ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | PROTEST | 12 ಏಪ್ರಿಲ್ 2022
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ NSUI ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಪಂಜಿನ ಮೆರವಣಿಗೆ ಆರಂಭಿಸಿದ NSUI ಕಾರ್ಯಕರ್ತರು ಸಚಿವ ಈಶ್ವರಪ್ಪ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಸಚಿವರ ಕಚೇರಿಗೆ ಮುತ್ತಿಗೆ ಯತ್ನ
ನೆಹರೂ ರಸ್ತೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಚೇರಿ ಇದೆ. ಈ ಕಚೇರಿಗೆ NSUI ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು NSUI ಕಾರ್ಯಕರ್ತರನ್ನು ತಡೆದರು. ಕೆಲವು ಕಾರ್ಯಕರ್ತರು ಗೇಟು ಹಾರಿ ಕಚೇರಿ ಕಾಂಪೌಂಡ್ ಒಳ ನುಗ್ಗಲು ಯತ್ನಿಸಿದರು.
ಘೋಷಣೆ, ರಾಜೀನಾಮೆ ಆಗ್ರಹ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮತ್ತು ಶೇ.40ರಷ್ಟು ಕಮಿಷನ್ ಬೇಡಿಕೆ ಆರೋಪ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು NSUI ಕಾರ್ಯಕರ್ತರು ಆಗ್ರಹಿಸಿದರು. ಆತ್ಮಹತ್ಯೆಗೆ ನೇರ ಕಾರಣವಾಗಿರುವ ಹಿನ್ನೆಲೆ ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
NSUI ಪ್ರಮುಖರಾದ ಚೇತನ್ ಗೌಡ, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, NSUI ಜಿಲ್ಲಾಧ್ಯಕ್ಷ ವಿಜಯ್, ವಿಧಾನ ಪರಿಷತ್ ಮಾಜಿ ಸದದ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಕಾರ್ಪೊರೇಟರ್’ಗಳಾದ ರಮೇಶ್ ಹೆಗ್ಡೆ, ಪ್ರಮುಖರಾದ ಎನ್.ರಮೇಶ್, ಪಲ್ಲವಿ ಸೇರಿ ಹಲವರು ಈ ಸಂದರ್ಭ ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು
















