ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 ಮಾರ್ಚ್ 2022
ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ಸಿನಲ್ಲಿ ಇರಿಸಿದ್ದ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನ ಮಾಡಲಾಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವಿದ್ಯಾರ್ಥಿ ಗಗನ ಎಂಬುವವರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಕಳ್ಳತನ?
ಗಗನ ಅವರು ಶಿರಸಿಯಿಂದ ಚನ್ನರಾಯಪಟ್ಟಣ ತೆರಳುವ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ ಗಗನ ಅವರು ಬಸ್ಸಿನಿಂದ ಇಳಿದು ಶೌಚಾಲಯಕ್ಕೆ ತೆರಳಿದ್ದರು. ಹಿಂತಿರುಗಿ ಬಂದಾಗ ಬಸ್ಸಿನಲ್ಲಿ ಲಗೇಜ್ ಬ್ಯಾಗ್ ಮಾತ್ರ ಇದ್ದು, ಲ್ಯಾಪ್ ಟಾಪ್ ಬ್ಯಾಗ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ದೂರು ದಾಖಲು ಮಾಡಿದ್ದಾರೆ.
ಲ್ಯಾಪ್ ಟಾಪ್ಬ್ ಬ್ಯಾಗಿನಲ್ಲಿದ್ದ ಲೆನೊವೊ ಕಂಪನಿಯ ಲ್ಯಾಪ್ ಟಾಪ್, ಸ್ಯಾಮ್ ಸಂಗ್ ಕಂಪನಿಗೆ ಸೇರಿದ ಮೊಬೈಲ್, ಚಾರ್ಜರ್, ಪವರ್ ಬ್ಯಾಂಕ್, ಹೆಡ್ ಫೋನ್, ಡೇಟಾ ಪುಸ್ತಕಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಯಾಣಿಕರೆ ಎಚ್ಚರ
ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಬ್ಯಾಗುಗಳನ್ನು ಕದಿಯುವ ಕಳ್ಳರ ಹಾವಳಿ ಹೆಚ್ಚಳವಾಗಿದೆ. ಲ್ಯಾಪ್ ಟಾಪ್ ಬ್ಯಾಗ್ ಬಸ್ಸಿನಲ್ಲಿ ಇಟ್ಟು ಶೌಚಾಲಯಕ್ಕೆ ಅಥವಾ ಅಂಗಡಿಗೆ ತೆರಳುವವರನ್ನು ಗಮನಿಸಿ ಕಳ್ಳತನ ಮಾಡಲಾಗುತ್ತಿದೆ. ಈಗಾಗಲೇ ಹಲವರು ಲ್ಯಾಪ್ ಟಾಪ್ ಸೇರಿದಂತೆ ಪ್ರಮುಖ ವಸ್ತುಗಳು, ದಾಖಲೆಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳರ ಹಾವಳಿ, ಕೆಲವೆ ನಿಮಿಷದಲ್ಲಿ ಯುವತಿ ಬ್ಯಾಗ್ ನಾಪತ್ತೆ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















