ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 NOVEMBER 2022
ಶಿವಮೊಗ್ಗ : ರಾಜಕೀಯ ಚಟಕ್ಕಾಗಿ ಶರಾವತಿ ಸಂತ್ರಸ್ಥರು, ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು. (Questions to congress)
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಅವರು, ಶರಾವತಿ ಸಂತ್ರಸ್ಥರ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ರೈತರಿಗಿಂತಲು ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರೆ ಇದ್ದರು. ಇಷ್ಟು ವರ್ಷ ರೈತರು, ಶರಾವತಿ ಸಂತ್ರಸ್ಥರು, ಬಗರ್ ಹುಕುಂ, ಅರಣ್ಯ ಹಕ್ಕು ಕಾಯ್ದೆ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಟೀಕಿಸಿದರು.
(Questions to congress)
ಕಾಂಗ್ರೆಸ್‌ಗೆ ಮೂರು ಪ್ರಶ್ನೆ
ಇದೆ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಂಸದ ರಾಘವೇಂದ್ರ ಅವರು ಮೂರು ಪ್ರಶ್ನೆ ಕೇಳಿದರು.
ಪ್ರಶ್ನೆ 1 – 1980ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂತು. ಆಗ ನಿಮ್ಮದೆ ಸರ್ಕಾರ, ನಿಮ್ಮದೆ ಮುಖ್ಯಮಂತ್ರಿ ಇದ್ದರು. ಕಾಯ್ದೆ ಜಾರಿಗೆ ಮೊದಲೆ ಭೂಮಿ ಹಕ್ಕು ನೀಡಬಹುದಿತ್ತು. ಆಗ ಯಾಕೆ ಸಂತ್ರಸ್ಥರಿಗೆ ಭೂಮಿ ಹಂಚಿಕೆ ಮಾಡಲಿಲ್ಲ?
ಪ್ರಶ್ನೆ 2 – 1980 ರಿಂದ 2017ರವರೆಗೆ ನಿಮ್ಮದೆ ಸರ್ಕಾರ ಇತ್ತು. ಆಗ ಯಾಕೆ ಸಂತ್ರಸ್ಥರ ಸಮಸ್ಯೆ ಮುಕ್ತಿಗೆ ಪ್ರಯತ್ನ ಮಾಡಲಿಲ್ಲ?
ಪ್ರಶ್ನೆ 3 – ಇನ್ನು ಎಷ್ಟು ವರ್ಷ ಶರಾವತಿ ಮುಳುಗಡೆ ಸಂತ್ರಸ್ಥರು, ಬಗರ್ ಹುಕುಂ, ಅರಣ್ಯ ಹಕ್ಕು ಹೆಸರಿನಲ್ಲಿ ರಾಜಕೀಯ ಮಾಡುತ್ತೀರ?
ALSO READ – ಶರಾವತಿ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ 3 ಅವಕಾಶವಿತ್ತು, ತೀರ್ಥಹಳ್ಳಿಯಲ್ಲಿ ಸಿಎಂ
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422