SHIVAMOGGA LIVE NEWS | 28 DECEMBER 2024
ಶಿವಮೊಗ್ಗ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರು ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರ ಆರಂಭಕ್ಕು ಮುನ್ನ ಸರ್ಕಾರ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ KSRTC ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸಂದರ್ಭ ಮುಖಂಡರು ಮುಷ್ಕರಕ್ಕೆ ಮೂರು ಪ್ರಮುಖ ಕಾರಣ ವಿವರಿಸಿದರು.
ಮೂರು ಪ್ರಮುಖ ಡಿಮಾಂಡ್‌ಗಳು
» ಡಿಮಾಂಡ್ 1 : KSRTCಯಲ್ಲಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಅದರಂತೆ ಬಸವರಾಜ ಬೊಮ್ಮಾಯಿ ಸರ್ಕಾರ ವೇತನ ಪರಿಷ್ಕರಿಸಿತ್ತು. ಆದರೆ ವೇತನ ಹೆಚ್ಚಳ 38 ತಿಂಗಳಿಂದ ಬಾಕಿ ಇದೆ. ಇದನ್ನು ಕೂಡಲೆ ಪಾವತಿಸಬೇಕು.
» ಡಿಮಾಂಡ್ 2 : ಕೈಗಾರಿಕೆ ಒಪ್ಪಂದಂತೆ ನಾಲ್ಕು ವರ್ಷವಾದರು ವೇತನ ಪರಿಷ್ಕರಣೆ ಆಗಿಲ್ಲ. ಈ ಕೂಡಲೆ ಸರ್ಕಾರ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಬೇಕು.
» ಡಿಮಾಂಡ್ 3 : ನಿವೃತ್ತ ನೌಕರರಿಗೆ ಸುತ್ತೋಲೆ ಹಣ ಬಿಡಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಅಗ್ರಹಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ಕೈಗಾರಿಕಾ ಒಪ್ಪಂದದಂತೆ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ವೇತನ ಪರಿಷ್ಕರಣೆ ಮಾಡಿಲ್ಲ. ಹಲವು ಬಾರಿ ಸಭೆಯಾದರು ನಮ್ಮ ಬೇಡಿಕೆ ಈಡೇರಿಲ್ಲ. ಈಚೆಗೆ ಬೆಳಗಾವಿ ವಿಧಾನಸೌಧದ ಮುಂಭಾಗ ಹೋರಾಟ ಮಾಡಿದ್ದೆವು. ಕಾನೂನು ಪ್ರಕಾರ ಮುಷ್ಕರಕ್ಕೆ 21 ದಿನ ಮೊದಲು ನೊಟೀಸ್ ಕೊಡಬೇಕು. ಅಂದು ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ನಿಯೋಗಕ್ಕೆ ಮುಷ್ಕರದ ನೊಟೀಸ್ ನೀಡಿದ್ದೇವೆ. ಈತನ ಸರ್ಕಾರ ನಮ್ಮನ್ನು ಕರೆದು ಮಾತನಾಡಿಲ್ಲ.
ಮಹಾದೇವ್, ಕೆಎಸ್ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ
ಇದನ್ನೂ ಓದಿ » ಕೆಎಸ್‌ಆರ್‌ಟಿಸಿಯಿಂದ 100 ಅಶ್ವಮೇಧ ಬಸ್ಸುಗಳು, ಹೇಗಿರುತ್ತೆವೆ ಈ ಬಸ್ಸುಗಳು?
ಕೆಎಸ್‌ಆರ್‌ಟಿಸಿ ನೌಕರರು ಶಕ್ತಿ ಯೋಜನೆಯನ್ನು ಯಾವುದೇ ವಿವಾದ ಇಲ್ಲದೆ ಯಶಸ್ವಿಗೊಳಿಸಿ, ಸರ್ಕಾರಕ್ಕೆ ಉತ್ತಮ ಹೆಸರು ತಂದಿದ್ದಾರೆ. ಆದರೆ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ಬಾಕಿ ಇರುವ ಹಣವನ್ನು ಸರ್ಕಾರ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಶೇ.40ರಷ್ಟು ಮಾತ್ರ ಪವಾತಿಸುತ್ತಿದೆ. ಇದರಿಂದ ನಿಗಮಗಳಿಗೆ ಭಾರಿ ತೊಂದರೆ ಆಗುತ್ತಿದೆ.
ರಾಜು ಚಿನ್ನಸ್ವಾಮಿ, ವಿಭಾಗೀಯ ಅಧ್ಯಕ್ಷ, ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್
ಸುದ್ದಿಗೋಷ್ಠಿಯಲ್ಲಿ ಲೋಕನಾಥ್, ಕರಿಬಸಪ್ಪ, ನಾಗರಾಜ್, ಮಂಜಪ್ಪ, ಧರ್ಮರಾಜ್, ಗುರುರಾಜ್, ಪೀರ್ ಸಾಬ್ ಸೇರಿ ಹಲವರು ಇದ್ದರು.
ಇದನ್ನೂ ಓದಿ » ಶಕ್ತಿ ಯೋಜನೆ, ಶಿವಮೊಗ್ಗದಲ್ಲಿ ಈವರೆಗೂ ಉಚಿತವಾಗಿ ಓಡಾಡಿದ ಮಹಿಳೆಯರೆಷ್ಟು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200