‘ಶಾಸಕರಿಗೇಕೆ ಗನ್ ಮ್ಯಾನ್ ಬೇಕು, ಬ್ರಿಟೀಷ್ ಕಾನೂನುಗಳಿಂದ ನರಳುತ್ತಿದ್ದಾರೆ ಪೊಲೀಸರು’

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | GUN MAN  | 9 ಏಪ್ರಿಲ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರಾಜ್ಯದ ಎಲ್ಲಾ ಶಾಸಕರಿಗೆ ನೀಡಿರುವ ಗನ್ ಮನ್ ವ್ಯವಸ್ಥೆ ತೆಗೆದು ಹಾಕಬೇಕು. ಔರಾದ್ಕರ್ ವರದಿಯನ್ನು ಸರ್ಕಾರ ಮರು ವಿಮರ್ಶೆಗೆ ಒಳಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಪೊಲೀಸ್ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸು ಸರ್ಕಾರ ನೇಮಿಸಿದ ಔರಾದ್ಕರ್ ವರದಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ ಎಂದರು.

ನೌಕರ ವಿರೋಧಿ ಭಾವನೆ

ಸಮಿತಿ ಪಾರದರ್ಶಕವಾಗಿ ಸಿಬ್ಬಂದಿ ಸಮಸ್ಯೆಗಳನ್ನು ಈವರೆಗೂ ನೀಗಿಸಿಲ್ಲ. ತಳಮಟ್ಟದ ಸಿಬ್ಬಂದಿಗಳಲ್ಲಿ ವೇತನ ತಾರತಮ್ಯ ಹಾಗೆಯೇ ಮುಂದುವರೆದಿದೆ. ಹೊಸದಾಗಿ ನೇಮಕವಾದವರಿಗೂ ಒಂದೇ ಸಂಬಳ, ಇಲಾಖೆಯಲ್ಲಿ ಈಗಾಗಲೇ ಎಳೆಂಟು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೂ ಒಂದೇ ಸಂಬಳ. ಇದು ಕರ್ತವ್ಯ ನಿರ್ವಹಿಸುವ ಪೊಲೀಸರಲ್ಲಿ ನೌಕರ ವಿರೋಧಿ ಭಾವನೆ ಮೂಡುವಂತೆ ಮಾಡುವುದಿಲ್ಲವೇ. ಅವರ ನೈತಿಕ ಸ್ಥೈರ್ಯ ಕುಂದುವಂತೆ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬ್ರಿಟೀಷ್ ಮಾದರಿ ಕಾನೂನು

ಇನ್ನು ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಇಲಾಖೆಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸಿವಿಲ್ ಪೊಲೀಸರಂತೆ ರಿಸರ್ವ್ ಪೊಲೀಸರು ಪರೀಕ್ಷೆ ಬರೆದು, ತರಬೇತಿ ಪಡೆದು, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಾರೆ. ಆದರೆ ಅವರನ್ನು ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕೆ ನೇಮಿಸಲಾಗುತ್ತೆ. ಶಾಸಕರಿಗೆ ಹಾಗು ವಿಐಪಿಗಳಿಗೆ ಗನ್ ಮ್ಯಾನ್ ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಚೆನ್ನಾಗಿ ಓದಿ ಉತ್ತಮ ಸಂಬಳ ಪಡೆಯುವ ರಿಸರ್ವ್ ಪೊಲೀಸ್ ಸಿಬ್ಬಂದಿಗಳನ್ನು ಸಿವಿಲ್ ಪೊಲೀಸ್ ಆಗಿ ಕೂಡ ಹುದ್ದೆ ನೀಡಬಹುದು. ಈ ಬಗ್ಗೆ ವಿಧಾನ ಪರಿಷತ್’ನಲ್ಲಿ ಸುಧೀರ್ಘವಾಗಿ ಚರ್ಚಿಸಿದ್ದೇನೆ. ರಿಸರ್ವ್ ಪೊಲೀಸರನ್ನು ಮನುಷ್ಯರಂತೆ ಕಾಣಬೇಕು. ಇನ್ನು ಪೊಲೀಸ್ ಇಲಾಖೆ  ಬ್ರಿಟಿಷ್ ಮಾದರಿಯ ಕಾನೂನಿನಲ್ಲಿ ನರಳುತ್ತಿದೆ ಎಂದರು.

ಗನ್ ಮನ್ ವ್ಯವಸ್ತೆ ತೆಗೆದು ಹಾಕಿ

ರಿಸರ್ವ್ ಪೊಲೀಸರಿಗೆ ನ್ಯಾಯ ಕೊಡಿಸಲು ಔರಾದ್ಕರ್ ವರದಿಯನ್ನು ಮರು ಪರಿಶೀಲಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ. ಆದರೆ ಇದು ಪೊಲೀಸರನ್ನು ಪ್ರಚೋದಿಸುವ ಉದ್ದೇಶವಲ್ಲ. ರಾಜ್ಯದ ಎಲ್ಲಾ ಶಾಸಕರಿಗೆ ನೀಡಿರುವ ಗನ್ ಮನ್ ವ್ಯವಸ್ಥೆ ತೆಗೆದು ಹಾಕಿ ಎಂದು ಸರ್ಕಾರಕ್ಕೆ ಆಗ್ರಹಿಸಿದ ಅವರು, ಈ ಹಿಂದೆ ಶಾಸಕರಿಗೆ ಗನ್ ಮನ್ ಇರಲಿಲ್ಲ.ಈಗ ಎಲ್ಲಾ ಶಾಸಕರಿಗೂ ಗನ್ ಮನ್ ನೀಡಲಾಗಿದೆ. ರಿಸರ್ವ್ ಪೊಲೀಸರನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಶೋಭೆ ತರುವುದಿಲ್ಲ. ಜನ ಪ್ರತಿನಿಧಿಯಾದವನು ಮುಕ್ತವಾಗಿ ಜನರ ಬಳಿ ಹೋಗಬೇಕು. ಯಾರಿಗೆ ಜೀವಭಯವಿದೆ ಅಂತವರಿಗೆ ಭದ್ರತೆ ನೀಡಿ ಎಂದು ಆಯನೂರು ಮಂಜುನಾಥ್ ಸಲಹೆ ನೀಡಿದರು.

ಅನಾವಶ್ಯಕವಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸರ್ಕಾರ ಕೂಡಲೇ ಔರಾದ್ಕರ್ ವರದಿ ಮರು ಪರಿಶೀಲನೆಗೆ ಒಳಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟಕ್ಕೂ ನಾನು ಸಿದ್ದ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.

Shimoga Nanjappa Hospital

GUN MAN  

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment