ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 MARCH 2024
SHIMOGA : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈ ಬಾರಿ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರು ದೇಗುಲದೊಳಗಿನ ಅಲಂಕಾರದ ಉಸ್ತುವಾರಿ ಹೊತ್ತಿದ್ದಾರೆ.
ಮಾ.12ರಿಂದ ಐದು ದಿನ ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆ ನಡೆಯಲಿದೆ. ಮೊದಲ ದಿನ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ಮಾರಿಕಾಂಬೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿ ಪೂಜೆ, ದರ್ಶನದ ಬಳಿಕ ಕೋಟೆ ರಸ್ತೆಯ ಮಾರಿಕಾಂಬ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಮಾ.13ರಿಂದ ಮಾರಿಕಾಂಬ ದೇವಸ್ಥಾನದಲ್ಲಿ ದರ್ಶನ, ಪೂಜೆ ನೆರವೇರಲಿದೆ.
ಈ ಬಾರಿ ಅತ್ಯಂತ ಡಿಫರೆಂಟ್ ಅಲಂಕಾರ
ಈ ಬಾರಿ ಜಾತ್ರೆಯಲ್ಲಿ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರು ಮಾರಿ ಗದ್ದುಗೆ, ಮಾರಿಕಾಂಬ ದೇವಸ್ಥಾನದ ಒಳಾಂಗಣ ಮತ್ತು ಆವರಣದಲ್ಲಿ ಅಲಂಕಾರದ ಜವಾಬ್ದಾರಿ ಹೊತ್ತಿದ್ದಾರೆ. ಹಣ್ಣು, ಕಾಯಿ, ಹೂವುಗಳನ್ನು ಬಳಸಿ ಅಲಂಕಾರ ಮಾಡಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ 50ಕ್ಕೂ ಹೆಚ್ಚು ನುರಿತ ಕೆಲಸಗಾರರು ಹಗಲು – ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸೋಮವಾರ ಮತ್ತಷ್ಟು ಕೆಲಸಗಾರರು ಅಲಂಕಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ಬಗ್ಗೆ ನಿಮಗೆಷ್ಟು ಗೊತ್ತು? ಮೊದಲ ರೈಲು ಬಂದಿದ್ದು ಯಾವಾಗ? ಈಗ ದಿನ ಎಷ್ಟು ಪ್ರಯಾಣಿಕರು ಓಡಾಡ್ತಿದ್ದಾರೆ?
ಹೇಗಿದೆ ಈ ಬಾರಿ ಅಲಂಕಾರ?
ಬೇಲದ ಹಣ್ಣು, ಕಬ್ಬು, ತೆಂಗಿನ ಕಾಯಿ, ಗಾಜಿನ ಗುಂಡು, ಬಳೆ, ಅರಿಶಿಣ, ಕುಂಕುಮ ಸೇರಿದಂತೆ ವಿವಿಧ ಹಣ್ಣುಗಳು, ಹೂವಿನಿಂದ ಅಲಂಕಾರ ಮಾಡಲು ಯೋಜಿಸಲಾಗಿದೆ. ಈಗಾಗಲೇ ದೇವಸ್ಥಾನದ ಒಳಾಂಗಣದಲ್ಲಿ ಕಬ್ಬು, ತೆಂಗಿನ ಕಾಯಿ, ಬೇಲದ ಹಣ್ಣಿನಿಂದ ಅಲಂಕಾರ ಮಾಡಲಾಗಿದೆ. ಕೃತಕ ಹೂವುಗಳನ್ನು ಕೂಡ ಹಾಕಲಾಗಿದೆ. ದೇವಸ್ಥಾನದ ಆವರಣದಲ್ಲಿಯು ಅಲಂಕಾರ ಕಣ್ಸೆಳೆಯುತ್ತಿದೆ. ಉಳಿದ ಹಣ್ಣುಗಳು, ಹೂವವನ್ನು ಮಾರಿಕಾಂಬೆಯು ಗಾಂಧಿ ಬಜಾರ್‌ನಿಂದ ದೇಗುಲಕ್ಕೆ ಬರುವ ಹೊತ್ತಿಗೆ ಹಾಕಲು ಯೋಜಿಸಲಾಗಿದೆ. ಈವರೆಗಿನ ಅಲಂಕಾರದ ಫೋಟೊಗಳು ಇಲ್ಲಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422