ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 MARCH 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ತವರು ಮನೆ ಗಾಂಧಿ ಬಜಾರ್‌ನಲ್ಲಿ ಪೂಜೆ ಬಳಿಕ ಶ್ರೀ ಮಾರಿಕಾಂಬೆ ದೇವಿ ಗದ್ದುಗೆ ಏರಿದ್ದಾಳೆ. ಇಂದು ಬೆಳಗಿನ ಜಾವ ಕೋಟೆ ಮಾರಿಕಾಂಬ ದೇಗುಲದ ಗದ್ದುಗೆಯಲ್ಲಿ ದೇವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಾವಿರಾರು ಭಕ್ತರು ಗದ್ದುಗೆಯಲ್ಲಿ ಮಾರಿಕಾಂಬೆಯನ್ನು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿದ್ದಾರೆ.
ಗಾಂಧಿ ಬಜಾರ್‌ನಲ್ಲಿ ಜನವೋ ಜನ
ಶ್ರೀ ಮಾರಿಕಾಂಬೆಯ ತವರು ಮನೆ ಗಾಂಧಿ ಬಜಾರ್‌ನಲ್ಲಿ ಮಂಗಳವಾರ ಬೆಳಗ್ಗೆಯಿಂದ ಶ್ರೀ ಮಾರಿಕಾಂಬೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಸಂಖ್ಯ ಜನರು ತಡರಾತ್ರಿವರೆಗೂ ದೇವಿಯ ದರ್ಶನ ಪಡೆದರು. ಪೂಜೆ ಸಲ್ಲಿಸಿ ಪುನೀತರಾದರು. ರಾತ್ರಿ ಮೆರವಣಿಗೆ ಮೂಲಕ ಮಾರಿಕಾಂಬ ದೇವಿಯನ್ನು ಕೋಟೆ ಮಾರಿಕಾಂಬ ದೇವಿ ದೇಗುಲದ ಗದ್ದುಗೆಗೆ ಕರೆದೊಯ್ದು ಪ್ರತಿಷ್ಠಾಪಿಸಲಾಗಿದೆ. ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಬೆಳಗಿನ ಜಾವದಿಂದ ಭಕ್ತರ ಸಾಲು
ಗುದ್ದಿಗೆ ಮೇಲೆ ವಿರಾಜಮಾನಳಾಗಿರುವ ದೇವಿಯನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಬೆಳಗಿನ ಜಾವ 4.30ರ ಹೊತ್ತಿಗೆ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಆಗಿನಿಂದಲೇ ದರ್ಶನ, ಪೂಜೆ ಆರಂಭವಾಗಿದೆ. ದೇಗುಲದ ಒಳಾಂಗಣದಲ್ಲಿ ವೈಭವದ ಅಲಂಕಾರವನ್ನು ಕಣ್ತುಂಬಿಕೊಂಡು, ಭಕ್ತರು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ನೂಕು ನುಗ್ಗಲು ಉಂಟಾಗದೆ, ಭಕ್ತರು ದೇವಿಯ ದರ್ಶನಕ್ಕೆ ಪಡೆಯಲು ಅನುವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ದೇವಿಯನ್ನು ಗದ್ದುಗೆ ಮೇಲೆ ಪ್ರತಿಷ್ಠಾಪಿಸಿರುವ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ ಕುರಿತು ನಿಮಗೆಷ್ಟು ಗೊತ್ತು? ಇಲ್ಲಿದೆ 10 ಪ್ರಮುಖ ಪಾಯಿಂಟ್