ಶಿವಮೊಗ್ಗ: ನಗರದ ವಿವಿಧೆಡೆ ಹಾಲಿನ ಪ್ಯಾಕೆಟ್ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಬೆಳಗಿನ ಜಾವ ಶಿಮುಲ್ ಸಿಬ್ಬಂದಿ ಲಾರಿಯಿಂದ ಹಾಲಿನ ಕ್ರೇಟ್‌ಗಳನ್ನು ಇಳಿಸಿ ಹೋದ ನಂತರ ಕಳ್ಳರು ಹಾಲಿನ ಪ್ಯಾಕೆಟ್‌ಗಳನ್ನು (Nandini milk) ಕದಿಯತ್ತಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸವಳಂಗ ರಸ್ತೆಯ ನಂದಿನಿ ಹಾಲಿನ ಪಾಯಿಂಟ್‌ನಲ್ಲಿ ಹಾಲಿನ ಪ್ಯಾಕೆಟ್‌ಗಳು ಕಳ್ಳತನ ಮಾಡಲಾಗಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನವರಿ 25ರ ಬೆಳಗ್ಗೆ 5.30ರ ಹೊತ್ತಿಗೆ ಹಾಲಿನ ಪ್ಯಾಕೆಟ್‌ಗಳನ್ನು ಕಳವು ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?
ಎಲೆಕ್ಟ್ರಿಕ್ ಬೈಕ್‌ನಲ್ಲಿ ಬಂದ ಯುವಕನೊಬ್ಬ ಹಾಲಿನ ಕ್ರೇಟ್‌ಗಳನ್ನು ಪರಿಶೀಲನೆ ನಡೆಸುತ್ತಾನೆ. ಬಳಿಕ ಕ್ರೇಟ್ ಒಂದರಲ್ಲಿದ್ದ ಹಾಲಿನ ಪ್ಯಾಕೆಟ್‌ಗಳನ್ನು ಬೈಕಿನಲ್ಲಿ ಇರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಗುರುತು ಸಿಗಬಾರದು ಎಂದ ಮುಖವನ್ನು ಮರೆಮಾಚಿಕೊಂಡು ಕೃತ್ಯ ಎಸಗಿದ್ದಾನೆ.

‘ಸಿಗೋದೇ ಒಂದೆರಡು ರುಪಾಯಿʼ
ಮಿಲ್ಕ್ ಮಂಜು ಎಂಬುವವರಿಗೆ ಸೇರಿದ ಹಾಲಿನ ಪಾಯಿಂಟ್‌ನಲ್ಲಿ ಕಳ್ಳತನವಾಗಿದೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಹಾಲಿನ ವ್ಯಾಪಾರಿ ಮಿಲ್ಕ್ ಮಂಜು, “ಡೈರಿಯಿಂದ ಪ್ರತಿ ಪಾಯಿಂಟ್‌ಗೆ ಬೆಳಗಿನ ಜಾವ ಹಾಲು ತಂದು ಇಳಿಸುತ್ತಾರೆ. ನಾವು ಅಲ್ಲಿಂದ ಮನೆ ಮನೆಗೆ ಹಾಲು ಹಾಕುತ್ತೇವೆ. ಒಂದು ಏರಿಯಾದಲ್ಲಿ ಹಾಲು ಹಾಕಿ ವಾಪಾಸಾಗಿ ಮತ್ತಷ್ಟು ಪ್ಯಾಕೆಟ್‌ಗಳನ್ನು ಸಂಗ್ರಹಿಸಿಕೊಂಡು ಇನ್ನೊಂದು ಏರಿಯಾಗೆ ಹೋಗುತ್ತೇವೆ. ಇಷ್ಟೆಲ್ಲ ಮಾಡಿದರು ಒಂದೆರೆಡು ರುಪಾಯಿ ಸಿಗುತ್ತದೆ. ಆದರೆ ಈ ಕಳ್ಳರು ಪ್ಯಾಕೆಟುಗಳನ್ನು ಕದ್ದು ನೂರಾರು ರುಪಾಯಿ ನಷ್ಟ ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಟಿಯ ವಿವಿಧೆಡೆ ಕಳ್ಳತನ ಶಿವಮೊಗ್ಗ ನಗರದ ವಿವಿಧೆಡೆ ಹಾಲಿನ ಪಾಯಿಂಟ್‌ಗಳಲ್ಲಿ ಇದೇ ಸ್ಥಿತಿ ಇದೆ. ಆಗಾಗ ಪ್ಯಾಕೆಟ್ ಹಾಲು ಕಳ್ಳತನವಾಗುತ್ತಿವೆ. ಆದರೆ ಇದಕ್ಕೆಲ್ಲ ದೂರು ಕೊಡಲು ಸಾಧ್ಯವಿಲ್ಲ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಹಾಲಿನ ಪ್ಯಾಕೆಟ್ ಕಳ್ಳರಿಗೆ ಮೂಗುದಾರ ಹಾಕಲು ಸಾಧ್ಯವಾಗಿಲ್ಲ.
LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು





