ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 15 DECEMBER 2024
ಶಿವಮೊಗ್ಗ : ನಗರದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಾಣವಾಗಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ (Parking) ಕಟ್ಟಡ ಧೂಳು ಹಿಡಿಯುತ್ತಿದೆ. ಉದ್ಘಾಟನೆಯಾಗಿ ವರ್ಷ ಕಳೆದರು ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ.
ಶಿವಪ್ಪನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್.ರಸ್ತೆಯಲ್ಲಿದ್ದ ಹೂವಿನ ಮಾರುಕಟ್ಟೆ ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ.
ಮತ್ತೊಮ್ಮೆ ಜನವರಿ ಬಂದರೂ
25 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ಸಚಿವ ಮಧು ಬಂಗಾರಪ್ಪ ಇದನ್ನು ಉದ್ಘಾಟಿಸಿದ್ದರು. ಮತ್ತೊಮ್ಮೆ ಜನವರಿ ತಿಂಗಳು ಬಂದರು ಕಾರ್ ಪಾರ್ಕಿಂಗ್ (Parking) ಕಟ್ಟಡದಲ್ಲಿ ಪಾರ್ಕಿಂಗ್ ಸೇವೆ ಆರಂಭವಾಗಿಲ್ಲ. ಹಾಗಾಗಿ ಕಟ್ಟಡ ನಿರ್ಮಾಣದ ಉದ್ದೇಶವೆ ಈಡೇರದೆ ಸಂಚಾರ ದಟ್ಟಣೆ ಮುಂದುವರೆದಿದೆ.
ಇದು ಬರೀ ಪಾರ್ಕಿಂಗ್ ಕಟ್ಟಡವಲ್ಲ
ವಿಶೇಷತೆ 1 : 10 ಸಾವಿರ ಚದರ ಅಡಿಯಲ್ಲಿ, ಬೇಸ್ಮೆಂಟ್ ಮತ್ತು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ.
ವಿಶೇಷತೆ 2 : ಬೇಸ್ಮೆಂಟ್ನಲ್ಲಿ ಬೈಕ್ ಪಾರ್ಕಿಂಗ್ಗೆ ಮೀಸಲು. 80 ಬೈಕುಗಳ ನಿಲುಗಡೆಗೆ ಅವಕಾಶವಿದೆ.
ವಿಶೇಷತೆ 3 : ನೆಲ ಮಹಡಿಯಲ್ಲಿ 118 ಮಳಿಗೆ ನಿರ್ಮಿಸಲಾಗಿದೆ. ಪಾರ್ಕಿಂಗ್ ಕಟ್ಟಡದಲ್ಲಿ ಈ ಮೊದಲು ಇದ್ದ ಹೂವಿನ ವ್ಯಾಪಾರಿಗಳಿಗೆ ಮಳಿಗೆ ನೀಡುವ ಉದ್ದೇಶವಿದೆ.
ಇದನ್ನೂ ಓದಿ » ಶಿವಮೊಗ್ಗದ ಜನರೆ ಹುಷಾರ್, ಇಲ್ಲಿದೆ ಟಾಪ್ 5 ವಂಚನೆ ಲಿಸ್ಟ್, ಇವರ ಬಲೆಗೆ ಬಿದ್ದರೆ ಸಂಕಷ್ಟ ಫಿಕ್ಸ್
ವಿಶೇಷತೆ 4 : ಉಳಿದ ಮೂರು ಮಹಡಿಗಳಲ್ಲಿ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 172 ಕಾರುಗಳ ನಿಲುಗಡೆಗೆ ಅವಕಾಶವಿದೆ.
ವಿಶೇಷತೆ 5 : ಈ ಕಟ್ಟಡಕ್ಕೆ ಎಲೆಕ್ಟ್ರಿಕ್ ಸಬ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ಸೇಫ್ಟಿ ವ್ಯವಸ್ಥೆ ಮಾಡಲಾಗಿದೆ. ಇನ್ನು ತುರ್ತು ಸಂದರ್ಭ ಸ್ವಯಂ ಚಾಲಿತ ಸೆನ್ಸರ್ ಆಧಾರಿತ ಫೈರ್ ಸೇಫ್ಟಿ ಇದೆ. ಕಾರು ಪಾರ್ಕಿಂಗ್ ಮಾಡಿದವರು ಕಟ್ಟಡದ ಮೇಲೆ, ಕೆಳಗೆ ಹೋಗಿ ಬರಲು ಲಿಫ್ಟ್ ಮತ್ತು ಮೆಟ್ಟಿಲುಗಳ ವ್ಯವಸ್ಥೆಯಿದೆ.
ಕಟ್ಟಡ ಬಳಕೆಯಾಗದೆ ಏನೆಲ್ಲ ಸಮಸ್ಯೆ ಆಗ್ತಿದೆ?
ಸಮಸ್ಯೆ 1 : ಬಿ.ಹೆಚ್.ರಸ್ತೆ, ನೆಹರು ರಸ್ತೆಗಳಲ್ಲಿ ಕಾರ್ಗಳ ನಿಲುಗಡೆ ಸ್ಥಳಾವಕಾಶ ಸಿಗದೆ ಕಾರು ಚಾಲಕರು ಪರದಾಡುತ್ತಿದ್ದಾರೆ. ಅಡ್ಡದಿಡ್ಡಿ ಕಾರು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಸಮಸ್ಯೆ 2 : ಗಾಂಧಿ ಬಜಾರ್, ಬಿ.ಹೆಚ್.ರಸ್ತೆಯಲ್ಲಿ ಬೈಕುಗಳ ಪಾರ್ಕಿಂಗ್ಗೆ ಸೂಕ್ತ ಸ್ಥಳ ಸಿಗದೆ ಸವಾರರು ಪರದಾಡುವಂತಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?
ಸಮಸ್ಯೆ 3 : ಬಿ.ಹೆಚ್.ರಸ್ತೆಯಲ್ಲಿ ವೆಂಕಟೇಶ್ವರ ಸ್ವೀಟ್ ಹೌಸ್ ಮುಂಭಾಗ ರಸ್ತೆ ಕಿರಿದಾಗಿದೆ. ಇಲ್ಲಿ ನೋ ಪಾರ್ಕಿಂಗ್ ಜೋನ್ ಮಾಡಲಾಗಿತ್ತು. ಇದರಿಂದ ವಾಹನ ಸಂಚಾರ ಸುಗಮವಾಗಿತ್ತು. ಆದರೆ ಅನಿವಾರ್ಯ ಕಾರಣಕ್ಕೆ ಸಂಚಾರ ಪೊಲೀಸರು ಪುನಃ ಇಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ಗೆ (Parking) ಅವಕಾಶ ನೀಡಬೇಕಾಯಿತು. ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಿದರೆ ಇದು ನೋ ಪಾರ್ಕಿಂಗ್ ಜೋನ್ ಆಗಲಿದೆ.
ಸಮಸ್ಯೆ 4 : ಹೂವಿನ ವ್ಯಾಪಾರಿಗಳಿಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶವಿದೆ. ಆದರೆ ಅಲ್ಲಿಗೆ ಹೋಗುವ ಗ್ರಾಹಕರ ಸಂಖ್ಯೆ ಕಡಿಮೆ. ಇದೆ ಕಾರಣಕ್ಕೆ ಶಿವಪ್ಪನಾಯಕ ಪ್ರತಿಮೆ ಎದುರಿನ ರಸ್ತೆಯಲ್ಲಿ ಮಳಿಗೆ ಹಾಕಿಕೊಂಡಿದ್ದಾರೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಿದರೆ ಹಲವು ಸಮಸ್ಯೆಗಳಿಗೆ ಒಟ್ಟಿಗೆ ಮುಕ್ತಿ ಸಿಗಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತು ಗಮನ ಹರಿಸಬೇಕಿದೆ.
(Parking)
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422