ಶಿವಮೊಗ್ಗದ ಹುಲಿ, ಸಿಂಹಧಾಮಕ್ಕೆ ಬನ್ನೇರುಘಟ್ಟದಿಂದ ನೂತನ ಅತಿಥಿಗಳು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನೈಸರ್ಗಿಕ ಕಾಡು ಹೊಂದಿರುವ ಶಿವಮೊಗ್ಗ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಬನ್ನೇರುಘಟ್ಟ ಅಭಯಾರಣ್ಯದಿಂದ ಎರಡು ಸಿಂಹಗಳನ್ನು ಸಫಾರಿಗೆ ತರಲಾಗಿದೆ. ಇದರಿಂದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ ಆರಕೆ ಏರಿಕೆಯಾಗಿದೆ.

ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂತ್ ಎಂಬ ಹೆಸರಿನ ಎರಡು ಸಿಂಹಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ. ದೀರ್ಘಕಾಲದ ಒಡನಾಟ ಹೊಂದಿರುವುದರಿಂದ ಇವರೆಡು ಸಿಂಹಗಳನ್ನು ಒಂದೆ ಕ್ರಾಲ್‍ನಲ್ಲಿ ಇಡಲಾಗಿದೆ. ಕೆಲ ದಿನಗಳ ಬಳಿಕ ಇವುಗಳು ಸಫಾರಿಯಲ್ಲಿ ತಿರುಗಾಡಲು ಬಿಡಲಾಗುತ್ತದೆ.

ಸಂತಾನಾಭಿವೃದ್ಧಿಗೆ ಪೂರಕ

1998ರಲ್ಲಿ ಸಿಂಹಧಾಮದ ಆರಂಭದಲ್ಲಿ ಮೈಸೂರು ಮೃಗಾಲಯದಿಂದ ನಾಲ್ಕು ಸಿಂಹಗಳನ್ನು ತರಲಾಗಿತ್ತು. 2016ರಲ್ಲಿ ಮಾನಿನಿ ಎಂಬ ಸಿಂಹ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿತು. ಪ್ರಸ್ತುತ ಆರ್ಯ(12), ಮಾನ್ಯ (5), ಸುಷ್ಮಿತಾ ಮತ್ತು ಸರ್ವೇಶ್ (8) ಸಿಂಹಗಳು ಇದ್ದಾವೆ. ಈಗ ಸುಚಿತ್ರಾ ಮತ್ತು ಯಶ್ವಂತ್ ಸಿಂಹಗಳು ಬಂದಿರುವುದರಿಂದ ಸಂತಾನಾಭಿವೃದ್ಧಿಗೆ ಪೂರಕವಾಗಲಿದೆ ಅನ್ನುತ್ತಾರೆ ಅಧಿಕಾರಿಗಳು.

217389951 1153288501817725 4096501658035425233 n.jpg? nc cat=102&ccb=1 3& nc sid=730e14& nc ohc=NI8ByLd 2YQAX eTTxq&tn=XgSJ3kUX1No5RJvs& nc ht=scontent.fblr1 6

ಗುಜರಾತ್‍ನಿಂದ ಸಿಂಹ ತರಲು ಪ್ರಯತ್ನ

ಗುಜರಾತ್‍ನ ಗಿರ್‍ ಅರಣ್ಯದಿಂದ ಎರಡು ಸಿಂಹಗಳನ್ನು ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತರಲು ಪ್ರಯತ್ನಿಸಲಾಯಿತು. ಅಧಿಕಾರಿಗಳು ಗಿರ್ ಅರಣ್ಯಕ್ಕೆ ತೆರಳಿ ಚರ್ಚೆ ಮಾಡಿದ್ದರು. ಪತ್ರ ವ್ಯವಹಾರವನ್ನು ನಡೆಸಲಾಯಿತು. ಆದರೆ ಗಿರ್ ಅರಣ್ಯದ ಅಧಿಕಾರಿಗಳು ವಿಶೇಷ ತಳಿಯ ಸಿಂಹಗಳು ಎಕ್ಸ್‍ಚೇಂಜ್‍ಗೆ ಬೇಕು ಎಂದು ಕೇಳಿದರು. ಆದರೆ ವಿಶೇಷ ತಳಿಗಳು ಇಲ್ಲದಿರುವುದರಿಂದ ಈ ಪ್ರಯತ್ನ ಸಾಧ್ಯವಾಗಿರಲಿಲ್ಲ.

ನೂತನ ಸಿಂಹಗಳು ಬಂದಿರುವುದರಿಂದ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಮತ್ತಷ್ಟು ಖುಷಿ ಸಿಗಲಿದೆ. ಸಿಂಹಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶವು ಲಭ್ಯವಾಲಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment