ಶಿವಮೊಗ್ಗದಲ್ಲಿ NES ಹಬ್ಬ, 6 ಕಡೆಯಿಂದ ಅಮೃತ ನಡಿಗೆ, ಡಾ.ವೀರೇಂದ್ರ ಹೆಗ್ಗಡೆ, ವಸಿಷ್ಠ ಸಿಂಹ, ಗಂಗಾವತಿ ಪ್ರಾಣೇಶ್ ಭಾಗಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 16 JUNE 2023

SHIMOGA : ರಾಷ್ಟ್ರೀಯ ಶಿಕ್ಷಣ ಸಮಿತಿಯ (National Education Society) ಅಮೃತ ಮಹೋತ್ಸವದ ಅಂಗವಾಗಿ ಜೂ.20 ಮತ್ತು 21ರಂದು ಎನ್‌ಇಎಸ್‌ ಹಬ್ಬ ಆಯೋಜಿಸಲಾಗಿದೆ. ಪ್ರತಿಭಾ ಪುರಸ್ಕಾರ, ವಸ್ತು ಪ್ರದರ್ಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

National-Education-Society-Amrutha-Mahotsava-Press-Meet

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್‌, ವ್ಯಕ್ತಿ ಬೆಳೆದಂತೆ ದುರ್ಬಲನಾಗುತ್ತಾನೆ. ಆದರೆ ವಯಸ್ಸಾದಂತೆ ಸಂಸ್ಥೆಗಳು ದೃಢವಾಗುತ್ತವೆ. ಅದೆ ರೀತಿ ಎನ್‌ಇಎಸ್‌ ಸಂಸ್ಥೆ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ಎಂದರು.

ಏನೇನೆಲ್ಲ ಕಾರ್ಯಕ್ರಮ ಇರಲಿದೆ?

ಎನ್‌ಇಎಸ್‌ ಹಬ್ಬದ (National Education Society) ಉದ್ಘಾಟನಾ ಸಮಾರಂಭವು ಜೂ.20ರಂದು ಬೆಳಗ್ಗೆ 10 ಗಂಟೆಗೆ ಎನ್‌ಇಎಸ್‌ ಮೈದಾನದಲ್ಲಿ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ – ಸಂಸದ ರಾಘವೇಂದ್ರ ಸೇರಿ ಹಲವರು ವಶಕ್ಕೆ | ಚಾರ್ಲಿಗಾಗಿ ಬಹುಮಾನ | ಶಿವಮೊಗ್ಗ ನಗರದ 10 ಫಟಾಫಟ್‌ ಸುದ್ದಿ

ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸಾಂಸ್ಕೃತಿಕ ವೈಭವ ನಡೆಯಲಿದೆ. ಈ ಸಂದರ್ಭ ಶಿವಮೊಗ್ಗ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಗುತ್ತದೆ. ನಟ ವಸಿಷ್ಠ ಸಿಂಹ ಅವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿರುತ್ತಾರೆ.

Parishrama NEET Academy

ಜೂ.21ರಂದು ಬೆಳಗ್ಗೆ 10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಸಭಾ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಅಮೃತ ನಡಿಗೆ, ಯೋಗ

ಜೂ.17ರಂದು ಅಮೃತ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎನ್‌ಇಎಸ್‌ ಶಿಕ್ಷಣ ಸಂಸ್ಥೆಗಳ 18 ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ 6 ಕಡೆಯಿಂದ ನಡಿಗೆ ಆರಂಭವಾಗಲಿದೆ. ಎಲ್ಲರು ಕೊನೆಗೆ ಎನ್‌ಇಎಸ್‌ ಮೈದಾನಕ್ಕೆ ತಲುಪಲಿದ್ದಾರೆ. ಅಲ್ಲಿ ಹೀಲಿಯಂ ಬಲೂನ್‌ ಹಾರಿಸಲಾಗುತ್ತದೆ.ಎಸ್‌.ಎನ್‌.ನಾಗರಾಜ್‌, ಎನ್‌ಇಎಸ್‌ ಕಾರ್ಯದರ್ಶಿ
ಜೂ.21 ವಿಶ್ವ ಯೋಗ ದಿನ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎನ್‌ಇಎಸ್‌ ಮೈದಾನದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಯೋಗ ನಡೆಯಲಿದೆ. ಬೆಳಗ್ಗೆ 6.30ರಿಂದ ದೊಡ್ಡ ಸಂಖ್ಯೆಯಲ್ಲಿ ಯೋಗಪಟುಗಳು ಯೋಗ ಮಾಡಲಿದ್ದಾರೆ.ಡಾ. ಪಿ.ನಾರಾಯಣ, ಎನ್‌ಇಎಸ್‌ ಸಹ ಕಾರ್ಯದರ್ಶಿ

ಗ್ರಾಮೀಣ ಭಾಗಕ್ಕೆ ಅಧುನಿಕ ಶಿಕ್ಷಣ

GR Narayana Rao, National Education Society President

ಅಮೃತ ಮಹೋತ್ಸವದ ಹಿನ್ನೆಲೆ 2.50 ಕೋಟಿ ರೂ. ವೆಚ್ಚದಲ್ಲಿ ಕೋಣಂದೂರಿನಲ್ಲಿ ಆಧುನಿಕ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಜೂ.26ರಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಗ್ರಾಮೀಣ ಭಾಗಕ್ಕೂ ಆಧುನಿಕ ಶಿಕ್ಷಣ ವಿಸ್ತರಿಸುವ ಉದ್ದೇಶಕ್ಕೆ ಈ ಕಟ್ಟಡ ನಿರ್ಮಿಸಲಾಗಿದೆ.ಜಿ.ಎಸ್.ನಾರಾಯಣ ರಾವ್‌, ಎನ್‌ಇಎಸ್‌ ಅಧ್ಯಕ್ಷ

ಉಪಾಧ್ಯಕ್ಷ ಸಿ.ಆರ್.ನಾಗರಾಜ್‌, ಡಿ.ಜಿ.ರಮೇಶ್‌, ಅಶ್ವತ್ಥ ನಾರಾಯಣ ಶೆಟ್ಟಿ, ಜಿ.ಎನ್.ಸುಧೀರ್‌, ಶಿವಕುಮಾರ್‌, ರಾಮಚಂದ್ರ ಮೂರ್ತಿ, ಅನಂತ ದತ್ತ, ಸೀತಾಲಕ್ಷ್ಮಿ, ಕುಲಸಚಿವ ಪ್ರೊ.ಎನ್‌.ಕೆ.ಹರಿಯಪ್ಪ, ಶೈಕ್ಷಣಿಕ ಅಧಿಕಾರಿ ರಾಮಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ನೃಪತುಂಗ ಸುದ್ದಿಗೋಷ್ಠಿಯಲ್ಲಿ ಇದ್ದರು.

Shivamogga live Editor Nitin Kaidotlu

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment