ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 JUNE 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ಕರಾಟೆ
SHIMOGA : ಜಿಲ್ಲಾ ಕರಾಟೆ ಅಸೋಸಿಯೇಷನ್‌ನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Airport) ಜಿಲ್ಲೆಯ ವಿವಿಧ ಶಾಲೆಗಳ 162 ಕರಾಟೆ ವಿದ್ಯಾರ್ಥಿಗಳನ್ನು ಒಳಗೊಂಡ ತಂಡದಿಂದ ಏಕಕಾಲಕ್ಕೆ ಗುಂಪು ಪ್ರದರ್ಶನ ಮಾಡಿ ವರ್ಲ್ಡ್ ಕರಾಟೆ ಡೇ ಆಚರಿಸಲಾಯಿತು. ಕೆಎಸ್‌ಐಎಸ್‌ಎಫ್ ಎಸಿಪಿ ಚಂದ್ರಶೇಖರ್, ಪಿಎಸ್‌ಐಗಳಾದ ಕೊಟ್ರೇಶ್ ಮತ್ತು ಚಂದ್ರಶೇಖರ್, ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್, ಉಪಾಧ್ಯಕ್ಷ ಬಾಲರಾಜ್, ಸಹ ಕಾರ್ಯದರ್ಶಿ ಪಂಚಪ್ಪ ಮತ್ತು ಪ್ರಮುಖರಾದ ಉಷಾ ಉತ್ತಪ್ಪ, ರಾಘವೇಂದ್ರ, ಕೃಷ್ಣಮೂರ್ತಿ, ಗೋವಿಂದಸ್ವಾಮಿ, ಶ್ರೇಯಸ್, ಹರ್ಷಿತ್, ಧನಂಜಯ್ ಉಪಸ್ಥಿತರಿದ್ದರು.
ಲೋಕಾಯುಕ್ತರಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ
SHIMOGA : ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ತಾಲೂಕುಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. ಜೂ.19ರ ಬೆಳಗ್ಗೆ 11ಕ್ಕೆ ಸೊರಬ ತಾಲೂಕು ಕಚೇರಿ, 20ರ ಬೆಳಗ್ಗೆ 11ಕ್ಕೆ ಶಿಕಾರಿಪುರ ತಾಲೂಕು ಕಚೇರಿ, 21ರ ಬೆಳಗ್ಗೆ 11ಕ್ಕೆ ಸಾಗರ ತಾಪಂ ಸಭಾಂಗಣ, 24ರ ಬೆಳಗ್ಗೆ 11ಕ್ಕೆ ಹೊಸನಗರ ತಾಲೂಕು ಕಚೇರಿ, 25ರ ಬೆಳಗ್ಗೆ 11ಕ್ಕೆ ತೀರ್ಥಹಳ್ಳಿ ತಾಲೂಕು ಕಚೇರಿ, 26ರ ಬೆಳಗ್ಗೆ 11ಕ್ಕೆ ಭದ್ರಾವತಿ ತಾಪಂ ಸಭಾಂಗಣ ಹಾಗೂ 28ರ ಬೆಳಗ್ಗೆ 11ಕ್ಕೆ ಶಿವಮೊಗ್ಗ ತಾಪಂ ಸಭಾಂಗಣದಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಲಿದೆ.
ಎನ್‌ಸಿಸಿ ಕ್ಯಾಂಪ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ
SHIMOGA : ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಎನ್‌ಸಿಸಿ ಕ್ಯಾಂಪ್‌ನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಯಾಂಪ್ ಕಮಾಂಡೆಂಟ್ ಹಾಗೂ 20 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಮನಿಷ್ ಪಠಾನಿಯಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಸುರೇಶ್, ಸುಬೇದಾರ್ ಮೇಜರ್, ಮಹಮ್ಮದ್ ಇಕ್ಬಾಲ್, ರಾಗೇಶ್, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.
ಮಹಿಳೆ ನೇಣು ಬಿಗಿದು ಆತ್ಮಹತ್ಯೆ
SHIMOGA : ನಗರದ ಮಿಷನ್ ಕಾಂಪೌಂಡ್‌ನಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಸ್ವತಿ(35) ಆತ್ಮಹತ್ಯೆ ಮಾಡಿಕೊಂಡವರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಹಣಗೆರೆಕಟ್ಟೆಯಲ್ಲಿ ಗಂಧ ಉತ್ಸವ, ಉರುಸ್, ಯಾವಾಗ? ಹೇಗಿರುತ್ತೆ ಉತ್ಸವ?