SHIVAMOGGA LIVE NEWS, 19 DECEMBER 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ : ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ (Minister) ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು. ಮಹಾನಗರ ಪಾಲಿಕೆಯ ಡಾ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು.
ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸದೇ ಇದ್ದಿದ್ದರೆ ನಾವೆಲ್ಲಾ ದಾಸ್ಯದ ಸಂಕೋಲೆಯಲ್ಲೇ ಇರಬೇಕಿತ್ತು. ಇದನ್ನು ಅರಿಯದ ಅಮಿತ್ ಷಾ ಈ ದೇಶದ ಕೇಂದ್ರ ಗೃಹ ಸಚಿವರಾಗಿರುವುದು ನಮ್ಮೆಲ್ಲರ ದುರ್ದೈವ.
– ಆರ್. ಪ್ರಸನ್ನ ಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ
![]()

ದಾಸ್ಯ, ದೌರ್ಜನ್ಯ, ಶೋಷಣೆಯಲ್ಲೇ ಇದ್ದ ಕೋಟ್ಯಂತರ ಭಾರತೀಯರು ಡಾ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದಾಗಿ ಇಂದು ಸ್ವಾಭಿಮಾನದಿಂದ ಬದುಕುವಂತಾಗಿದೆ. ಈ ದೇಶದ ಇತಿಹಾಸ, ಬಲಿದಾನ ಮಾಡಿದ ನಾಯಕರ ಬಗ್ಗೆ ಅರಿವಿಲ್ಲದೇ ಇರುವಂತಹ ವ್ಯಕ್ತಿ ಅಮಿತ್ ಷಾ. ಅವರು ಕೂಡಲೆ ಸಚಿವ ಸ್ಥಾನದಿಂದ ತೊರೆಯಬೇಕು.
– ಹೆಚ್.ಸಿ.ಯೋಗೇಶ್, ಮಾಜಿ ಕಾರ್ಪೊರೇಟರ್
![]()

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಕಲೀಮ್ ಪಾಷ, ರಮೇಶ್ ಹೆಗಡೆ, ವಿಶ್ವನಾಥ್ ಕಾಶಿ, ಚೇತನ್, ಮಧುಸುಧನ್, ಅಕ್ಬರ್, NSUI ತಾಲೂಕು ಅಧ್ಯಕ್ಷ ಹರ್ಷಿತ್, ನಗರಾಧ್ಯಕ್ಷ ಚರಣ್, ಅಬ್ದುಲ್, ಗೌತಮ್, ಮಲಗುಪ್ಪ ಶಿವು, ಸಕ್ಲೈನ್, ಚಂದ್ರು ಜಿ ರಾವ್, ವರುಣ್ ವಿ ಪಂಡಿತ್, ರಂಗೇನಹಳ್ಳಿ ರವಿ, ಸಾಗರ್, ಜೀವನ್, ಮಂಜು, ಕಾರ್ತಿಕ, ಅಶೋಕ್, ಸುಭಾನ್, ಫಾರೆಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಿವಮೊಗ್ಗಲ್ಲಿ ಅತಿ ದೊಡ್ಡ ಕಾರ್ ಎಕ್ಸ್‌ಚೇಂಜ್ ಮೇಳ
_page-0001.jpg)
ಇದನ್ನೂ ಓದಿ » ಕರ್ನಾಟಕದ 116 ರೈಲುಗಳ ಸಂಖ್ಯೆ ಬದಲು, ಯಾವ್ಯಾವ ರೈಲು? ಇಲ್ಲಿದೆ ಲಿಸ್ಟ್
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





