ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA LIVE NEWS | 14 ಡಿಸೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್’ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸೋಲು, ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ಈ ಚುನಾವಣೆಯಲ್ಲಿನ ಮತ ಎಣಿಕೆಯ ಮಾದರಿಗೂ ಉಳಿದ ಚುನಾವಣೆಗಳ ಮತ ಎಣಿಕೆಗೂ ವ್ಯತ್ಯಾಸವಿದೆ. ಹಾಗಾಗಿಯೇ 4158 ಮತ ಎಣಿಕೆ ಕಾರ್ಯ ಮಧ್ಯಾಹ್ನದವರೆಗೂ ತಗುಲಲಿದೆ.
ಹೇಗಿರುತ್ತೆ ಮತ ಎಣಿಕೆ ಕಾರ್ಯ?
ಹಂತ 1 – ಸ್ಟ್ರಾಂಗ್ ರೂಂನಲ್ಲಿರುವ 365 ಮತಪೆಟ್ಟಿಗೆಗಳನ್ನು ಎಣಿಕೆ ಕೊಠಡಿಗೆ ತರಲಾಗುತ್ತದೆ. ನಿರ್ದಿಷ್ಟ ಸಂಖ್ಯೆಯ ಮತಪೆಟ್ಟಿಗೆಗಳನ್ನು ಮಾತ್ರ ಸ್ಟ್ರಾಂಗ್ ರೂಂನಿಂದ ಹೊರ ತರಲಾಗುತ್ತದೆ. ಅವುಗಳ ಮೇಲಿನ ಸೀಲ್ ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಪಕ್ಷದ ಏಜೆಂಟರ ಮುಂದೆ ಮತ ಪೆಟ್ಟಿಗೆಯಲ್ಲಿರುವ ಮತಪ್ರಗಳನ್ನು ಹೊರ ತೆಗೆದು ಟ್ರೇ ಒಂದರಲ್ಲಿ ಸುರಿಯಲಾಗುತ್ತದೆ. ಎಷ್ಟು ಮತಗಳು ಚಲಾವಣೆಯಾಗಿವೆ ಎಂಬುದನ್ನು ಎಣಿಕೆ ಮಾಡಲಾಗುತ್ತದೆ.
ಹಂತ 2 – ಮತ ಪತ್ರಗಳನ್ನು ಮಿಶ್ರಣ ಮಾಡಿದ ಬಳಿಕ 25 ಮತಪತ್ರಗಳನ್ನು ಎಣಿಸಿ, ಒಂದೊಂದು ಬಂಡಲ್ ಸಿದ್ಧಪಡಿಸಲಾಗುತ್ತದೆ. ಪ್ರತಿ ಕಟ್ಟನ್ನು ಒಂದೆಡೆ ಇರಿಸಲಾಗುತ್ತದೆ.
ಹಂತ 3 – ಮತಪತ್ರಗಳ ಬಂಡಲ್’ಗಳನ್ನು ಮಿಶ್ರಣ ಮಾಡಲಾಗುತ್ತದೆ. ಯಾವ ಸ್ಥಳೀಯ ಸಂಸ್ಥೆಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಚಲಾವಣೆಯಾಗಿದೆ ಎಂಬುದು ತಿಳಿಯಬಾರದು ಎಂದು ಹೀಗೆ ಮಾಡಲಾಗುತ್ತದೆ.
ಹಂತ 4 – ಮತ ಎಣಿಕೆಗೆ 14 ಟೇಬಲ್’ಗಳನ್ನು ನಿಗದಿ ಪಡಿಸಲಾಗಿದೆ. ಪ್ರತಿ ಟೇಬಲ್’ನಲ್ಲಿ ಮೂವರು ಅಧಿಕಾರಿಗಳು ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ. ಏಜೆಂಟರು, ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಹಂತ 5 – ಸಿಂಧು, ಅಸಿಂಧು ಮತಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಬಳಿಕ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ನಂತರ ಎರಡನೆ ಪ್ರಾಶಸ್ತ್ಯದ ಮತಗಳ ಎಣಿಸಲಾಗುತ್ತದೆ. ಹೆಚ್ಚು ಮತಗಳನ್ನ ಪಡೆದವರು ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ | ಸಹ್ಯಾದ್ರಿ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ, ಶಿವಮೊಗ್ಗ ಸಿಟಿಯಲ್ಲಿ ಮದ್ಯ ಮಾರಾಟ ನಿಷೇಧ
ನಾಲ್ಕು ಸಾವಿರ ಮತಗಳಿದ್ದರೂ ಮತದಾರರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಹೆಚ್ಚು ಪ್ರಕ್ರಿಯೆಗಳು ಇರಲಿವೆ. ಹಾಗಾಗಿಯೇ ಎಣಿಕೆ ಕಾರ್ಯ ನಿಧಾನಗತಿ ಇರಲಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮತ ಎಣಿಕೆ, ಸ್ಟ್ರಾಂಗ್ ರೂಂನಿಂದ ಹೊರ ಬಂದ ಮತಪೆಟ್ಟಿಗೆಗಳು