ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 14 AUGUST 2024 : ನಗರದ ನೆಹರು ಕ್ರೀಡಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ (Sudden Visit) ನೀಡಿದ್ದರು. ಈ ವೇಳೆ ಲೈಟ್ ಸೇರಿದಂತೆ ಮೂಲ ಸೌರ್ಕಯ ಇಲ್ಲದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇಂದು ಸಂಜೆ ಸಚಿವ ಮಧು ಬಂಗಾರಪ್ಪ ನೆಹರು ಕ್ರೀಡಾಂಗಣಕ್ಕೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ನೆಹರು ಕ್ರೀಡಾಂಗಣದಲ್ಲಿನ ಮೂಲ ಸೌಕರ್ಯದ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತಂದರು.
ಲೈಟ್ ಇಲ್ಲ, ನೀರಿಲ್ಲ, ಸೌಲಭ್ಯಗಳಿಲ್ಲ
ಕ್ರೀಡಾಂಗಣಕ್ಕೆ ಭೇಟಿ ನೀಡುತ್ತಿದ್ದಂತೆ ಲೈಟ್ ವ್ಯವಸ್ಥೆ ಇಲ್ಲದ್ದನ್ನ ಸಚಿವ ಮಧು ಬಂಗಾರಪ್ಪ ಸಿಟ್ಟಾದರು. ಮಹಾನಗರ ಪಾಲಿಕೆ ಆಯುಕ್ತರು ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಕ್ಷಣ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವಂತೆ ಆದೇಶಿಸಿದರು. ಇನ್ನು, ಸಚಿವರ ಜೊತೆಗೆ ಮಾತನಾಡಿದ ಕ್ರೀಡಾಪಟುಗಳು, ಸಾರ್ವಜನಿಕರು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲ ಎಂದು ದೂರಿದರು.
ಎರಡು ದಿನದ ಡೆಡ್‌ಲೈನ್
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಅವರನ್ನು ಸ್ಥಳಕ್ಕೆ ಕರೆಯಿಸಿದ ಸಚಿವ ಮಧು ಬಂಗಾರಪ್ಪ, ಕೂಡಲೆ ಸಮಸ್ಯೆಗಳನ್ನು ಪರಿಹರಿಸಬೇಕು. ಇದಕ್ಕೆ ಎರಡು ದಿನದ ಗಡುವು ನೀಡಲಾಗುತ್ತದೆ ಎಂದು ಸೂಚಿಸಿದರು. ಫುಟ್‌ಬಾಲ್ ಅಂಗಣಕ್ಕೆ ಲಾನ್ ಹಾಕಿಸುವಂತೆ ಸೂಚಿಸಿದರು.
ಸ್ವಂತ ಹಣದಿಂದ ಶೂ, ಶಾರ್ಟ್ಸ್
ಇನ್ನು, ಫುಟ್‌ಬಾಲ್ ಆಟಗಾರರು ವಿವಿಧ ಟೂರ್ನಿಮೆಂಟ್‌ಗಳಿಗೆ ತೆರಲು ತಮಗೆ ಶೂ, ಶಾರ್ಟ್ಸ್ ಅಗತ್ಯವಿದೆ. ಇದನ್ನು ಒದಗಿಸುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು. ಆಗ ತಮ್ಮದೆ ಸ್ವಂತ ಖರ್ಚಿನಲ್ಲಿ ಶೂ, ಶಾರ್ಟ್ಸ್ ಒದಗಿಸುವುದಾಗಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಜೋರು ಮಳೆ, ವಿವಿಧ ತಾಲೂಕಿನಲ್ಲೂ ವರುಣನ ಅಬ್ಬರ, ಎಲ್ಲೆಲ್ಲಿ ಮಳೆಯಾಗ್ತಿದೆ? ಇಲ್ಲಿದೆ ರಿಪೋರ್ಟ್