ಶಿವಮೊಗ್ಗದ ಕೃಷಿ ಮೇಳಕ್ಕೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಜನರು, ಏನೇನಿದೆ ಮೇಳದಲ್ಲಿ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ನವುಲೆಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ರೈತರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಮೊದಲ ದಿವನೇ ಸುಮಾರು 50 ಸಾವಿರದಷ್ಟು ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ.

ಕೃಷಿಯಲ್ಲಿನ ಆವಿಷ್ಕಾರಗಳು, ಸಂಶೋಧನೆ ಹಾಗೂ ತಾಂತ್ರಿಕತೆಗಳ ಬಗ್ಗೆ ರೈತರು ಮಾಹಿತಿ ಪಡೆದರು. ಮೇಳದಲ್ಲಿ ಆಹಾರ, ತಿಂಡಿ ಮಳಿಗೆಗಳು ಇದ್ದು, ಧಾರವಾಡ ಪೇಡೆ, ಬೆಳಗಾವಿಯ ಕುಂದಾ, ಮೇಲುಕೋಟೆಯ ಪುಳಿಯೊಗರೆ, ಮಲೆನಾಡಿನ ಸಿಹಿ ಖಾದ್ಯ ತೊಡದೇವು, ಕೋಳಿಗಸಿ, ಅಕ್ಕಿ ಕಡುಬು, ಚಿಕನ್ ಬಿರಿಯಾನಿ ಸ್ಟಾಲ್‌ಗಳು ಇಲ್ಲಿವೆ. ಬಟ್ಟೆ, ಗೃಹೋಪಯೋಗಿ ವಸ್ತುಗಳು, ಆಟಿಕೆಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮೊದಲ ದಿನವೇ ನರ್ಸರಿಗಳಲ್ಲಿ ಮುಗಿಬಿದ್ದಿದ್ದ ರೈತರು ಹಣ್ಣು, ತರಕಾರಿ, ಹೂವಿಮ ಗಿಡಗಳು, ಅರಣ್ಯ ಕೃಷಿಗೆ ಸಸಿಗಳನ್ನು ಖರೀದಿಸಿ ಕೊಂಡೊಯ್ದರು.

ಮೇಳದ ಮೊದಲ ದಿನ 45,000 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಆದರೆ ನೋಂದಣಿ ಮಾಡಿಸಿಕೊಳ್ಳದೆ ಭೇಟಿ ನೀಡಿದವರ ಸಂಖ್ಯೆ ಅಧಿಕವಿದೆ.

ಕೃಷಿ ಮತ್ತು ತೋಟಗಾರಿಕೆ ಮೇಳ 2025ರಲ್ಲಿ ಸುಮಾರು 225 ಹೈಟೆಕ್ ಮಳಿಗೆಗಳು, 150 ಎಕಾನಮಿ ಮಳೆಗಳು, 25 ಯಂತ್ರೋಪಕರಣ ಮಳಿಗೆಗಳು, 40 ಆಹಾರ ಮಳಿಗೆಗಳು ಸೇರಿ ಸುಮಾರು 450ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. (ಕೆಳಗಿರುವ ಫೋಟೊಗಳ ಮೇಲೆ ಕ್ಲಿಕ್‌ ಮಾಡಿ 30ಕ್ಕೂ ಹೆಚ್ಚು ಫೋಟೊ ವೀಕ್ಷಿಸಿ)

ಎರಡನೇ ದಿನವು ಉತ್ತಮ ಪ್ರತಿಕ್ರಿಯೆ

ಎರಡನೇ ದಿನವು ಕೃಷಿ ಮೇಳಕ್ಕೆ ರೈತರು, ಶಿವಮೊಗ್ಗದ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ವಿವಿಧ ಸ್ಟಾಲ್‌ಗಳಿಗೆ ತೆರಳಿ ಮಾಹಿತಿ ಪಡೆದು, ಖರೀದಿಯಲ್ಲಿ ತೊಡಿಗಿಸಕೊಂಡಿದ್ದಾರೆ.

ಇದನ್ನೂ ಓದಿ » ಸಿ.ಟಿ.ರವಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಕಂಪ್ಲೇಂಟ್

Krushi Mela

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment