ಗೋಪಿ ಸರ್ಕಲ್‌ನಿಂದ ಕಾವಡಿಗಳ ಮೆರವಣಿಗೆ, ಮಹಿಳೆಯರಿಂದ ದೀಪಗಳ ಉತ್ಸವ, ಯಾವಾಗ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಡಿಸೆಂಬರ್ 3 ರಂದು ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ, ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಗೋಪಿ ಸರ್ಕಲ್‌ ನಿಂದ ಕಾವಡಿಗಳು, ಪಂಬೈ ವಾದ್ಯ ಮತ್ತು ಮಂಗಳವಾದ್ಯದೊಂದಿಗೆ ಹೊರಟು ಮೈಲಾರೇಶ್ವರ ದೇವಾಲಯಕ್ಕೆ ತಲುಪಿ ಸಂಜೆ 4 ಗಂಟೆಗೆ ಮಹಿಳೆಯರಿಂದ ದೀಪಗಳ ಉತ್ಸವದೊಂದಿಗೆ ಮೆರವಣಿಗೆ ಹೊರಟು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಯ ದೇವಾಲಯಕ್ಕೆ ಆಗಮಿಸಿ ನಂತರ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಗೆ ಮಹಾ ದೀಪಾರಾಧನೆ ನಡೆಯುವುದು.

Gudedekal-temple.

ಇದನ್ನೂ ಓದಿ » VISLನಲ್ಲಿ ದಿಢೀರ್‌ ನಡೆಯಿತು ಎರಡನೇ ಮೀಟಿಂಗ್‌, ಕುಮಾರಸ್ವಾಮಿ ನೀಡಿದ ಭರವಸೆ ಏನು?

ನಂತರ ಸಿಡಿಮದ್ದು ಬಾಣಬಿರುಸುಗಳ ಕಾರ್ಯಕ್ರಮ ಇರುತ್ತದೆ ಮತ್ತು ಮಯಿಲಾಡುದುರೈಯ ಮಯಿಲೈ ಅಮ್ಮನವರ ಕೀರ್ತಿಯ ಪಂಬೈ ಕಲೈ ಸಂಘ ಇವರಿಂದ ಭಕ್ತಿಗೀತೆ ಮತ್ತು ನೃತ್ಯ ಕಾರ್ಯಕ್ರಮ ಇರಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಪಿ.ರಘುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment