ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಲತಾ ಗಣೇಶ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಎಸ್.ಎನ್.ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
PHOTO | ನೂತನ ಮೇಯರ್, ಉಪಮೇಯರ್’ಗೆ ಅಭಿನಂದನೆ ಸಲ್ಲಿಸಿದ ಶಾಸಕ ಈಶ್ವರಪ್ಪ
ಕುತೂಹಲ ಮೂಡಿಸಿದ ಕಾಂಗ್ರೆಸ್, ಜೆಡಿಎಸ್ ನಡೆ
ಸಂಖ್ಯಾಬಲ ಇಲ್ಲದಿದ್ದರೂ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ, ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷ ಬೆಂಬಲ ಘೋಷಿಸಿತ್ತು. ಹಾಗಾಗಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಯ್ತು.
PHOTO | ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು
ಯಾರೆಲ್ಲ ಸ್ಪರ್ಧಿಸಿದ್ದರು? ಯಾರಿಗೆಷ್ಟು ಓಟು ಬಂತು?
ಮೇಯರ್ ಸ್ಥಾನ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಹಾಗಾಗಿ ಬಿಜೆಪಿಯ ಲತಾ ಗಣೇಶ್, ಕಾಂಗ್ರೆಸ್ ಪಕ್ಷದ ಮಂಜುಳಾ ಶಿವಣ್ಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ಲತಾ ಗಣೇಶ್ ಅವರಿಗೆ 26 ಮತಗಳು, ಮಂಜುಳಾ ಶಿವಣ್ಣ ಅವರಿಗೆ 12 ಮತಗಳು ಲಭಿಸಿದವು.
PHOTO | ಕೈ ಎತ್ತಿ ಮತ ಚಲಾಯಿಸುತ್ತಿರುವ ಬಿಜೆಪಿ ಸದಸ್ಯರು
ಇನ್ನು, ಉಪಮೇಯರ್ ಸಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿಯಿಂದ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಪಕ್ಷದಿಂದ ಯೋಗೇಶ್ ಸ್ಪರ್ಧಿಸಿದ್ದರು. ಚನ್ನಬಸಪ್ಪ 26 ಮತಗಳನ್ನು ಪಡೆದರೆ, ಯೋಗೇಶ್ 12 ಮತಗಳನ್ನು ಪಡೆದುಕೊಂಡರು. ಹಾಗಾಗಿ ಮೇಯರ್, ಉಪಮೇಯರ್ ಸ್ಥಾನಗಳೆರಡೂ ಬಿಜೆಪಿ ಪಾಲಾಯಿತು.
PHOTO | ತಟಸ್ಥವಾಗಿ ಉಳಿದ ಕೇಬಲ್ ನಾಗರಾಜ್, ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಶಿವಣ್ಣ, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಯೋಗೇಶ್
ತಟಸ್ಥವಾಗಿ ಉಳಿದ ಕೇಬಲ್ ನಾಗರಾಜ್
ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ತಟಸ್ಥವಾಗಿ ಉಳಿದು ಗಮನ ಸೆಳೆದರು. ಬಿಜೆಪಿ ಅಭ್ಯರ್ಥಿಗೂ ಬೆಂಬಲ ನೀಡದೆ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗೂ ಬೆಂಬಲ ಕೊಡದೆ ಕಾರ್ಪೊರೇಟರ್ ಕೇಬಲ್ ನಾಗರಾಜ್ ತಟಸ್ಥವಾಗಿ ಉಳಿದರು. ಕೇಬಲ್ ನಾಗರಾಜ್ ಅವರು, ವಿದ್ಯಾನಗರ ದಕ್ಷಿಣ ವಾರ್ಡ್’ನಿಂದ ಆಯ್ಕೆಯಾಗಿದ್ದಾರೆ.
PHOTO | ಚುನಾವಣಾಧಿಕಾರಿ ಶಿವಯೋಗಿ ಕಳಸದ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪಾಲಿಕೆ ಕಮಿಷನರ್ ಚಾರುಲತಾ ಸೋಮಲ್
ಇದ್ದದ್ದು 40 ಓಟ್, ಚಲಾವಣೆಯಾಗಿದ್ದು 39
ಮೇಯರ್, ಉಪಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯರು ಸೇರಿ 40 ಮಂದಿಗೆ ಮತದಾನಕ್ಕೆ ಅವಕಾಶವಿತ್ತು. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್ ಮತ ಚಲಾಯಿಸಿದರು. ಆದರೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಗೈರಾಗಿದ್ದರು. ಹಾಗಾಗಿ 39 ಮತಗಳಷ್ಟೇ ಚಲಾವಣೆಯಾದವು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494