| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಮಂಗಳನ ಕಾಯಿಲೆ) ಆತಂಕ ಶುರುವಾಗಿದೆ. ಮಹಿಳೆಯೊಬ್ಬರಿಗೆ KFD ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸನಗರದ ಮಹಿಳೆಗೆ ಕೆಎಫ್‌ಡಿ
ಕೆಎಫ್‌ಡಿ ಪತ್ತೆಗೆ ಪರೀಕ್ಷೆಗಳನ್ನು (TESTING) ನಡೆಸುತ್ತಿದ್ದಾಗ ಹೊಸನಗರದ 54 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಕೂಡಲೆ ಮಹಿಳೆಗೆ ಚಿಕಿತ್ಸೆ (TREATMENT) ಆರಂಭಿಸಲಾಗಿದೆ. ಸದ್ಯ ಅವರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಎಷ್ಟಾಗಿತ್ತು ಪ್ರಕರಣ?
ಸಾಮಾನ್ಯವಾಗಿ ಮಂಗನಕಾಯಿಲೆ ನವೆಂಬರ್‌ನಿಂದ ಜನವರಿವರೆಗೆ ಹರಡುತ್ತದೆ. ಕಳೆದ ವರ್ಷ ಕೆಎಫ್‌ಡಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ 72, ಚಿಕ್ಕಮಗಳೂರಿನಲ್ಲಿ 93 ಮತ್ತು ಉತ್ತರ ಕನ್ನಡದಲ್ಲಿ 9 ಮಂದಿಗೆ ಕೆಎಫ್‌ಡಿ ತಗುಲಿತ್ತು.
![]()
ಮಂಗನ ಕಾಯಿಲೆ, ಚಿಕಿತ್ಸೆಗೆ ಏನೆಲ್ಲ ಸಿದ್ಧತೆಯಾಗಿದೆ?
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ ನಾಯಕ್, ಕೆಎಫ್‌ಡಿ ಪತ್ತೆಗೆ ನಡೆಸುತ್ತಿರುವ ಪರೀಕ್ಷೆಗಳು, ಕೆಎಫ್‌ಡಿಯಿಂದ ಪಾರಾಗುವುದು ಸೇರಿದಂತೆ ಪ್ರಮುಖ ಮಾಹಿತಿ ನೀಡಿದ್ದಾರೆ. ಅದರ ಪಾಯಿಂಟ್ಸ್ ಇಲ್ಲಿದೆ.
ಪಾಯಿಂಟ್ 1: ಸಾಮಾನ್ಯ ಪರೀಕ್ಷೆ ವೇಳೆ ಸೋಂಕು ಪತ್ತೆ
ಸಾಮಾನ್ಯ ಪರೀಕ್ಷೆ ನಡೆಸುತ್ತಿದ್ದಾಗ ಜ್ವರ ಮತ್ತು ತಲೆನೋವಿನಿಂದ ಬಳಲುತ್ತಿದ್ದ ಹೊಸನಗರ ತಾಲೂಕಿನ 54 ವರ್ಷದ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್ ಬಂದಿದೆ. ಅವರಿಗೆ ಈಗಾಗಲೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.
ಪಾಯಿಂಟ್ 2: ಅಕ್ಟೋಬರ್ ತಿಂಗಳಿಂದಲೇ ಪರೀಕ್ಷೆ
ಜಿಲ್ಲೆಯಲ್ಲಿ ಕೆಎಫ್‌ಡಿ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಅಕ್ಟೋಬರ್‌ನಿಂದಲೇ ಸಕ್ರಿಯವಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಅಕ್ಟೋಬರ್ ತಿಂಗಳಿನಿಂದಲೇ, ಜ್ವರ ಪತ್ತೆ, ಮಂಗಗಳು ಮತ್ತು ಉಣುಗುಗಳ ಪತ್ತೆ, ಪರೀಕ್ಷೆ ಆರಂಭಿಸಲಾಗಿತ್ತು. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೆಎಫ್‌ಡಿ ನಿಯಂತ್ರಣ ಕಾರ್ಯಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಪಾಯಿಂಟ್ 3: ಚಿಕಿತ್ಸೆಗೆ ಏನೆಲ್ಲ ಸಿದ್ಧತೆಯಾಗಿದೆ?
ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲೂಕುಗಳ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಗಾಗಿ 10 ಹಾಸಿಗೆಗಳ ವೈರಲ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಅಗತ್ಯ ಔಷಧ ಮತ್ತು ಪರೀಕ್ಷಾ ವ್ಯವಸ್ಥೆ ಮಾಡಲಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ, ಮತ್ತು ಸೊರಬ ತಾಲೂಕುಗಳಲ್ಲಿ ಜ್ವರ ಅಥವಾ ತಲೆನೋವಿನ ಕಂಡುಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸರ್ವೇಕ್ಷಣಾಧಿಕಾರಿ ನಾಗರಾಜ ನಾಯ್ಕ್ ಹೇಳಿದರು.
ಇದನ್ನೂ ಓದಿ » VISLನಲ್ಲಿ ದಿಢೀರ್ ನಡೆಯಿತು ಎರಡನೇ ಮೀಟಿಂಗ್, ಕುಮಾರಸ್ವಾಮಿ ನೀಡಿದ ಭರವಸೆ ಏನು?
ಪಾಯಿಂಟ್ 4: ಉಚಿತ ಚಿಕಿತ್ಸೆಗೆ ಆದೇಶ
ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ಒದಗಿಸಲು ಆದೇಶ ಮಾಡಲಾಗಿದೆ. ಕಾಯಿಲೆ ಬಂದ ತಕ್ಷಣ ಗುಣಪಡಿಸಲು ಶೀಘ್ರ ಚಿಕಿತ್ಸೆ ಪಡೆಯುವುದು ಮುಖ್ಯ. ಸ್ಥಳೀಯ ಆರ್.ಎಂ.ಪಿ, ಎಲ್.ಎಂ.ಪಿ ವೈದ್ಯರು ಅಥವಾ ಕ್ವಾಕ್‌ಗಳ ಬಳಿ ಹೋಗುವುದನ್ನು, ಹಾಗೂ ಡೈಕ್ಲೋ ಇಂಜೆಕ್ಷನ್ ಅಥವಾ ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಹೆಚ್ಚು ದ್ರವ ರೂಪದ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
- ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಕೋಟೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ, ಏನೇನೆಲ್ಲ ಪೂಜೆ ನೆರವೇರಿತು?
- ಅಡಿಕೆ ಧಾರಣೆ | 4 ಡಿಸೆಂಬರ್ 2025 | ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್?
![]()