ಶಿವಮೊಗ್ಗ ಡಿಸಿ ಕಚೇರಿ ಮುಂದೆ ಪಾಸ್‌ಗೆ ಜನ ಸಾಗರ, ಅರ್ಜಿ ಸಲ್ಲಿಸಿದ್ದು 200 ಮಂದಿ, ಪಾಸ್ ಸಿಕ್ಕಿದ್ದೆಷ್ಟು ಜನಕ್ಕೆ ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ
shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 14 ಏಪ್ರಿಲ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಲಾಕ್‍ಡೌನ್ ಸಂದರ್ಭ ತುರ್ತು ಕಾರಣಕ್ಕೆ ಬೇರೆ ಜಿಲ್ಲೆಗಳಿಗೆ ತೆರಳಲು ಜಿಲ್ಲಾಡಳಿತ ಪಾಸ್ ವಿತರಿಸುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಸೋಮವಾರ ಭಾರಿ ಜನ ಸೇರಿದ್ದರು. ಕೊನೆಗೆ ಬೆರಳೆಣಿಕೆಯಷ್ಟು ಜನಕ್ಕಷ್ಟೇ ಪಾಸ್ ಲಭಿಸಿದೆ.

ಮೂರು ದಿನದ ಬಳಿಕ ಪಾಸ್

ಗುಡ್ ಫ್ರೈಡೆ, ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದಿದ್ದರಿಂದ ಪಾಸ್‍ ವಿತರಣೆ ಆಗಿರಲಿಲ್ಲ. ಹಾಗಾಗಿ ಸೋಮವಾರ ನೂರಾರು ಜನರು ಪಾಸ್‍ಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು.

93041948 1097534727274613 6273588433537466368 n.jpg? nc cat=102& nc sid=8024bb& nc ohc=SPiM fd9r9IAX Sd7aH& nc ht=scontent.fblr1 3

ಸಾಮಾಜಿಕ ಅಂತರಕ್ಕೆ ಬೆಲೆ ಕೊಡಲಿಲ್ಲ

ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಗೊಂದಲ ಆಗದಂತೆ ತಡೆಯಲು ಪೊಲೀಸರು ಸರತಿ ಸಾಲು ಮಾಡಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯು ಸೂಚಿಸುತ್ತಿದ್ದರು. ಆದರೆ ಈ ಬಗ್ಗೆ ಜನರು ಕ್ಯಾರೆ ಅನ್ನಲಿಲ್ಲ.

93324774 1097521223942630 889468979469352960 n.jpg? nc cat=104& nc sid=110474& nc ohc=Og0J0A nTrkAX quILQ& nc ht=scontent.fblr1 4

200ಕ್ಕೂ ಹೆಚ್ಚು ಅರ್ಜಿ

ಒಂದೇ ದಿನ 200ಕ್ಕೂ ಹೆಚ್ಚು ಜನರು ಪಾಸ್‍ಗಾಗಿ ಅರ್ಜಿ ಸಲ್ಲಿಸಿದರು. ಬಹುತೇಕರು ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣ ನೀಡಿದ್ದರು. ಕೆಲವು ರೈತರು ಬೆಳೆ ಸಾಗಣೆಗೆ, ಮತ್ತಷ್ಟು ಮಂದಿ ಕುಟುಂಬದವರನ್ನು ಕರೆತರಲು, ಕುಟುಂಬವನ್ನು ಸೇರಲು ತೆರಳಲು ಅರ್ಜಿ ಸಲ್ಲಿಸಿದ್ದರು. ಆದರೆ ಕೂಲಂಕಷ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಅವರು 30 ಅರ್ಜಿಗಳನ್ನಷ್ಟೇ ಪರಿಗಣಿಸಿ ಪಾಸ್ ವಿತರಿಸಿದ್ದಾರೆ.

93374129 1097521137275972 3236072392258224128 n.jpg? nc cat=102& nc sid=110474& nc ohc=PBftJ6bt0L0AX 7cqdt& nc ht=scontent.fblr1 3

ಬಿಗಿ ಬಂದೋಬಸ್ತ್‍ನಲ್ಲಿ ಪಾಸ್ ವಿತರಣೆ

ಪಾಸ್ ವಿತರಣೆಗೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಂಜೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೊಲೀಸರು ಮೈಕ್‍ನಲ್ಲಿ ಅನೌನ್ಸ್ ಮಾಡಿ ಪಾಸ್ ವಿತರಣೆ ಮಾಡಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment