SHIVAMOGGA LIVE NEWS | RAILWAY| 17 ಏಪ್ರಿಲ್ 2022
ಬ್ರಿಟೀಷ್ ಕಾಲದ ರೈಲ್ವೆ ಮಾರ್ಗ ಹೊರತು ಈತನಕ ಶಿವಮೊಗ್ಗದಿಂದ ಯಾವುದೆ ಹೊಸ ಮಾರ್ಗಗಳು ಇರಲಿಲ್ಲ. ಇದೆ ಮೊದಲ ಭಾರಿ ಹೊಸ ರೈಲ್ವೆ ಮಾರ್ಗ ಸಿದ್ಧವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ – ಚೆನ್ನೈ ನೂತನ ರೈಲು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಿಂದ ಯಾವುದೆ ಹೊಸ ಮಾರ್ಗಗಳನ್ನು ಮಾಡಿಲ್ಲ. ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲು ಮಾರ್ಗ ಸ್ವಾತಂತ್ರ್ಯ ನಂತರದ ಹೊಸ ರೈಲ್ವೆ ಮಾರ್ಗವಾಗಿದೆ ಎಂದು ತಿಳಿಸಿದರು.
ರೈತರಿಗೆ ಪರಿಹಾರದ ಹಣ
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ಸಂಬಂಧ ಶೇ.60ರಷ್ಟು ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ತಲುಪಿಸಲಾಗಿದೆ. ಈ ತಿಂಗಳ ಕೊನೆ ವೇಳೆ ಬಹುತೇಕ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಹೊಸ ರೈಲಿಗೆ ರೀ ವರ್ಕ್
ಶಿವಮೊಗ್ಗದಿಂದ ಚೆನ್ನೈ ಮತ್ತು ಶಿವಮೊಗ್ಗದಿಂದ ತಿರುಪತಿಗೆ ಈ ಮೊದಲು ಪ್ರತ್ಯೇಕ ರೈಲುಗಳು ಸಂಚರಿಸುತ್ತಿದ್ದವು. ಕೋವಿಡ್ ನಂತರ ಹಲವು ರೈಲು ಮಾರ್ಗಗಳನ್ನು ಪುನಾರಂಭ ಮಾಡಲಿಲ್ಲ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಹೊಸ ಮಾರ್ಗವನ್ನು ಘೋಷಿಸಲಾಗಿದೆ. ಈಗ ಶಿವಮೊಗ್ಗ – ರೇಣಿಗುಂಟ (ತಿರುಪತಿ) – ಚೆನ್ನೈ ರೈಲು ಸಂಚಾರ ಆರಂಭಿಸಲಾಗಿದೆ. ಈ ರೈಲನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕಿದೆ. ದಕ್ಷಿಣ ಕನ್ನಡ ಭಾಗ, ಚಿತ್ರದುರ್ಗದ ಭಾಗದ ಜನರಿಗೂ ಅನುಕೂಲ ಆಗಲಿದೆ ಎಂದರು.
ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೊ
ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. 8 ಕೋಟಿ ರೂ. ವೆಚ್ಚದಲ್ಲಿ ಲೆವಲಿಂಗ್ ಕೆಲಸ ನಡೆಯುತ್ತಿದೆ. ರೈಲ್ವೆ ಯೋಜನೆಗಳು ಆರಂಭವಾಗಲು ಶೇ.90ರಷ್ಟು ಭೂ ಸ್ವಾದೀನ ಪ್ರಕ್ರಿಯೆ ಮುಗಿದಿರಬೇಕು. ಇನ್ನೊಂದು ವಾರದಲ್ಲಿ ಭೂ ಸ್ವಾದೀನ ಪ್ರಕ್ರಿಯೆ ಶೇ.90ರಷ್ಟು ಪೂರ್ಣಗೊಳ್ಳಲಿದೆ. ಒಂದೆರಡು ತಿಂಗಳಲ್ಲಿ ಟೆಂಡರ್ ಕರೆದು, ಸಚಿವರ ಮೂಲಕ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.
ಇದನ್ನೂ ಓದಿ | ಶಿವಮೊಗ್ಗದಿಂದ ಸಂಚಾರ ಆರಂಭಿಸಿತು ಹೊಸ ರೈಲು, ಮೊದಲ ದಿನ ಹೇಗಿತ್ತು ಪ್ರಯಾಣಿಕರ ರೆಸ್ಪಾನ್ಸ್?
ಪ್ರತಿ ರೈಲು ಮೂರು ಸಾವಿರ ಕಿ.ಮೀ ಸಂಚರಿಸಿದ ಬಳಿಕ ಸರ್ವಿಸ್ ಮಾಡಿಸಬೇಕು. ಶಿವಮೊಗ್ಗದಲ್ಲಿಕೋಚಿಂಗ್ ಡಿಪೋ ಆದರೆ ರಾಜ್ಯದ ವಿವಿಧೆಡೆಯಿಂದ ರೈಲುಗಳು ಶಿವಮೊಗ್ಗಕ್ಕೆ ಬರಲಿದೆ. ಇದರಿಂದ ಇಲ್ಲಿಯ ಜನರಿಗು ಅನುಕೂಲ ಆಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ವಿಮಾನ ನಿಲ್ದಾಣ, ಕೇಬಲ್ ಕಾರ್
ಈ ವರ್ಷದ ಡಿಸೆಂಬರ್’ಗೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಇನ್ನು, ದೇಶದಲ್ಲಿ 15 ಕೇಬಲ್ ಕಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ರಾಜ್ಯದ ಎರಡು ಯೋಜನೆಗಳಿವೆ. ಅದರಲ್ಲಿ ಒಂದು ಕೋಡಚಾದ್ರಿಯಿಂದ ಕೊಲ್ಲೂರು ಮಾರ್ಗದ ಕೇಬಲ್ ಕಾರ್ ಯೋಜನೆಯಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ | ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200