ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್‌, ಯಾವ ಸಮಯದಿಂದ ಶುರುವಾಗುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 31 AUGUST 2023

SHIMOGA : ವಿಮಾನ ನಿಲ್ದಾಣಕ್ಕೆ (Airport) ಸಾರ್ವಜನಿಕರು ಹೋಗಿ ಬರಲು ಅನುಕೂಲವಾಗಲಿ ಎಂದು ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಸೇವೆ ಆರಂಭಿಸಲಾಗಿದೆ. ಶಿವಮೊಗ್ಗ – ವಿಮಾನ ನಿಲ್ದಾಣ – ಕಾಚಿನಕಟ್ಟೆಗೆ ಮಾರ್ಗದಲ್ಲಿ ಬಸ್ಸು ಸಂಚರಿಸಲಿದೆ. ಇದರ ಸಮಯವನ್ನು ಸಾರಿಗೆ ಸಂಸ್ಥೆ ಬಿಡುಗಡೆ ಮಾಡಿದೆ.

ಶಿವಮೊಗ್ಗದಿಂದ ಬೆಳಗ್ಗೆ 8.30 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಹಾಗೂ ಕಾಚಿನಕಟ್ಟೆಯಿಂದ ಬೆಳಗ್ಗೆ 9 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಸಂಜೆ 6.30 ವರೆಗೆ ಬಸ್‍ಗಳ ಓಡಾಟವಿರುತ್ತದೆ.  ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿ –  ಶಿವಮೊಗ್ಗ – ಬೆಂಗಳೂರು ಇ-ಬಸ್‌ ಟಿಕೆಟ್‌ ರೇಟ್‌ ಕಡಿತ, ವೀಕೆಂಡ್‌ಗೆ ಪ್ರತ್ಯೇಕ ದರ ಫಿಕ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment