ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಅನೇಕ ಸ್ವಾರಸ್ಯಕರ ಮತ್ತು ಕೂತಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯ್ತು.
ಬಸ್ಸಲ್ಲಿ ಬಂದಿಳಿದ ಬಿಜೆಪಿ ಸದಸ್ಯರು
ಪಾಲಿಕೆಯ ಬಿಜೆಪಿ ಸದಸ್ಯರು ಬಿಜೆಪಿ ಕಚೇರಿಯಿಂದ ಪಾಲಿಕೆವರೆಗೂ ಪ್ರತ್ಯೇಕ ಬಸ್’ನಲ್ಲಿ ಬಂದರು. ಬಸ್ಸಿನಿಂದ ಬಂದಿಳಿಯುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಸಭಾಂಗಣ ಪ್ರವೇಶಿದರು. ಆದರೆ ಚನ್ನಬಸಪ್ಪ ಅವರು ಪ್ರತ್ಯೇಕವಾಗಿ ಕಾರಿನಲ್ಲಿ ಬಂದರು.
‘ಹೆಣ್ಮಗಳಿಗೆ ಅನ್ಯಾಯ ಮಾಡಬೇಡಿ’
ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಶಿವಣ್ಣ ವಿರುದ್ಧವಾಗಿ ಯಾರೆಲ್ಲ ಮತ ಚಲಾಯಿಸುತ್ತಿದ್ದೀರಿ ಎಂದು, ಚುನಾವಣಾಧಿಕಾರಿ ಕೇಳಿದರು. ಆಗ ಬಿಜೆಪಿ ಸದಸ್ಯರೆಲ್ಲ ಕೈ ಎತ್ತಿದರು. ಬಿಜೆಪಿ ಸದಸ್ಯರತ್ತ ತಿರುಗಿದ ಕಾಂಗ್ರೆಸ್ ಸದಸ್ಯ ಯೋಗೇಶ್, ಹೆಣ್ಣು ಮಗಳಿವೆ ಅನ್ಯಾಯ ಮಾಡಬೇಡಿ. ಬೆಂಬಲ ಕೊಡಿ ಅಂತಾ ಮನವಿ ಮಾಡಿದರು. ಇದು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು.
ಉಪಮೇಯರ್ ಚುನಾವಣೆಯಲ್ಲೂ ಇದೇ ರೀತಿ ಚುನಾವಣಾಧಿಕಾರಿಗಳು ಘೋಷಿಸಿದಾಗ, ಸಮಾಜದ ಹುಡುಗನನ್ನ ಬೆಂಬಲಿಸಿ. ಚನ್ನಬಸಪ್ಪ ಅವರೇ ನಿಮ್ಮ ನಾಮಪತ್ರ ಹಿಂಪಡೆಯಿರಿ. ಈಶ್ವರಪ್ಪ ಅವರಿದ್ದಾರೆ ಅಂತಾ ಚಿಂತಿಸಬೇಡಿ ಅಂತಾ ಯೋಗೇಶ್ ತಮ್ಮ ಪರ ಪ್ರಚಾರ ಮಾಡಿ, ಮನವಿ ಮಾಡಿಕೊಂಡರು. ಆಗಲೂ ಎಲ್ಲರೂ ನಗುವಂತಾಯ್ತು.
‘ಅಭಿವೃದ್ಧಿ ದೃಷ್ಟಿಯಿಂದ ಹಿಂಪಡೆಯುತ್ತಿದ್ದೇವೆ..!’
ನಾಲ್ಕು ಸ್ಥಾಯಿ ಸಮಿತಿಗೆ ಆಯ್ಕೆ ನಡೆಯುತ್ತಿದ್ದ ಸಂದರ್ಭ, ಕೆಲಕಾಲ ಗೊಂದಲ ನಿರ್ಮಾಣವಾಯ್ತು. ಶಾಸಕರಾದ ಈಶ್ವರಪ್ಪ, ರುದ್ರೇಗೌಡ, ಅಶೋಕ್ ನಾಯ್ಕ್, ಪ್ರಸನ್ನಕುಮಾರ್ ಅವರ ಜೊತೆ ಪಾಲಿಕೆ ಸದಸ್ಯರು ಚರ್ಚಿಸಿದರು. ನಂತರ ನಾಗರಾಜ್ ಕಂಕಾರಿ ಅವರು ಸ್ಥಾಯಿ ಸಮಿತಿಯೊಂದಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದರು. ಆಗ ಕಾಂಗ್ರೆಸ್ ಸದಸ್ಯ ರಮೇಶ್ ಹೆಗ್ಡೆ, ಅಭಿವೃದ್ಧಿ ದೃಷ್ಟಿಯಿಂದ ಹಿಂಪಡೆಯುತ್ತಿದ್ದೇವೆ ಅಂತಾ ಹಾಸ್ಯ ಚಟಾಕಿ ಹಾರಿಸಿದರು.
‘ನಮ್ಮಮ್ಮನನ್ನ ಚೆನ್ನಾಗಿ ನೋಡಿಕೊಳ್ಳಿ ಸಾರ್..!’
ಲತಾ ಗಣೇಶ್ ಅವರು ಮೇಯರ್ ಕೊಠಡಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ, ಮೇಯರ್ ಲತಾ ಗಣೇಶ್ ಅವರ ಕಿರಿಯ ಮಗಳು, ನಮ್ಮಮ್ಮನ್ನನ್ನು ಚನ್ನಾಗಿ ನೋಡಿಕೊಳ್ಳಿ ಸಾರ್ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಮಾಡಿದಳು. ನಿಮ್ಮಮ್ಮನನ್ನು ನೀನೇ ಚೆನ್ನಾಗಿ ನೋಡಿಕೊಳ್ಳಬೇಕು. ಅವರು ಚೆನ್ನಾಗಿ ಕೆಲಸ ಮಾಡಬೇಕಿದೆ ಅಂತಾ ಹೇಳಿ, ಆ ಜವಾಬ್ದಾರಿಯನ್ನು ಆಕೆಗೆ ವಹಿಸಿದರು ಈಶ್ವರಪ್ಪ.
ಮೇಯರ್’ಗೆ ರಾಹುಕಾಲದ ಕಾಟ..!
ಚುನಾವಣೆ ಬಳಿಕ ಮೇಯರ್, ಉಪ ಮೇಯರ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮವಿತ್ತು. ಉಪ ಮೇಯರ್ ಚನ್ನಬಸಪ್ಪ ಅವರು ಅಧಿಕಾರ ಸ್ವೀಕರಿಸಿದರು. ಆದರೆ ಮೇಯರ್ ಲತಾ ಗಣೇಶ್ ಮಾತ್ರ ಹತ್ತು ನಿಮಿಷ ಕಾದರು. ಶಾಸಕ ಈಶ್ವರಪ್ಪ, ಉಪ ಮೇಯರ್ ಚನ್ನಬಸಪ್ಪ ಅವರು ಟೈಂಗಾಗಿ ಕಾದರು. ರಾಹುಕಾಲ ಮುಗಿಯೋವರೆಗೂ ಮೇಯರ್ ಅಧಿಕಾರ ಸ್ವೀಕರಿಸಲಿಲ್ಲ. ಬಳಿಕ, ಮಧ್ಯಾಹ್ನ 1.45ಕ್ಕೆ ಮೇಯರ್ ಲತಾ ಗಣೇಶ್ ಕುರ್ಚಿ ಏರಿದರು.
ಇದನ್ನೂ ಓದಿ | ಬಿಜೆಪಿ ಮಡಿಲಿಗೆ ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್, ಯಾರಿಗೆಷ್ಟು ಓಟ್ ಬಂತು ಗೊತ್ತಾ?
ಬಸ್ಸಲ್ಲಿ ಬಂದವರನ್ನು ಹಿಂಬಾಲಿಸಿದ ಸರ್ಕಾರಿ ಕಾರ್
ಬಸ್ಸಲ್ಲಿ ಪಾಲಿಕೆಗೆ ಬಂದ ಲತಾ ಗಣೇಶ್ ಅವರು ಮನೆಗೆ ಮರಳುವಾಗ ಇನ್ನೋವಾ ಕಾರಿನಲ್ಲಿ ತೆರಳಿದರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇಯರ್ ಲತಾ ಗಣೇಶ್ ಅವರಿಗೆ ಮಹಾಪೌರರ ಕಾರು ಒದಗಿಸಲಾಯಿತು. ಪಾಲಿಕೆಯಿಂದ ಮೆರವಣಿಗೆಯಲ್ಲಿ ಮೇಯರ್ ಸಾಗುತ್ತಿದ್ದರೆ, ಇನ್ನೋವಾ ಕಾರು ಅವರನನ್ನು ಹಿಂಬಾಲಿಸಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494