ಶಿವಮೊಗ್ಗ ಗಾಂಧಿ ಬಜಾರ್‌ ಮುಂದೆ ಹುಲಿ ಘರ್ಜನೆ, ರಾಕ್ಷಸನ ಆರ್ತನಾದ, ಮಹಾದ್ವಾರಕ್ಕೆ ಜನ ಫಿದಾ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 MARCH 2024

SHIMOGA : ಕೋಟೆ ಮಾರಿಕಾಂಬ ದೇವಿ ಜಾತ್ರೆ ಹಿನ್ನಲೆ ಇದೇ ಮೊದಲ ಬಾರಿ ಗಾಂಧಿ ಬಜಾರ್‌ನಲ್ಲಿ ಬೃಹತ್‌ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾದರಿಯ ಮಹಾದ್ವಾರ ಸ್ಥಾಪಿಸಲಾಗಿದೆ. ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.

marikamba jatre gateway at shimoga

ಉದ್ಘಾಟನೆಯಾಯ್ತು ಮಹಾದ್ವಾರ?

ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನನ್ನು ವಧಿಸಿದ್ದಳು. ಇದೇ ಕಾನ್ಸೆಪ್ಟ್‌ ಅನ್ನು ಗಾಂಧಿ ಬಜಾರ್‌ ಪ್ರವೇಶದಲ್ಲಿ ಮುಖ್ಯ ದ್ವಾರವಾಗಿ ನಿರ್ಮಿಸಲಾಗಿದೆ. ಭಾನುವಾರ ಸಂಜೆ ಮಹಾದ್ವಾರವನ್ನು ಉದ್ಘಾಟಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌, ಕಲಾವಿದ ಜೀವನ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

marikamba jatre gateway at shimoga

ಫೋಟೊ, ವಿಡಿಯೋ, ಸೆಲ್ಫಿ

ಮಹಾದ್ವಾರ ಉದ್ಘಾಟನೆಯಾಗುತ್ತಿದ್ದಂತೆ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಮಹಾದ್ವಾರವನ್ನು ಕಣ್ತುಂಬಿಕೊಂಡರು. ಫೋಟೊ, ವಿಡಿಯೋ ತೆಗೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಖುಷಿ ಪಟ್ಟರು. ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸರು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಗಾಂಧಿ ಬಜಾರ್‌ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್‌ ಹಾಕಿದ್ದರು.

ಮಹಾದ್ವಾರ ಕುರಿತು 3 ವಿಶೇಷತೆಗಳು ಇಲ್ಲಿವೆ

point-1ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನ ಮಹಾದ್ವಾರವನ್ನು ನಿರ್ಮಿಸಲು 45 ದಿನ ಸಮಯ ಹಿಡಿದಿದೆ. ಮೂರ್ತಿಗಳು 22 ಅಡಿ ಅಗಲ, 26 ಅಡಿ ಎತ್ತರವಿದೆ. ದುರ್ಗಾದೇವಿ, ಹುಲಿ ಮತ್ತು ರಾಕ್ಷಸನ ಕಲಾಕೃತಿಗಳಿವೆ. ಇದೇ ಮೊದಲ ಬಾರಿ ಎಲ್ಲ ಕಲಾಕೃತಿಗಳು ಆಕ್ಷನ್‌ ಮಾಡುತ್ತಿವೆ. ದುರ್ಗಾದೇವಿಯ ಎರಡು ಕೈಗಳು ಮತ್ತು ತ್ರಿಶೂಲ ಆಕ್ಷನ್‌ ಮಾಡುತ್ತಿವೆ. ರಾಕ್ಷಸನ ಕೈ ಮತ್ತು ತಲೆ, ಹುಲಿಯ ಕಾಲುಗಳು ಮತ್ತು ತಲೆ ಆಕ್ಷನ್‌ ಮಾಡುತ್ತವೆ. ಇನ್ನು, ಈ ಆಕ್ಷನ್‌ಗೆ ತಕ್ಕ ಹಾಗೆ ಈ ಬಾರಿ ಆಡಿಯೋ ಮಿಕ್ಸ್‌ ಕೂಡ ಇದೆ.

marikamba jatre gateway at shimoga

ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ, ಯಾವ್ಯಾವ ದಿನ ಏನೇನು ಪೂಜೆ, ಕಾರ್ಯಕ್ರಮ ನಡೆಯಲಿದೆ? ಇಲ್ಲಿದೆ ಪಟ್ಟಿ

point-2ಕಲಾಕೃತಿಯಲ್ಲಿ ಸಹಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ದುರ್ಗಾದೇವಿಯ ತಲೆಗೂದಲನ್ನು ಕಲ್ಕತ್ತದಿಂದ ತರಿಸಲಾಗಿದೆ. ಇದು ಸಹಜ ಕೂದಲಿನಂತಿದೆ. ಇನ್ನು ಹುಲಿಗಾಗಿ ಮುಂಬೈನಿಂದ ಫರ್‌ ತರಿಸಲಾಗಿದೆ. ಅದರ ಮೇಲೆ ರೇಖೆಗಳನ್ನು ಪೇಂಟ್‌ ಮಾಡಲಾಗಿದೆ. 25 ಕಾರ್ಮಿಕರು ಹಗಲು – ರಾತ್ರಿ ಕೆಲಸ ಮಾಡಿದ್ದಾರೆ.  

ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬ ಜಾತ್ರೆ, ಇದೇ ಮೊದಲು ದೇಗುಲದಲ್ಲಿ ಅತ್ಯಂತ ವಿಭಿನ್ನ ಅಲಂಕಾರ, ಐಡಿಯಾ ಯಾರದ್ದು ಗೊತ್ತಾ?

point-3ಓತಿಘಟ್ಟದ ಜೀವನ್‌ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್‌ ನೇತೃತ್ವದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮಹಾದ್ವಾರವನ್ನು ಕಲಾವಿದ ಜೀವನ್‌ ಅವರೆ ನಿರ್ಮಿಸುತ್ತಿದ್ದಾರೆ. ಕೆಜಿಎಫ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ವಿಭಾಗದಲ್ಲಿ ಜೀವನ್‌ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ, ಹೊರ ರಾಜ್ಯದಲ್ಲಿ ವಿವಿಧ ಕಲಾಕೃತಿಗಳನ್ನು ಜೀವನ್‌ ನಿರ್ಮಿಸಿದ್ದರೆ.

marikamba jatre gateway at shimoga

marikamba jatre gateway at shimoga

marikamba jatre gateway at shimoga

marikamba jatre gateway at shimoga

marikamba jatre gateway at shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 11, 2024

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment