ನೌಕರರ ಮುಷ್ಕರ ಅಂತ್ಯ, ಶಿವಮೊಗ್ಗದಿಂದ ಹೊರಡಲು ಸಿದ್ಧವಾದವು ಸರ್ಕಾರಿ ಬಸ್ಸುಗಳು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020

ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಸರ್ಕಾರದ ಜೊತೆಗೆ ನೌಕರರ ಸಂಘ ನಡೆಸಿದ ಸಭೆಯಲ್ಲಿ ಮುಷ್ಕರ ಹಿಂಪಡೆಯುವುದಾಗಿ ನೌಕರರು ತಿಳಿಸಿದ್ದಾರೆ. ಅದರಂತೆ ಶಿವಮೊಗ್ಗ ಬಸ್ ನಿಲ್ದಾಣದಿಂದಲೂ ಬಸ್ ಸಂಚಾರ ಆರಂಭವಾಗುತ್ತಿದೆ.

ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಜೀಪ್‌ನಲ್ಲಿ ಎಸ್ಕಾರ್ಟ್, ಏನಿದು ಎಸ್ಕಾರ್ಟ್? ಕಾರಣವೇನು?

ನಿಲ್ದಾಣಕ್ಕೆ ಬಂದ ಬಸ್ಸುಗಳು

ಮುಷ್ಕರ ಹಿಂಪಡೆಯುತ್ತಿದ್ದಂತೆ ನೌಕರರು ಕೆಲಸಕ್ಕೆ ಮರಳುತ್ತಿದ್ದಾರೆ. ಬೆಳಗ್ಗೆಯಿಂದ ಖಾಲಿ ಇದ್ದ ನಿಲ್ದಾಣಕ್ಕೆ ಬಸ್ಸುಗಳು ಬರಲು ಆರಂಭವಾಗಿದೆ. ಈ ನಡುವೆ ಅನಿಶ್ಚಿತತೆಯಿಂದಾಗಿ ಗೊಂದಲಕ್ಕೀಡಾಗಿದ್ದ ಪ್ರಯಾಣಿಕರು ಈಗ ಬಸ್ ನಿಲ್ದಾಣದ ಕಡೆ ಬರಲು ಆರಂಭಿಸಿದ್ದಾರೆ.

ಇದನ್ನೂ ಓದಿ | ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?

ಪ್ರಯಾಣಿಕರ ಅನುಕೂಲಕ್ಕೆ ಸೇವೆ

ಶಿವಮೊಗ್ಗ ಬಸ್ ನಿಲ್ದಾಣದಿಂದ ಮೊದಲಿಗೆ ಒಂದೆರಡು ಬಸ್ಸುಗಳು ಸಂಚಾರ ಆರಂಭಿಸಿದವು. ತಿರುವಣಮಲೈ, ಹೈದರಾಬಾದ್‍ಗೆ ಬಸ್ಸುಗಳು ಹೊರಟಿವೆ. ಅದರ ಬೆನ್ನಿಗೆ ಇನ್ನಷ್ಟು ಬಸ್ಸುಗಳನ್ನು ಬಿಡಲು ವಿಭಾಗದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಕಡೆಗೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಲು ನಿರ್ಧರಿಸಲಾಗಿದೆ.

131507284 1287839428244141 7178018059179929249 o.jpg? nc cat=108&ccb=2& nc sid=8bfeb9& nc ohc=QeHfRGTNPn8AX8e9lJB& nc ht=scontent.fblr11 1

130968310 1287839384910812 3383221334714170531 o.jpg? nc cat=107&ccb=2& nc sid=8bfeb9& nc ohc=CiIpeWXxdsYAX 4 Nti& nc ht=scontent.fblr11 1

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment