SHIVAMOGGA LIVE NEWS | 12 FEBRUARY 2024
SHIMOGA : ನಮ್ಮ ನಡುವೆ ಇರುವ ಮೌಡ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ವಿಮರ್ಶೆಯ ಪ್ರಜ್ಞೆ ಬೆಳೆಸಿಕೊಳ್ಳಲು ಕುವೆಂಪು ಸಾಹಿತ್ಯ ಪೂರಕವಾಗಿದೆ ಎಂದು ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ದೇವಂಗಿ ಡಿ.ಆರ್.ರತ್ನಾಕರ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು.
ಕುವೆಂಪು ಮೌಡ್ಯ ವಿರೋಧದ ಪ್ರತೀಕ. ಧರ್ಮ, ದೇವರು, ಪುರೋಹಿತ, ರಾಜಕೀಯ, ಹೆಣ್ಣು, ಗಂಡು ಭಾಷೆ, ಸಾಮಾಜಿಕ, ಜಾತಿ, ಸಾಂಸ್ಕೃತಿಕ ಸೇರಿದಂತೆ ಎಲ್ಲ ವಲಯಗಳಲ್ಲಿ ಮೌಡ್ಯಗಳನ್ನು ವಿರೋಧಿಸಿದವರು. ತಮ್ಮ ನಡೆಯಿಂದ ಎದುರಾಗುವ ಯಾವ ವಿರೋಧವನ್ನೂ ಲೆಕ್ಕಿಸದೆ ಜಗತ್ತಿನ ಉನ್ನತೀಕರಣ ಬಯಸುತ್ತಿದ್ದರು ಎಂದು ಹೇಳಿದರು.
ವಿಚಾರ ಅರಗಿಸಿಕೊಂಡಾಗ ಜ್ಞಾನದ ಅರಿವು
ವಿಶ್ವಮಾನ್ಯ ವ್ಯಕ್ತಿತ್ವ ಹೊಂದಿದ್ದ ಕುವೆಂಪು, ವೈಚಾರಿಕ ನೆಲೆಗಳಲ್ಲಿ ಮಾತನಾಡುತ್ತಾ ಮೌಡ್ಯಕ್ಕೆ ಪರಿಹಾರವೇನು ಎನ್ನುವುದನ್ನು ತಿಳಿಸಿಕೊಟ್ಟರು. ಯಾವುದನ್ನೂ ಪ್ರಶ್ನಿಸದೆ ಒಪ್ಪಬೇಡಿ. ವಿಮರ್ಶಕ ಪ್ರಜ್ಞೆ ಕಳೆದುಕೊಳ್ಳಬಾರದು. ಎಷ್ಟು ದೇವರ ಪೂಜಿಸಿದರೇನು ನಿನ್ನ ನೀ ಅರಿಯದೊಡೆ ಏನು ಪ್ರಯೋಜನ. ಪುಸ್ತಕ ಜ್ಞಾನವಲ್ಲ, ಅದರೊಳಗಿನ ವಿಚಾರಗಳನ್ನು ಅರಗಿಸಿಕೊಂಡಾಗ ಜ್ಞಾನದ ಅರಿವಾಗುತ್ತದೆ ಎಂಬುದು ಕುವೆಂಪು ಅವರ ವಿಚಾರಗಳಾಗಿದ್ದವು ಎಂದರು.
ಶೋಷಣೆಗಳೆ ಶರಣ ಚಳವಳಿಗೆ ಪ್ರೇರಕ
ಜಿ.ಬಿ.ಲಲಿತಾ ದತ್ತಿ ಉಪನ್ಯಾಸದಲ್ಲಿ ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಮಾತನಾಡಿದ ಉಪನ್ಯಾಸಕಿ ಡಾ.ಜಿ.ಕೆ.ಪ್ರೇಮಾ, ನಮ್ಮ ನಡುವೆ ಹೆಣ್ಣು ಮಕ್ಕಳ ಮೇಲೆ ನಡೆದ ಬಹಳಷ್ಟು ಶೋಷಣೆಗಳನ್ನು ಮರೆಮಾಚಲಾಗಿದೆ. ಇಂತಹ ಶೋಷಣೆಗಳೇ ಶರಣ ಚಳವಳಿಗೆ ಪ್ರೇರಕವಾಯಿತು. ಶರಣ ಪರಂಪರೆಯಲ್ಲಿನ 30ಕ್ಕೂ ಹೆಚ್ಚು ಮಹಿಳಾ ವಚನಕಾರರು ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಸಾರಿದರು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ, ಪ್ರಾಚಾರ್ಯೆ ಪ್ರೊ.ಎನ್.ರಾಜೇಶ್ವರಿ ಇದ್ದರು.
ಇದನ್ನೂ ಓದಿ – ಶಿವಮೊಗ್ಗ ಈಗ ಕಾದ ಕಾವಲಿ, ಇನ್ನೆಷ್ಟು ದಿನ ಇರುತ್ತೆ ಇಷ್ಟು ಬಿಸಿಲು, ತಾಪಮಾನ ಹೆಚ್ಚಲು ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200