SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಜಿಲ್ಲೆಯಾದ್ಯಂತ ಹೊಸ ವರ್ಷವನ್ನು (New Year) ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಡುರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಎಲ್ಲೆಲ್ಲಿ ಹೇಗಿತ್ತು ಸಂಭ್ರಮಾಚರಣೆ?
ಕ್ಲಬ್, ಹೊಟೇಲ್‌ಗಳು
ಶಿವಮೊಗ್ಗ ನಗರದ ವಿವಿಧೆಡೆ ಕ್ಲಬ್, ಹೊಟೇಲ್ ಮತ್ತು ರೆಸಾರ್ಟ್‌ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಕಂಟ್ರಿ ಕ್ಲಬ್ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಟುಂಬ ಸಹಿತ ಮತ್ತು ಸ್ನೇಹಿತರ ಜೊತೆಗೆ ಕ್ಲಬ್ ಸದಸ್ಯರು, ನಾಗರಿಕರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಹಾಡು, ನೃತ್ಯ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ತೋಟ, ತೋಟದ ಮನೆಗಳು
ನಗರದ ಹೊರ ವಲಯದ ತೋಟ, ತೋಟದ ಮನೆಗಳಲ್ಲೂ ಅದ್ಧೂರಿ ಪಾರ್ಟಿಗಳು ನಡೆದವು. ಮನೆಗಳಲ್ಲೂ ಕೂಡ ನಾಗರಿಕರು ನಡುರಾತ್ರಿವರೆಗೆ ಕಾದಿದ್ದು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.
ಎಣ್ಣೆ ಕಿಕ್, ಕೇಕ್ ಕಟಿಂಗ್
ಹೊಸ ವರ್ಷದ ಪಾರ್ಟಿಗಳ ಹಿನ್ನೆಲೆ ಮದ್ಯ ಮಾರಾಟ ಬಿರುಸಾಗಿತ್ತು. ಜಿಲ್ಲೆಯಾದ್ಯಂತ ಬಾರ್, ವೈನ್ ಶಾಪ್‌ಗಳಲ್ಲಿ ಮದ್ಯ ಖರೀದಿ ಜೋರಿತ್ತು. ಮಂಗಳವಾರ ಮಧ್ಯಾಹ್ನದಿಂದಲೆ ಮದ್ಯ, ಚಿಕನ್, ಮಟನ್ ಖರೀದಿ ನಡೆಯುತ್ತಿತ್ತು. ಇನ್ನು, ಸಂಜೆ ವೇಳೆಗೆ ಬೇಕರಿಗಳ ಮುಂದೆ ಜನರು ಸರತಿಯಲ್ಲಿ ನಿಂತು ಕೇಕ್ ಖರೀದಿಸಿದ್ದರು.
ನಡುರಾತ್ರಿವರೆಗೆ ಪಾರ್ಟಿ, ಸಂಭ್ರಮ
ತಡರಾತ್ರಿವರೆಗೆ ಪಾರ್ಟಿಗಳು, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆ ಹೊತ್ತಿಗೆ ಹಾಡು, ಕುಣಿತದ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಪಟಾಕಿಗಳನ್ನು ಸಿಡಿಸಲಾಯಿತು.
ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯದ್ಯಂತ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಯಿತು. ಇನ್ನು, ಬಂದೋಬಸ್ತ್ ನಡುವೆ ಅಮೀರ್ ಅಹಮದ್ ಸರ್ಕಲ್ ಬಳಿ ಪೊಲೀಸರು ಕೇಕ್ ಕತ್ತರಿಸಿ ಹೊಸ ವರ್ಷಾಚರಣೆ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಕೇಕ್ ಕತ್ತರಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿ ವಿವಿಧ ಠಾಣೆಗಳ ಸಿಬ್ಬಂದಿ ಇದ್ದರು.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್‌ಡೇಟ್ ನೀಡಿದ ಸಂಸದ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200