CITY NEWS, 8 SEPTEMBER 2024 : ಸಾವಿರ ಕೋಟಿಯ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಶಿವಮೊಗ್ಗದ ನಾಗರಿಕರಿಗೆ ಹೊಸ ಸಮಸ್ಯೆಗಳು ಶುರುವಾಗಿವೆ. ನಗರದಾದ್ಯಂತ ಅಳವಡಿಸಿರುವ ಲಾಕಿಂಗ್ ಟೈಲ್ಸ್ಗಳು (Locking Tiles) ಜನರ ಸುಗಮ ಸಂಚಾರಕ್ಕೆ ಬ್ರೇಕ್ ಹಾಕುತ್ತಿವೆ. ನಮ್ಮೂರು ಸ್ಮಾರ್ಟ್ ಸಿಟಿ ಆಗುವ ಮೊದಲೇ ಚೆನ್ನಾಗಿತ್ತು ಎಂದು ಜನರ ಗೊಣಗುವಂತಾಗಿದೆ.
ನೆಮ್ಮದಿಯ ಒಡಾಟಕ್ಕೆ ‘ಲಾಕ್ʼ
ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ವಾರ್ಡ್ಗಳಲ್ಲಿ ರಸ್ತೆಯ ಎರಡು ಬದಿ ಮತ್ತು ಫುಟ್ ಪಾತ್ಗಳಲ್ಲಿ ಲಾಕಿಂಗ್ ಟೈಲ್ಸ್ ಹಾಕಲಾಗಿದೆ. ಇದರಿಂದ ನಗರದ ರಸ್ತೆಗಳಿಗೆ ಹೈಟೆಕ್ ಲುಕ್ ಬಂದಿತ್ತು. ಆದರೆ ಈ ಲುಕ್ ಕೆಲವೇ ತಿಂಗಳಲ್ಲಿ ಜನರ ನೆಮ್ಮದಿ ಕಸಿಯುತ್ತಿದೆ. ಲಾಕಿಂಗ್ ಟೈಲ್ಸ್ಗಳ ಕಾರಣಕ್ಕೆ ಎಲ್ಲಿ ಬಿದ್ದು ಕೈ, ಕಾಲು ಮುರಿದುಕೊಳ್ಳುತ್ತೇವೋ ಎಂದು ಜನರು ಆತಂಕಕ್ಕೀಡಾಗಿದ್ದಾರೆ.
![]() |
ಲಾಕಿಂಗ್ ಟೈಲ್ಸ್ನಿಂದ ಏನೆಲ್ಲ ಸಮಸ್ಯೆಯಾಗ್ತಿದೆ?
» ಸಮಸ್ಯೆ 1 : ರಸ್ತೆಯ ಎರಡು ಬದಿಯಲ್ಲಿ ಲಾಕಿಂಗ್ ಟೈಲ್ಸ್ ಹಾಕಲಾಗಿದೆ. ನೀರಿನ ಪೈಪ್ ಲೈನ್, ಕೇಬಲ್ ಅಳವಡಿಕೆ, ಚರಂಡಿ ರಿಪೇರಿ ಸೇರಿದಂತೆ ನಾನಾ ಕಾರಣಕ್ಕೆ ಲಾಕಿಂಗ್ ಟೈಲ್ಸ್ ತೆಗೆಯಲಾಗುತ್ತಿದೆ. ಇವುಗಳನ್ನ ಮತ್ತೆ ಅಳವಡಿಸದೆ ಹಾಗೆ ಬಿಡಲಾಗಿದೆ. ಇದರಿಂದ ಜನರು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗಿದೆ.
» ಸಮಸ್ಯೆ 2 : ವಿವಿಧೆಡೆ ಲಾಕಿಂಗ್ ಟೈಲ್ಸ್ಗಳನ್ನೇ ಹಾಕದೆ ಕಾಮಗಾರಿ ಅರೆಬರೆ ಮಾಡಿರುವ ಆರೋಪವಿದೆ. ಇಂತಹ ಕಡೆ ಲಾಕಿಂಗ್ ಟೈಲ್ಸ್ಗಳೇ ಇಲ್ಲವಾಗಿದೆ.
» ಸಮಸ್ಯೆ 3 : ಮೇಲ್ನೋಟಕ್ಕೆ ಲಾಕಿಂಗ್ ಟೈಲ್ಸ್ಗಳಿವೆ. ಆದರೆ ಕಾಮಗಾರಿ ಸಮರ್ಪಕವಾಗಿ ಆಗದೆ ಟೈಲ್ಸ್ ಕುಸಿಯುತ್ತಿವೆ. ಜನ ಫುಟ್ ಪಾತ್ ಮೇಲೆ ನಡೆಯಲು, ರಸ್ತೆ ಬದಿಯಲ್ಲಿ ವಾಹನ ಓಡಿಸಲು ಹೆದರುವಂತಾಗಿದೆ.
» ಸಮಸ್ಯೆ 4 : ರಸ್ತೆ ತಿರುವುಗಳಲ್ಲು ಈ ಟೈಲ್ಸ್ ಹಾಕಲಾಗಿದೆ. ಮಳೆಯಾದರೆ ಈ ತಿರುವುಗಳಲ್ಲಿ ದ್ವಿಚಕ್ರ ವಾಹನ ಸವಾರರು ಮೈಯಲ್ಲ ಕಣ್ಣಾಗಿಸಿಕೊಳ್ಳಬೇಕಾಗಿದೆ. ಯಾಮಾರಿದರೆ ಆಸ್ಪತ್ರೆ ಹಾದಿ ಹಿಡಿಯಬೇಕಾಗುತ್ತದೆ.
» ಸಮಸ್ಯೆ 5 : ಕೆಲವೆಡೆ ಟೈಲ್ಸ್ಗಳನ್ನು ತೆಗೆಯಲಾಗಿದೆ. ಅದಕ್ಕೆ ಕಾರಣವೇನು ಎಂಬುದು ಸ್ಥಳೀಯರಾರಿಗೂ ಗೊತ್ತಿಲ್ಲ. ಈಗ ಅಲ್ಲಿ ಗುಂಡಿಗಳಾಗಿದ್ದು, ಪಾಲಿಕೆಯಾಗಲಿ, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಾಗಲಿ ಇತ್ತ ಕಣ್ಣು ಹಾಯಿಸಿಲ್ಲ. ಜನರಿಗೆ ಸಮರ್ಪಕ ಕಾರಣವನ್ನು ನೀಡಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಗೆ ಶಿವಮೊಗ್ಗ ನಗರ ಆಯ್ಕೆಯಾದಾಗ ಖುಷಿ ಪಟ್ಟಿದ್ದ ನಾಗರಿಕರು ಈಗ ತಲೆ ಚೆಚ್ಚಿಕೊಳ್ಳುತ್ತಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಸಾವಿರ ಕೋಟಿಯ ಕಾಮಗಾರಿಗಳನ್ನು ಮುಗಿಸಲಾಗಿದೆ. ಈಗ ಒಂದೊಂದೆ ಸಮಸ್ಯೆ ತಲೆ ಎತ್ತುತ್ತಿವೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸ್, RAF ರೂಟ್ ಮಾರ್ಚ್, ಎಲ್ಲೆಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200