ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಸೆಪ್ಟಂಬರ್ 2020
ದುಡ್ಡಿದ್ದವರು ಹೊಲದೊಡೆಯನಾಗಲು ಪ್ರಚೋದಿಸುವ ರೈತ ವಿರೋಧಿ ಕಾಯ್ದೆಗಳ ಜಾರಿಗೆ ಮುನ್ನ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಕರುನಾಡ ಯುವಶಕ್ತಿ ಸಂಘಟನೆ (ಕೆವೈಎಸ್) ಮನವಿ ಸಲ್ಲಿಸಿತು.
ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ರೈತರು ಮತ್ತು ಇತರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಯಾವುದೇ ಸಂದರ್ಭದಲ್ಲಿ ಬಂದ್‌ನಂತಹ ನಿರ್ಧಾರ ಕೈಗೊಂಡರೂ ಕೂಡ ನಮ್ಮ ಸಂಘಟನೆ ಬೆಂಬಲಿಸುತ್ತದೆ ಎಂದು ಸಂಘಟನೆ ತಿಳಿಸಿತು.
ದೇವರಾಜು ಅರಸು ಅವರು ಉಳುವವನೆ ಹೊಲದೊಡೆಯ ಎಂಬ ಕಾನೂನು ಜಾರಿಗೆ ತಂದರೆ ಬಿಜಿಪಿ ಸರ್ಕಾರ ದುಡ್ಡಿದ್ದವನೇ ಹೊಲದೊಡೆಯ ಎಂಬ ಕಾನೂನು ತರಲು ಹೊರಟಿದೆ.ಇದು ರೈತರ ಸರ್ವನಾಶಕ್ಕೆ ಕಾರಣವಾಗುತ್ತದೆ ಮತ್ತು ಕೆಲವೇ ವರ್ಷಗಳಲ್ಲಿ ಭಾರತ ಆಹಾರ ಭದ್ರತೆಯನ್ನು ಕಳೆದುಕೊಳ್ಳುತ್ತದೆ. ಕಾರ್ಮಿಕರು ಬೀದಿಪಾಲಾಗುತ್ತಾರೆ. ಕೃಷಿ ಮಾರುಕಟ್ಟೆಗಳಲ್ಲಿ ಖಾಸಗಿ ದಲ್ಲಾಳಿಗಳೇ ಹೆಚ್ಚುತ್ತಾರೆ. ರೈತರಿಗೆ ನಿಖರವಾದ ಬೆಲೆ ಸಿಕ್ಕುವುದಿಲ್ಲ ಎಂದು ಆರೋಪಿಸಿದರು.
ಕೆವೈಎಸ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಸ್. ವಸಂತಕುಮಾರ್, ರಾಜ್ಯಾಧ್ಯಕ್ಷ ಶರವಣ ಎ.ಆರ್, ರಾಜ್ಯ ಕಾರ್ಯದರ್ಶಿ ಎ.ಎಸ್.ಚಿದಾನಂದ, ನಗರಾಧ್ಯಕ್ಷ ಎನ್.ರಮೇಶ್, ಶಿವಕುಮಾರ್ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422