಪಾಲಿಕೆಗೆ ಸಂಬಂಧಿಸಿದಂತೆ ಯಾವ ಪ್ರಗತಿ ಪರಿಶೀಲನಾ ಸಭೆಯೂ ನಡೆದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳಂತೂ ಗಬ್ಬೆದ್ದು ಹೋಗಿವೆ. ಹಣ ಎಲ್ಲೆಂದರಲ್ಲಿ ಸೋರಿ ಹೋಗುತ್ತಿದೆ. ಕೆಲಸ ಕೂಡ ಆಗಿಲ್ಲ. ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗಿದ್ದು, ಅದೂ ಕಳಪೆಯಾಗಿದೆ. ಅವ್ಯವಹಾರವು ನಡೆದಿದೆ.ಇದನ್ನು ತನಿಖೆಗೆ ಒಳಪಡಿಸಬೇಕೆಂದು ನಾಗರಾಜ ಕಂಕಾರಿ ಒತ್ತಾಯಿಸಿದರು.
ವಿದ್ಯಾರ್ಥಿ ವೇತನ ಕಟ್
ನಗರದ ವಿದ್ಯಾರ್ಥಿಗಳಿಗೆ ನಮ್ಮ ಆಡಳಿತದಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದ್ದೆವು. ಈಗ ಅದನ್ನು ನಿಲ್ಲಿಸಲಾಗಿದೆ. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ವಿಕಲಚೇತನರಿಗೆ ಯೋಜನೆ ರೂಪಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಅನುಮೋದನೆಗೊಂಡಿದ್ದ ಕಾಮಗಾರಿಗಳು ಕೂಡ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಮಿನಿಸ್ಟರ್ ಈಶ್ವರಪ್ಪ ನಿರ್ಲಕ್ಷ್ಯ
ಚುನಾಯಿತ ಸ್ಥಳೀಯ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಿದೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿರ್ಲಕ್ಷತನ ಎದ್ದು ಕಾಣುತ್ತಿದೆ. ಇವೆಲ್ಲವೂ ಪಾಲಿಕೆ ಆಡಳಿತದ ವೈಫಲ್ಯಕ್ಕೆ ಕಾರಣವಾಗಿವೆ. ಇದು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪಾಲಿಕೆ ಆಡಳಿತ ವಿರುದ್ದ ಹೋರಾಟ ಮಾಡಬೇಕಾಗುತ್ತದೆ. ಮುಂದಿನ ಬಜೆಟ್’ನಲ್ಲಾದರೂ ನಗರದ ಅಭಿವೃದ್ದಿಗೆ ಪಾಲಿಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯ ಸತ್ಯನಾರಾಯಣ ರಾಜ್, ಪ್ರಮುಖರಾದ ಹೆಚ್.ಪಾಲಾಕ್ಷಿ, ಸಿದ್ದಪ್ಪ, ಜಿ.ಡಿ. ಮಂಜುನಾಥ್, ಆನಂದ್, ನೂರುಲ್ಲಾ, ರಾಜ್ ಕುಮಾರ್ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga Mahanagara Palike Former Mayor Nagaraja Kankari Criticizes BJP administration in Shimoga Palike over non development works.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422