ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 ಮಾರ್ಚ್ 2022
ಕೋಟೆ ರಸ್ತೆಯಲ್ಲಿ ಸ್ಥಾಪನೆ ಮಾಡಲಾಗಿರುವ ಮಳಿಗೆಗಳು ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಮೆರಗು ಹೆಚ್ಚಿಸಿವೆ. ಜಾತ್ರೆಗೆ ಬಂದ ಭಕ್ತರು ಮಳಿಗೆಗಳ ಮುಂದೆ ಗುಂಪುಗೂಡಿದ್ದು, ಹಲವು ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ.
ಮಳಿಗೆಗಳ ಮೇಲೆ ಕೇಸರಿ ಧ್ವಜ
ಜಾತ್ರೆಯ ಮಳಿಗೆ ಹಂಚಿಕೆ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಹಿಂದೂಗಳ ಹೊರತು ಅನ್ಯ ಧರ್ಮಿಯರು ಮಳಿಗೆ ಸ್ಥಾಪಿಸಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಹಾಗಾಗಿ ಮಳಿಗೆಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಸ್ಥಾಪನೆ ಆಗಿರುವ ಮಳಿಗೆಗಳ ಮುಂದೆ ಕೇಸರಿ ಧ್ವಜಗಳನ್ನು ಹಾರಿಸಲಾಗಿದೆ.
ನೂರು ಮಳಿಗೆಗಳಿಗೆ ಅವಕಾಶ
ಈ ಭಾರಿ ಜಾತ್ರೆಯಲ್ಲಿ ಸುಮಾರು ನೂರು ಮಳಿಗೆಗಳನ್ನು ಹಾಕಲಾಗಿದೆ. ವಿವಿಧ ತಿಂಡಿ, ತಿನಿಸು, ಕ್ಯಾಂಟೀನ್, ಅಲಂಕಾರಿಕ ವಸ್ತುಗಳು, ಟ್ಯಾಟೋ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಾತ್ರೆಗೆ ಬಂದ ಜನರು ಬಹುತೇಕ ಎಲ್ಲಾ ಮಳಿಗೆಗಳ ಮುಂದೆ ಗುಂಪುಗೂಡಿದ್ದಾರೆ. ತಮ್ಮಿಷ್ಟದ ವಸ್ತುಗಳ ಖರೀದಿಯಲ್ಲಿ ನಿರತವಾಗಿದ್ದಾರೆ.
ಮಾನಿನಿಯರ ಮನ ಸೆಳೆದ ನಾವೆಲ್ಟಿ
ವಿವಿಧ ಬಗೆಯ ಸರಗಳು, ಹಲವು ಡಿಸೈನ್ ಬಳೆಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು ಮಾನಿನಿಯರ ಮನ ಸೆಳೆದಿವೆ. ನಾವೆಲ್ಟಿ ಶಾಪ್’ಗಳ ಮುಂದೆ ಮಹಿಳೆಯರು, ಯುವತಿಯರು ಸಾಲುಗಟ್ಟಿ ನಿಂತಿದ್ದಾರೆ. ತಮ್ಮಿಷ್ಟದ ಚೈನು, ಬಳೆ, ಇಯರ್ ರಿಂಗ್ಸ್ ಆಯ್ಕೆಯಲ್ಲಿ ತೊಡಗಿದ್ದಾರೆ.
ಬಾಜಿ ಕಟ್ಟಿ ಆಟ ಆಡು
ಇನ್ನು, ಜಾತ್ರೆಯಲ್ಲಿ ವಿವಿಧ ಆಟಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಬಾಜಿ ಕಟ್ಟಿ ಆಡುವ ಆಟಗಳು ಹಲವರನ್ನು ಸೆಳೆಯುತ್ತಿವೆ. ಹೆಚ್ಚಿನ ಸಂಖ್ಯೆಯ ಯುವಕರು ಈ ಆಟಗಳಲ್ಲಿ ಮಗ್ನರಾಗಿದ್ದಾರೆ.
ಹಠಕ್ಕೆ ಬೀಳುವ ಮಕ್ಕಳು
ಆಟಿಕೆಗಳ ಮಳಿಗೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಆಟಿಕೆಗಳನ್ನು ಕೊಡಿಸುವಂತೆ ಮಕ್ಕಳು ಪೋಷಕರನ್ನು ದುಂಬಾಲು ಬೀಳುವುದು, ಹಠ ಹಿಡಿಯವುದು ಜಾತ್ರೆಯಲ್ಲಿ ಸಾಮಾನ್ಯವಾಗಿವೆ. ಬಲೂನು, ಪೀಪಿಗಳು ಸೇರಿದಂತೆ ವಿವಿಧ ಆಟಿಕೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಅನ್ಯ ಧರ್ಮಿಯರಿಗೆ ಮಳಿಗೆ ಹಾಕಲು ಅವಕಾಶ ಇಲ್ಲದಿರುವುದು ಮಳಿಗೆಗಳ ಸಂಖ್ಯೆ ಕಡಿಮೆ ಇದೆ. ಆದರೆ ಜಾತ್ರೆಯ ಗಮ್ಮತ್ತಿಗೇನು ಕೊರತೆ ಇಲ್ಲವಾಗಿದೆ. ಬೆಳಗ್ಗೆಯಿಂದಲೇ ಮಳಿಗೆಗಳು ಜನರನ್ನು ಸೆಳೆಯುತ್ತಿವೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422