SHIVAMOGGA LIVE NEWS | 24 APRIL 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ನಗರದ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲದ 26ನೇ ವಾರ್ಷಿಕೋತ್ಸವ ನಡೆಯಿತು. ಇದೇ ಸಂದರ್ಭ ಉಚಿತ ಸಾಮೂಹಿಕ ವಿವಾಹ, ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಹಿರಿಯರಿಗೆ ಗೌರವ ಸಲ್ಲಿಸುವ ಸಮಾರಂಭ ನಡೆಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸತಿಪತಿ ಹೇಗಿರಬೇಕು? ಶ್ರೀಗಳ ತಿಳಿಸಿದ 2 ಪಾಯಿಂಟ್
ವರನಟ ಡಾ. ರಾಜ್‍ಕುಮಾರ್ ಅಂಧ ಮಕ್ಕಳ ಶಾಲೆಗೆ ಬಂದಾಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ಬಾಲಗಂಗಾಧನಾಥ ಸ್ವಾಮೀಜಿ ಹಾಡು ಹೇಳುವಂತೆ ತಿಳಿಸಿದರು. ಪಕ್ಕದಲ್ಲಿಯೇ ಇದ್ದ ಪಾರ್ವತಮ್ಮ ಅವರತ್ತ ತಿರುಗಿ ಹಾಡು ಹೇಳಲಾ ಎಂದು ಡಾ. ರಾಜ್ ಕುಮಾರ್ ಕೇಳಿದರು. ಪತ್ನಿ ಕುರಿತು ಅವರಿಗಿದ್ದ ಪ್ರೀತಿ, ವಿಶ್ವಾಸವಿದು.
ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂಬ ಶ್ಲೋಕವಿದೆ. ಸತಿಪತಿಯಲ್ಲಿ ಹೊಂದಾಣಿ ಈಶ್ವರನಿಗೆ ಇಷ್ಟ. ಧರ್ಮ, ಅರ್ಥ, ಕಾಮದಲ್ಲಿ ಸತಿಪತಿ ಮಧ್ಯೆ ಹೊಂದಾಣಿಕೆ ಅಗತ್ಯ. ಧರ್ಮದ ಕಾರ್ಯದಲ್ಲಿ ಸತಿಪತಿ ಜೊತೆಯಾಗಿರಬೇಕು. ಆರ್ಥಿಕ ವಿಚಾರದಲ್ಲಿಯು ಪರಸ್ಪರ ಹೊಂದಾಣಿಕೆ ಅಗತ್ಯ. ಪ್ರತಿ ಪುರುಷನ ಯಶಸ್ಸಿನ ಹಿಂದೆ ತಾಯಿ ಅಥವಾ ಪತ್ನಿಯ ಬೆಂಗಾವಲು ಇರುತ್ತದೆ.
ಆದಿಚುಂಚನಗಿರಿ ಮಠದ ವತಿಯಿಂದ ಈವರೆಗೂ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 600ಕ್ಕೂ ಹೆಚ್ಚು ದಂಪತಿಗಳು ಬದುಕಿನ ಭವ್ಯ ಬಂಧನಕ್ಕೆ ಒಳಗಾಗಿದ್ದಾರೆ. ದಂಪತಿಗಳು ಅನ್ಯೋನ್ಯವಾಗಿ ಬದುಕು ನಡೆಸಬೇಕು. ಸಮಸ್ಯೆಗಳನ್ನು ದೊಡ್ಡದಾಗಿಸದರೆ ಹೊಂದಾಣಿಕೆ ಮೂಲಕ ಬದುಕು ಕಟ್ಟಿಕೊಳ್ಳಬೇಕು.ಶ್ರೀ ಪ್ರಸನ್ನನಾಥ ಸ್ವಾಮೀಜಿ
ಸಂಸದ ಬಿ.ವೈ.ರಾಘವೇಂದ್ರ, ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಅಣ್ಣಾಮಲೈ ಆಗಮನ, ಚುನಾವಣ ಅಧಿಕಾರಿಗಳಿಂದ ಹೆಲಿಕಾಪ್ಟರ್, ಲಗೇಜ್ ಶೋಧ
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






