SHIVAMOGGA LIVE NEWS | 21 JUNE 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಸಾಮಾಜಿಕ ಕಳಕಳಿಯ ಭಾಗವಾಗಿ ಮಣಿಪಾಲ್ (Manipal) ಆಸ್ಪತ್ರೆಗಳ ಸಮೂಹದಿಂದ ರಿಯಾಯಿತಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24 ವರ್ಷಗಳಿಂದ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಕಳೆದ ವರ್ಷ 3.60 ಲಕ್ಷ ನೋಂದಣಿ ಮಾಡಿದ್ದು, ಈ ಬಾರಿ 4 ಲಕ್ಷ ನೋಂದಣಿ ಮಾಡುವ ಗುರಿ ಹೊಂದಿದ್ದೇವೆ. ಈ ಕಾರ್ಡ್‌ನ್ನು ಸ್ಥಳೀಯವಾಗಿ ಮಾಡಿಕೊಡಲಾಗುತ್ತದೆ ಎಂದರು.
ಆರೋಗ್ಯ ಕಾರ್ಡ್ ಪಡೆದುಕೊಂಡರೆ ಇಡೀ ಕುಟುಂಬದವರು ಚಿಕಿತ್ಸೆ ಪಡೆಯಬಹುದು. ವೈದ್ಯರ ಶುಲ್ಕ, ಔಷಧ, ಲ್ಯಾಬ್ ಪರೀಕ್ಷೆ, ಮಧುಮೇಹ ಆರೈಕೆ ಸೇರಿದಂತೆ ವಿವಿಧ ಚಿಕಿತ್ಸೆಗೆ ಗರಿಷ್ಠ ಶೇ.25ರವರೆಗೆ ರಿಯಾಯಿತಿ ನೀಡಲಾಗುವುದು. ಆಸಕ್ತರು ಸ್ಥಳೀಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರ್ಡ್ ಮಾಡಿಸಲು ಯಾರನ್ನು ಸಂಪರ್ಕಿಸಬೇಕು?
ನೋಂದಾವಣಿಗಾಗಿ ಅರ್ಜಿಗಳು ಕೆಳಕಂಡ ಅಧಿಕೃತ ಪ್ರತಿನಿಧಿಗಳ ಬಳಿ ಲಭ್ಯವಿದೆ: ಶಿವಮೊಗ್ಗ: ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ನವೀನ ಟೈರ್ಸ್, ವಿನೋಬನಗರದ ನವೀನ್.ಕೆ.ಆರ್ 7829540338, ಪ್ರತಿನಿಧಿಗಳಾದ ವಿಜಯ್ ಆನಂದ್, 9844383344, ಬಾಪೂಜಿ ಎಂ 9916131880, ವಿಪ್ರ ಸೌಹಾರ್ದ, 9242373839, ಸೇಂಟ್ ಮಿಲಾಗ್ರೆಸ್ ಸೌಹಾರ್ದ 9538400604, ಕೃಷಿಕ್ ಸೌಹಾರ್ದ 9686264966, ಶಾರದಾ ಸೌಹಾರ್ದ 9880838430, ಶ್ರೀ ನಿತಿನ್ ಎಸ್ ಮೂರ್ತಿ: 9480028241 ಮತ್ತು ಹತ್ತಿರದ ಅಧಿಕೃತ ಪ್ರತಿನಿಧಿಗಳಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಇವತ್ತಿನ 10 ಪ್ರಮುಖ ಸುದ್ದಿಗಳು
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






