ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ಶಿವಮೊಗ್ಗ | ಮೇಯರ್ (MAYOR), ಉಪ ಮೇಯರ್ (DEPUTY MAYOR) ಸ್ಥಾನದ ಚುನಾವಣೆಗೆ (ELECTION) ಕೊನೆಗೂ ಮೀಸಲಾತಿ (RESERVATION) ಪ್ರಕಟವಾಗಿದೆ. ನಾಲ್ಕನೆ ಅವಧಿಗೆ ನಗರದ ಪ್ರಥಮ ಪ್ರಜೆ ಯಾರಾಗುತ್ತಾರೆ ಎಂಬ ಕುತೂಹಲ ಮತ್ತು ರಾಜಕೀಯ ಚರ್ಚೆಗಳು ಆರಂಭವಾಗಿದೆ.
ಶಿವಮೊಗ್ಗ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಇದಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇನ್ನ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇಲ್ಲಿಯು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
ಐದು ತಿಂಗಳು ಹಿಂದೆಯೇ ಆಗಬೇಕಿತ್ತು
ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆ ಕಳೆದ ಐದು ತಿಂಗಳ ಹಿಂದೆಯೆ ನಡೆಯಬೇಕಿತ್ತು. ಆದರೆ ಮೀಸಲಾತಿ ವಿಚಾರ ಹೈಕೋರ್ಟ್ ನಲ್ಲಿತ್ತು. ಹಾಗಾಗಿ ಹಿಂದಿನ ಅವಧಿಯ ಮೇಯರ್ ಮತ್ತು ಉಪ ಮೇಯರ್ ಅವರಿಗೆ ಐದು ತಿಂಗಳು ಹೆಚ್ಚಿನ ಅಧಿಕಾರವಧಿ ಸಿಕ್ಕಿತ್ತು.
ವಿಧಾನಸಭೆ ಚುನಾವಣೆ ಸಮೀಪದಲ್ಲಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಮೀಸಲು ಪ್ರಕಟವಾಗಿದೆ. ಜಾತಿ, ಪಕ್ಷ ಸಂಘಟನೆ, ಮತಗಳಿಕೆ ಆಧಾರದ ಮೇಲೆಯೆ ಮುಂದಿನ ಮೇಯರ್, ಉಪ ಮೇಯರ್ ಆಯ್ಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿದೆ. ಹಾಗಾಗಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರೆ ಆಯ್ಕೆ ಆಗಲಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿಯ 20 ಸದಸ್ಯರಿದ್ದಾರೆ. ಕಾಂಗ್ರೆಸ್ 7, ಜೆಡಿಎಸ್ 2, ಎಸ್ ಡಿಪಿಐ 1, ಪಕ್ಷೇತರರು 5 ಸದಸ್ಯರಿದ್ದಾರೆ.
ಯಾರಾಗಬಹುದು ಮುಂದಿನ ಮೇಯರ್?
ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಪ್ರಸ್ತುತ ಐವರು ಪಾಲಿಕೆ ಸದಸ್ಯರು ಅರ್ಹರಾಗಿದ್ದಾರೆ. ಈ ಐವರು ಸದಸ್ಯರು ಇದೆ ಮೊದಲ ಭಾರಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ವಿನೋಬನಗರ ವಾರ್ಡ್ ನ ರಾಹುಲ್ ಬಿದರೆ. ಪಕ್ಷೇತರರಾಗಿ ಗೆದ್ದು ಬಳಿಕ ಬಿಜೆಪಿ ಸೇರ್ಪಡೆಯಾದರು. ಅರಮನೆ ವಾರ್ಡ್ ನ ಪಿ.ಪ್ರಭಾಕರ್, ಆರ್.ಎಂ.ಎಲ್ ನಗರ ವಾರ್ಡ್ ನ ಎಸ್.ಜಿ.ರಾಜು, ಮಿಳಘಟ್ಟ ವಾರ್ಡ್ ನ ಯು.ಹೆಚ್.ವಿಶ್ವನಾಥ್, ಗೋಪಾಲಗೌಡ ವಾರ್ಡ್ ನ ಎಸ್.ಜ್ಞಾನೇಶ್ವರ್ ಅವರು ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡುವ ಅರ್ಹತೆ ಹೊಂದಿದ್ದಾರೆ.
ಜ್ಞಾನೇಶ್ವರ್ ಗೆ ಹೆಚ್ಚಿದ ಅವಕಾಶ
ಮೊದಲ ಭಾರಿ ಪಾಲಿಕೆ ಸದಸ್ಯರಾದರೂ ಎಸ್.ಜ್ಞಾನೇಶ್ವರ್ ಅವರು ಬಿಜೆಪಿ ಸಂಘಟನೆಯಲ್ಲಿ ಹಲವು ವರ್ಷದಿಂದ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲಾಪ್ರಕೋಷ್ಠದ ಸಂಯೋಜಕರಾಗಿದ್ದಾರೆ. ಬಿಜೆಪಿ ನಗರ ಅಧ್ಯಕ್ಷರಾಗಿ, ಸೂಡಾ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿರಿಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರನ್ನು ಮೇಯರ್ ಸ್ಥಾನಕ್ಕೆ ಸೂಚಿಸಿದರೆ ಉಳಿದ ಸದಸ್ಯರಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಹಾಗಾಗಿ ಎಸ್.ಜ್ಞಾನೇಶ್ವರ್ ಅವರು ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ.
ಇನ್ನು, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ. 12 ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ. ಮೊದಲ ಭಾರಿಗೆ ಆಯ್ಕೆಯಾದ ಗಾಂಧಿ ಬಜಾರ್ ಪಶ್ಚಿಮ ವಾರ್ಡ್ ನ ಭಾನುಮತಿ ವಿನೋದ್ ಕುಮಾರ್, ಗಾಂಧಿ ಬಜಾರ್ ಪೂರ್ವ ವಾರ್ಡ್ ನ ಕಲ್ಪನಾ ರಮೇಶ್, ರವೀಂದ್ರನಗರ ವಾಡರ್ಡ್ ಸದಸ್ಯೆ ಆರತಿ ಪ್ರಕಾಶ್, ಸೂಳೆಬೈಲು ವಾರ್ಡ್ ನ ಸಂಗೀತಾ ನಾಗರಾಜ್, ಕಲ್ಲಹಳ್ಳಿ ವಾರ್ಡ್ ನ ಅನಿತಾ ರವಿಶಂಕರ್ ಅವರು ಅರ್ಹರಾಗಿದ್ದಾರೆ. ಉಳಿದಂತೆ ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಲತಾ ಗಣೇಶ್ ಅವರು ಈಗಾಗಲೇ ಮೇಯರ್, ಉಪ ಮೇಯರ್ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಇಬ್ಬರ ನಡುವೆ ಪೈಪೋಟಿ
ಮೊದಲ ಭಾರಿ ಪಾಲಿಕೆ ಸದಸ್ಯರಾಗಿರುವ ಅನಿತಾ ರವಿಶಂಕರ್ ಅವರು ಈ ಹಿಂದೆ ಮೇಯರ್ ಸ್ಥಾನಕ್ಕೆ ಪ್ರಬಲವಾಗಿ ಪೈಪೋಟಿ ನಡೆಸಿದ್ದರು. ಆದರೆ ಕಡೆ ಕ್ಷಣದಲ್ಲಿ ಅವಕಾಶ ವಂಚಿತರಾದರು. ಸುವರ್ಣ ಶಂಕರ್ ಅವರು ಮೇಯರ್ ಆಗಿದ್ದರು. ಇನ್ನು, ಈ ಹಿಂದೆ ಎರಡು ಭಾರಿ ನಗರಸಭೆ ಸದಸ್ಯರಾಗಿದ್ದ ಲಕ್ಷ್ಮಿ ಶಂಕರ ನಾಯ್ಕ್ ಅವರು ಈಗ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಹಿರಿತನವು ಇದೆ. ಸುರೇಖಾ ಮುರಳೀಧರ್ ಅವರು ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂದರ್ಭ ಲಕ್ಷ್ಮಿ ಶಂಕರ ನಾಯ್ಕ್ ಅವರು ಆಕಾಂಕ್ಷಿಯಾಗಿದ್ದರು. ಆಗ ಅವರು ಅವಕಾಶ ಕಳೆದುಕೊಂಡಿದ್ದರು.
ಹಾಗಾಗಿ ಲಕ್ಷ್ಮೀ ಶಂಕರ ನಾಯ್ಕ್ ಮತ್ತು ಅನಿತಾ ರವಿಶಂಕರ್ ಅವರಲ್ಲಿ ಹಿರಿಯರು ಯಾರಿಗೆ ಅವಕಾಶ ಕಲ್ಪಿಸುತ್ತಾರೆ ಕಾದು ನೋಡಬೇಕಿದೆ.
ಇದೆ ಕೊನೆಯ ಚುನಾವಣೆ?
ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಈ ಅವಧಿಯಲ್ಲಿ ಇದು ಕೊನೆಯ ಚುನಾವಣೆ ಆಗುವ ಸಂಭವವಿದೆ. ಮುಂದಿನ ವರ್ಷ ನವೆಂಬರ್ ತಿಂಗಳಲ್ಲಿ ಪಾಲಿಕೆ ಅವಧಿ ಮುಗಿಯಲಿದೆ. ಈಗ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಗೆ ನೊಟೀಸ್ ಜಾರಿಗೊಳಿಸಬೇಕಿದೆ. ಬಳಿಕ ಪ್ರಾದೇಶಿಕ ಆಯುಕ್ತರು ಸಮಯ ನೋಡಿಕೊಂಡು ಚುನಾವಣೆ ನಿಗದಿ ಮಾಡಬೇಕು. ಇದೆಲ್ಲ ಆಗುವುದರಲ್ಲಿ ಒಂದು ತಿಂಗಳು ಕಳೆಯಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೂತನ ಮೇಯರ್, ಉಪ ಮೇಯರ್ ಆಯ್ಕೆ ಆಗಲಿದ್ದಾರೆ. ಮುಂದಿನ ಸೆಪ್ಟೆಂಬರ್ ಗೆ ಇವರ ಅಧಿಕಾರವಧಿ ಮುಗಿಯಲಿದೆ. ಎರಡು ತಿಂಗಳಿಗಾಗಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಸಾದ್ಯತೆ ಇಲ್ಲ. ಹಾಗಾಗಿ ಇದೆ ಕೊನೆಯ ಅವಧಿಯ ಚುನಾವಣೆಯಾಗುವ ಸಾದ್ಯತೆ ಇದೆ.
ಇದನ್ನೂ ಓದಿ – ಮಾಜಿ ಸಚಿವ ಈಶ್ವರಪ್ಪಗೆ ಬೆದರಿಕೆ ಪತ್ರ, ಕಾರಣವೇನು? ಏನಿದೆ ಪತ್ರದಲ್ಲಿ?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422