SHIVAMOGGA LIVE NEWS | 05 JANUARY 2023
SHIMOGA : ಮಲೆನಾಡು ಮಿತ್ರ ದಿನಪತ್ರಿಕೆ ಮರ ಲೋಕಾರ್ಪಣೆಯಾಗಿದೆ. ಸುವರ್ಣ ಸಂಸ್ಕ್ರತಿ ಭವನದಲ್ಲಿ ಸಿಗಂದೂರು ದೇಗುಲದ ಧರ್ಮದರ್ಶಿ ಡಾ.ರಾಮಪ್ಪ ಲೋಗೊ ಬಿಡುಗಡೆ ಮಾಡಿದರು. ಸಂಸದ ಬಿ.ವೈ.ರಾಘವೇಂದ್ರ ಅವರು ಮಲೆನಾಡು ಮಿತ್ರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಹಿರಿಯ ಪತ್ರಕರ್ತ ನಾಗರಾಜ ನೇರಿಗೆ ಅವರ ಸಾರಥ್ಯದಲ್ಲಿ ಪತ್ರಿಕೆ ಮರು ಲೋಕಾರ್ಪಣೆ ಆಗುತ್ತಿದೆ.
ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?
ಡಾ. ಬಸವ ಮರಳಸಿದ್ಧ ಸ್ವಾಮೀಜಿ, ಬಸವಕೇಂದ್ರ : ಪತ್ರಿಕೆ ಪರಿಪೂರ್ಣವಾಗಲು ಸಮಾಜದ ಎಲ್ಲ ರಂಗದವರು ಕೈ ಜೋಡಿಸಬೇಕು. ಮುದ್ರಣ ಮಾಧ್ಯಮ ಅತ್ಯಂತ ಸವಾಲಿನ ಕೆಲಸ. ನಾಗರಾಜ ನೇರಿಗೆ ಅವರು ಅನುಭವಿ, ಪ್ರತಿಭಾ ಸಂಪನ್ನರು. ಅವರ ಮೇಲೆ ಭರವಸೆ ಇಟ್ಟುಕೊಳ್ಳಬಹುದಾಗಿದೆ. ಪತ್ರಿಕೆ ಜನರ ಧ್ವನಿ ಆಗಬೇಕು. ಎಲ್ಲ ಬಗೆಯ ಇಸಂಗಳಿಗು ಅವಕಾಶ ಕಲ್ಪಿಸಬೇಕು. ಒಂದು ಸಿದ್ಧಾಂತ, ವಾದಕ್ಕೆ ವೇದಿಕೆಯಾಗಬಾರದು.
ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ನಾರಾಯಣಗುರು ಸಂಸ್ಥಾನ ಮಠ : ಪತ್ರಿಕೆಗಳು ಸಮಾಜದಲ್ಲಿ ಪರಿವರ್ತನೆ ತರುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಆದರೆ ಪತ್ರಿಕೆ ನಡೆಸುವುದು ಸದ್ಯ ಕಷ್ಟ. ಅನುಭವ ಮತ್ತು ಜನರ ಧ್ವನಿಯಾದರೆ ಪತ್ರಿಕೆಗಳು ಯಶಸ್ವಿಯಾಗಲಿವೆ.
ಡಾ. ರಾಮಪ್ಪ, ಧರ್ಮದರ್ಶಿ, ಸಿಗಂದೂರು ಕ್ಷೇತ್ರ : ಒಳ್ಳೆತನ, ಸೇಡು ಇಲ್ಲದೆ ಕಾರ್ಯ ನಿರ್ವಹಿಸಿದರೆ ಸಾಧನೆ ಸಾಧ್ಯ. ಪತ್ರಿಕೆ ಓದುವ ಅಭಿರುಚಿ ಬೆಳೆಸುತ್ತದೆ. ಸನ್ಮಾರ್ಗದಿಂದ ಸಾಧನೆ ಸಾಧ್ಯ.
ರಾಘವೇಂದ್ರ, ಶಿವಮೊಗ್ಗ ಸಂಸದ : ವಸ್ತುನಿಷ್ಠವಾಗಿ ವರದಿ ಮಾಡಿದ್ದ ನಾಗರಾಜ ನೇರಿಗೆ ಅವರು ಮಲೆನಾಡು ಮಿತ್ರದ ನೇತೃತ್ವ ವಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಯುಗದಲ್ಲೂ ಬೆಳಗ್ಗೆದ್ದು ಪತ್ರಿಕೆ ಓದುವುದೆ ಖುಷಿ. ಮುದ್ರಣ ಮಾಧ್ಯಮ ಎಂದಿಗೂ ಮಾಸವುದಿಲ್ಲ.
ಇದನ್ನೂ ಓದಿ – ಸಿಗಂದೂರು ಜಾತ್ರೆಗೆ ದಿನಾಂಕ ನಿಗದಿ, ಏನೆಲ್ಲ ಕಾರ್ಯಕ್ರಮ ಇರಲಿದೆ? ಯಾರೆಲ್ಲ ಭಾಗವಹಿಸ್ತಾರೆ?
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿಯ ಎಂ.ಗುರುಮೂರ್ತಿ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರೊ. ಚಂದ್ರಶೇಖರ್, ಮಲೆನಾಡು ಮಿತ್ರ ಪತ್ರಿಕೆ ಸಂಪಾದಕ ನಾಗರಾಜ ನೇರಿಗೆ ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200