ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 DECEMBER 2022
ಶಿವಮೊಗ್ಗ : ಮಂಗಳೂರು ಕುಕ್ಕರ್ ಬಾಂಬ್ (Mangalore Blast) ಸ್ಪೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರರ ಕುರಿತು ಮಾಹಿತಿ ಸಂಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಇವತ್ತು ಬೆಳಗ್ಗೆ ಎನ್ಐಎ ಅಧಿಕಾರಿಗಳ ತಂಡ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂವರು ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ಆಗಮಿಸಿದೆ.
(Mangalore Blast)
ಶಿವಮೊಗ್ಗಕ್ಕೇಕೆ ಎನ್ಐಎ ಟೀಮ್?
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆ ಹಿನ್ನೆಲೆ ಎನ್ಐಎ ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಮೂರು ತಿಂಗಳ ಹಿಂದೆ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ನ ಸಹಚರರಾದ ಮಾಜ್ ಮುನೀರ್ ಅಹಮದ್ ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್ ಎಂಬುವವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಇವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು.
ALSO READ – ಮಂಗಳೂರು ಸ್ಪೋಟ, ತೀರ್ಥಹಳ್ಳಿಯ ಶಂಕಿತ ಶಾರಿಕ್ ಬಗ್ಗೆ ತಿಳಿಯಬೇಕಾದ 4 ವಿಚಾರಗಳಿವು
ತುಂಗಾ ನದಿ ತೀರದಲ್ಲಿ ಶಂಕಿತರು ಸ್ಪೋಟಕಗಳ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು. ಸಹಚರರ ಬಂಧನವಾಗುತ್ತಿದ್ದಂತೆ ಶಾರಿಕ್ ತಲೆಮರೆಸಿಕೊಂಡಿದ್ದ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಶಾರಿಕ್ ಗಾಯಗೊಂಡಿದ್ದಾನೆ.
(Mangalore Blast)
ಏನೆಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ?
ಆಗ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಬಳಿ ಪತ್ತೆಯಾದ ಸ್ಪೋಟಕಗಳಿಗು, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಬಳಕೆಯಾದ ಸ್ಪೋಟಕಕ್ಕು ಸಾಮ್ಯತೆ ಇದೆಯೆ ಸೇರಿದಂತೆ ಹಲವು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಎನ್ಐಎ ಅಧಿಕಾರಿಗಳು ಶಿವಮೊಗ್ಗ ಪೊಲೀಸರಿಂದ ಸ್ಪೋಟಕಗಳು, ವಿಚಾರಣೆ ವೇಳೆ ಶಂಕಿತರು0 ಬಾಯಿ ಬಿಟ್ಟ ಪ್ರಮುಖ ಸಂಗತಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422