ಕಳ್ಳರು, ದರೋಡೆಕೋರರಿಂದ ರಕ್ಷಿಸಿಕೊಳ್ಳಲು ಗಸ್ತು ಆರಂಭಿಸಿದ ಜನ, ಫೋಟೊ ರಿಲೀಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟೆಂಬರ್ 2021

ಕಳ್ಳರು, ದರೋಡೆಕೋರರಿಂದ ರಕ್ಷಿಸಿಕೊಳ್ಳಲು ಶಿವಮೊಗ್ಗದ ಬಡಾವಣೆಯೊಂದರ ಜನರು ತಾವೇ ಗಸ್ತು ಆರಂಭಿಸಿದ್ದಾರೆ. ಗೃಹ ಸಚಿವರ ತವರು ಜಿಲ್ಲೆಯಲ್ಲೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಚರ್ಚೆಗೆ ಕಾರಣವಾಗಿದೆ.

ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹಚ್ಚಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ನಿವಾಸಿಗಳ ಸಂಘದ ವತಿಯಿಂದ ಪೊಲೀಸ್ ಇಲಾಖೆಗೆ ಮನವಿಯನ್ನೂ ಮಾಡಲಾಗಿತ್ತು.

gopala%2Bgowda

ರಾತ್ರಿ ಗಸ್ತು ಶುರು ಮಾಡಿದ ಸ್ಥಳೀಯರು

ರಾತ್ರಿ ಮತ್ತು ಬೆಳಗಿನ ಸಂದರ್ಭದಲ್ಲಿ ವಾಕಿಂಗ್ ತೆರಳಿದ್ದಾಗ ದರೋಡೆಗಳಾಗುತ್ತಿವೆ. ಇದನ್ನು ತಪ್ಪಿಸಲು ಮತ್ತು ಈ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸ್ಥಳೀಯರು ದೊಣ್ಣೆಗಳನ್ನು ಹಿಡಿದುಕೊಂಡು ಗಸ್ತು ಆರಂಭಿಸಿದ್ದಾರೆ.

1632381449326627 1

ಬುಧವಾರ ರಾತ್ರಿ ಸ್ಥಳೀಯರು ಗಸ್ತು ಮಾಡಿದ್ದಾರೆ. ನಿರಂತರವಾಗಿ ಗಸ್ತು ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಗಸ್ತು ಮಾಡಿದ ಫೋಟೊವೊಂದನ್ನು ಬಿಡುಗಡೆ ಮಾಡಿದ್ದಾರೆ.

LifeSpring%2BKan%2B02

ಇದನ್ನೂ ಓದಿ | ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ ವೈರಲ್

ಇದನ್ನೂ ಓದಿ | ಬೆಳಗ್ಗೆ ಏಳುವಷ್ಟರಲ್ಲಿ ಶೂ, ಚಪ್ಪಲಿ ಮಾಯ, ಈ ಜನರ ಗೋಳು ಕೇಳೋಕೆ ಯಾರೂ ಇಲ್ವಾ? ಏನಿದು? ಯಾಕಿಂಗೆ ಆಗ್ತಿದೆ?

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment